Advertisement

ನೈಸರ್ಗಿಕ ಆಮ್ಲಜನಕ ಘಟಕ : ಇಲ್ಲಿದೆ ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಮರಗಳ ವಿವರ

01:24 AM Jun 05, 2021 | Team Udayavani |

ಪರಿಸರ ಸಮತೋಲನಕ್ಕೆ ಮರಗಳ ಕೊಡುಗೆ ಗಣನೀಯವಾದುದು. ಕಾರ್ಬನ್‌ ಡೈ ಆಕ್ಸೆ„ಡ್‌ ಸ್ವೀಕರಿಸಿ ವಾತಾವರಣಕ್ಕೆ ಆಮ್ಲಜನಕ ಬಿಡುಗಡೆ ಮಾಡುವುದಷ್ಟೇ ಅಲ್ಲ ಮಾಲಿನ್ಯಯುಕ್ತ ವಾಯುವನ್ನೂ ಸಸ್ಯಗಳು ಶುದ್ಧಗೊಳಿಸುತ್ತವೆ. ಭಾರತದಲ್ಲಿ ಕಂಡು ಬರುವ ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಮರಗಳ ವಿವರ ಇಲ್ಲಿದೆ.

Advertisement

ಅಶ್ವತ್ಥ ಮರ
ಹಿಂದೂ ಮತ್ತು ಬೌದ್ಧ ಧರ್ಮಗಳಿಗೆ ಅಶ್ವತ್ಥ ಮರ ಪವಿತ್ರವಾದುದು. ಈ ಮರದ ಮೂಲ ಭಾರತ ಉಪಖಂಡ ಎನ್ನಲಾಗುತ್ತಿದೆ. ಭಾರತದಲ್ಲಿ ಕಂಡು ಬರುವ ವೃಕ್ಷಗಳ ಪೈಕಿ ಅಶ್ವತ್ಥ ಮರ ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುತ್ತದೆ ಎನ್ನುತ್ತದೆ ಸಂಶೋಧನೆ. ಇದು ರಾತ್ರಿಯಲ್ಲೂ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅರ್ಜುನ ಮರ
ಭಾರತ ಉಪ ಖಂಡದ‌ಲ್ಲಿ ಸಾಮಾನ್ಯವಾಗಿ ಕಂಡು ಬರುವ ಔಷಧೀಯ ಗುಣಗಳಿರುವ ಮರ ಅರ್ಜುನ ವೃಕ್ಷ. ಇದನ್ನು
ಮತ್ತಿ ಎಂದೂ ಕರೆಯುತ್ತಾರೆ. ಪ್ರಾಚೀನ ಕಾಲದಿಂದಲೂ ಈ ಮರದ ತೊಗಟೆಯನ್ನು ಔಷಧವಾಗಿ ಉಪಯೋಗಿಸುವ
ಪರಿಪಾಠವಿದೆ. ಈ ಮರ ವಾತಾವರಣದಲ್ಲಿನ ಕಲುಷಿತ ವಾಯುವನ್ನು ಹೀರಿ ಶುದ್ಧ ಆಮ್ಲಜನಕವನ್ನು ಹೊರ ಸೂಸುತ್ತದೆ.

ಬಿಲ್ವಪತ್ರೆ
ಹಿಂದೂಗಳ ನಂಬಿಕೆಯ ಪ್ರಕಾರ ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು. ಒಂದು ತೊಟ್ಟಿನಲ್ಲಿ ಮೂರು ಎಲೆಗಳನ್ನು ಹೊಂದಿರುವ ಈ ವೃಕ್ಷ ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಮರಗಳ ಪೈಕಿ ಒಂದು. ಇದರ ಎಲೆ, ಹೂ, ಕಾಯಿ, ಬೇರು ಔಷಧದ ಗುಣ ಹೊಂದಿದೆ.

ಆಲದ ಮರ
ಭಾರತದ ರಾಷ್ಟ್ರೀಯ ವೃಕ್ಷ ಎಂದು ಕರೆಯಲ್ಪ ಡುವ ಆಲದ ಮರವೂ ಗರಿಷ್ಠ ಪ್ರಮಾಣದಲ್ಲಿ ಜೀವ ವಾಯುವನ್ನು ಉತ್ಪಾದಿಸುತ್ತದೆ. ಮೊದಲ ತೀರ್ಥಂಕರ ಆದಿನಾಥ ಅವರಿಗೆ ಈ ಮರದ ಬುಡ ದಲ್ಲಿ ಜ್ಞಾನೋದಯವಾಗಿತ್ತು ಎನ್ನುವ ಪ್ರತೀತಿ ಇದೆ.

Advertisement

ಕಹಿಬೇವು
ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಕಹಿಬೇವಿನ ಮೂಲ ಭಾರತ. ಇದೊಂದು ರೀತಿಯಲ್ಲಿ ನೈಸರ್ಗಿಕವಾದ ವಾಯು ಶುದ್ಧೀಕರಣ ಘಟಕ ಇದ್ದಂತೆ. ಕಾರ್ಬನ್‌ ಡೈ ಆಕ್ಸೆ„ಡ್‌ ಮಾತ್ರವಲ್ಲದೆ ವಾತಾ ವರಣದಲ್ಲಿ ಸೇರಿಕೊಂಡಿರುವ ಸಲ#ರ್‌ ಆಕ್ಸೆ„ಡ್‌, ನೈಟ್ರೋಜನ್‌ ಮುಂತಾದವುಗಳನ್ನು ಹೀರಿ ಅಪಾರ ಪ್ರಮಾಣದಲ್ಲಿ ಆಮ್ಲ ಜನಕವನ್ನು ಹೊರ ಸೂಸುತ್ತದೆ.

ಅಶೋಕ ವೃಕ್ಷ
ಆಕರ್ಷಕ ಹೂವು ಹೊಂದಿರುವ ಅಶೋಕ ವೃಕ್ಷ ಮೂಲತಃ ಭಾರತದ್ದು. ಹಿಂದೂ ಧರ್ಮದಲ್ಲಿ ಇದಕ್ಕೂ ಪವಿತ್ರ ಸ್ಥಾನವಿದೆ. ಅಶೋಕ ಹೂವು ಒಡಿಶಾದ ರಾಜ್ಯ ಪುಷ್ಪ. ಶ್ರೀಲಂಕಾ, ನೇಪಾಲದಲ್ಲೂ ಹೆಚ್ಚಿನ ಪ್ರಮಾಣ ದಲ್ಲಿ ಕಂಡು ಬರುವ ಇದು ಗಾಳಿಯಲ್ಲಿನ ವಿಷಯುಕ್ತ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ.

ಕರಿಬೇವು
ಅಡುಗೆಯ ರುಚಿ ಹೆಚ್ಚಿಸುವ ಕರಿ ಬೇವು ಆರೋಗ್ಯವರ್ಧಕ ಸಸ್ಯವೂ ಹೌದು. ದೇಶಾದ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ಸಸ್ಯ ಔಷಧವಾಗಿಯೂ ಬಳಸಲ್ಪಡುತ್ತದೆ. ಇದರ ಮೂಲವೂ ಭಾರತದ್ದೇ ಎನ್ನಲಾಗುತ್ತದೆ. ಇದು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಬೆಟ್ಟದ ನೆಲ್ಲಿ
ಬೆಟ್ಟದ ನೆಲ್ಲಿಕಾಯಿ ಮರದ ಎಲ್ಲ ಭಾಗಗಳ ಬಳಕೆ ಆಯುರ್ವೇದದಲ್ಲಿ ಕಂಡು ಬರುತ್ತದೆ. ಕೂದಲ ಆರೋಗ್ಯಕ್ಕೂ ನೆಲ್ಲಿಕಾಯಿ ಉತ್ತಮ. ಶಾಯಿ, ಶ್ಯಾಂಪೂ, ಎಣ್ಣೆ ಉತ್ಪನ್ನಗಳ ತಯಾರಿಗೆ ನೆಲ್ಲಿಕಾಯಿಯನ್ನು ಬಳಸಲಾಗುತ್ತದೆ. ಈ ಮರವೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರ ಸೂಸುತ್ತದೆ.

ನೇರಳೆ
ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಮರ ಇದು. ನೇರಳೆ ಹಣ್ಣು ಸ್ವಾದಿಷ್ಟ ಮಾತ್ರವಲ್ಲ ಸಮೃದ್ಧ ಪೌಷ್ಟಿ ಕಾಂಶ ಹೊಂದಿದೆ. ಇದು ಸಲ#ರ್‌ ಆಕ್ಸೆ„ಡ್‌ ಮತ್ತು ನೈಟ್ರೋಜನ್‌ ಹೀರುವ ಸಾಮರ್ಥ್ಯ ಹೊಂದಿದೆ.

ಅತ್ತಿ
ವೇಗವಾಗಿ ಬೆಳೆಯುವ ಅತ್ತಿ ಮರವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಲ್ಲ ಇದು ಅನೇಕ ಔಷಧೀಯ ಗುಣಗಳಿಂದ ಕೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next