Advertisement

ಪ್ರಕೃತಿ ವಿಕೋಪ ಹಾನಿ ವೀಕ್ಷಣೆ

12:40 PM Sep 13, 2018 | |

ಕಾರ್ಕಳ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕಾರ್ಕಳ ತಾಲೂಕಿನ ವಿವಿಧ ಭಾಗಗಳಿಗೆ ಸೆ. 12ರಂದು ಕೇಂದ್ರದ ಸಮೀಕ್ಷಾ ಅಧ್ಯಯನ ತಂಡ ಭೇಟಿ ನೀಡಿತು. ತಿಂಗಳ ಹಿಂದೆ ಗಾಳಿ-ಮಳೆಯಿಂದಾಗಿ ಹಾನಿಗೀಡಾಗಿದ್ದ ಕುಕ್ಕುಂದೂರು ಜಯಂತಿ ನಗರದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ಮಾಡಿದರು. ಸದ್ಯ ಆ ಶಾಲೆಯನ್ನು ಕೆಡವಿ ಹಾಕಲಾಗಿದ್ದು, ಅಧಿಕಾರಿಗಳು ಶಾಲೆಯ ಕಟ್ಟಡದ ಚಿತ್ರಗಳನ್ನು ವೀಕ್ಷಿಸಿದ್ದಾರೆ.

Advertisement

ಕೇಂದ್ರ ಆರ್ಥಿಕ ಸಚಿವಾಲಯದ ವೆಚ್ಚ ವಿಭಾಗದ ಉಪ ಕಾರ್ಯದರ್ಶಿ ಭರತೇಂದು ಕುಮಾರ್‌ ಸಿಂಗ್‌, ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಮಾಣಿಕ್‌ ಚಂದ್ರ ಪಂಡಿತ್‌, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಸಮೀಕ್ಷಾ ತಂಡದಲ್ಲಿದ್ದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪು ಎಸಿ ಭೂಬಾಲನ್‌ ಶಾಸಕ ವಿ. ಸುನಿಲ್‌ ಕುಮಾರ್‌, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ, ಪುರಸಭೆಯ ಮುಖ್ಯಾಧಿಕಾರಿ ಮೇಬಲ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ರೆಂಜಾಳ-ನೆಲ್ಲಿಕಾರು ರಸ್ತೆ, ಈದು ಗ್ರಾಮದ ಕಾಲುಸಂಕ, ಮುಡಾರು, ಮಿಯ್ನಾರು, ನೂರಲ್‌ಬೆಟ್ಟು ಮೊದಲಾದ ಭಾಗಗಳಿಗೆ ಭೇಟಿ ನೀಡಿ ಅಲ್ಲಿ ಕೃಷಿ, ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗಿರುವುದನ್ನೂ ತಂಡ ಪರಿಶೀಲನೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next