Advertisement

ನೈಸರ್ಗಿಕ ಸಂಪನ್ಮೂಲ ಕಾಮಗಾರಿ ವೀಕ್ಷಣೆ

11:01 AM Jul 06, 2019 | Suhan S |

ರೋಣ: ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದ ಮೂಲಕ ಬರಗಾಲವನ್ನು ಎದುರಿಸುತ್ತಿರುವ ಜಿಲ್ಲೆಗಳಲ್ಲಿ ನೀರಿ ಸಂರಕ್ಷಣೆಯ ಕುರಿತು ಅಭಿಯಾನವನ್ನು ಮಾಡಲಾಗುವುದು ಎಂದು ಜಲಶಕ್ತ ಅಭಿಯಾನ ಯೋಜನೆಯ ಉಪ ಕಾರ್ಯದರ್ಶಿ ಗದಗ ಜಿಲ್ಲಾ ಬ್ಲಾಕ್‌ ನೊಡೆಲ್ ಅಧಿಕಾರಿ ಅನಿಲಕುಮಾರ ಹೇಳಿದರು.

Advertisement

ತಾಲೂಕಿನ ವಿವಿಧ ಗ್ರಾಮಗಳ ಜಲಶಕ್ತಿ ಹಾಗೂ ಜಲಾಮೃತ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯನ್ನು ವಿಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರವು ಬರಗಾಲದಿಂದ ತತ್ತರಿಸಿರುವ ಜಿಲ್ಲೆಗಳನ್ನು ಗುರುತಿಸಿ ಅಂತಹ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯಿಕರಣ,ಅಂತರ್ಜಲ ಪುನಶ್ಚೇತನ, ಮಳೆ ನೀರು ಸಂಗ್ರಹಣೆ ಕುರಿತಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಇಳಿಜಾರು ಪ್ರದೇಶದಲ್ಲಿ ನೀರು ಹರಿದು ಮಣ್ಣಿನ ಫಲವತ್ತತೆಯೂ ಕಡಿಮೆಯಾಗುತ್ತದೆ. ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಹಳ್ಳ, ಕೊಳ್ಳ, ನದಿಯಲ್ಲಿ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಚೆಕ್‌ ಡ್ಯಾಂ ಗಳನ್ನು ನಿರ್ಮಾಣ ಮಾಡುವ ಮೂಲಕ ನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಾಗುವುದು ಎಂದರು. ತಾಪಂ ಇಒ ಎಂ.ವಿ. ಚಳಗೇರಿ, ಎನ್‌.ಆರ್‌.ಇ.ಜಿ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ, ಸಿದ್ದೇಶ ಕೊಡಿಹಳ್ಳಿ, ಎಂ.ಎಸ್‌.ಜಕ್ಕಣ್ಣವರ, ಜಿಪಂ ಅಭಿಯಂತರರಾದ ಶಂಕರಗೌಡ ಪಾಟೀಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next