Advertisement

ಪ್ರಾಮಾಣಿಕ ಸೇವಕರಿಗೆ ಸಂಕಷ್ಟಗಳು ಸಹಜ

04:31 PM Apr 15, 2017 | Team Udayavani |

ಹೊಳೆನರಸೀಪುರ: ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಸಂಕಷ್ಟಗಳು ಎದುರಾಗುವುದು ಸಹಜ, ಆದರೆ ಅದನ್ನು ನಿರ್ಭಯವಾಗಿ ಎದುರಿಸಬೇಕು ಎಂದು ಮಾಜಿ ಸಚಿವ ಹಾಗು ಶಾಸಕ ಎಚ್‌.ಡಿ.ರೇವಣ್ಣ ನುಡಿದರು.

Advertisement

ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜಕಲ್ಯಾಣ ಇಲಾಖೆ, ಪುರಸಭೆ ಸಂಯುಕ್ತಾಶ್ರಯದಲ್ಲಿ ಸಂವಿಧಾನಶಿಲ್ಪಿ$ ಡಾ.ಬಿ.ಆರ್‌. ಅಂಬೇಡ್ಕರ್‌ 126 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಮೀಸಲಾತಿಯೇ ಇಲ್ಲದ ಸಮಯದಲ್ಲಿ ತಾವು ಜಿಪಂ ಸದಸ್ಯರಾದ ಅವಧಿಯಲ್ಲಿ ಅಂದೇ ಪರಿಶಿಷ್ಟ ವರ್ಗದ ಸದಸ್ಯರನ್ನು ಮಾಜಿ ಪ್ರಧಾನಿ ದೇವೇಗೌಡ ಅಧ್ಯಕ್ಷರಾಗಿ ಮಾಡಿದ ಇತಿಹಾಸ ನಮ್ಮಲ್ಲಿದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಶೇ 4 ರಷ್ಟು ಮಂದಿ ಶ್ರೀಮಂತರಿದ್ದು ಉಳಿದ ಶೇ 96 ಮಂದಿ ಬಡವರು , ಮದ್ಯಮ ವರ್ಗದವರು ಇದ್ದು ಈಗಲೂ ಸಹ ಇಡೀ ದೇಶ ಆ ಶ್ರೀಮಂತರ ಹಿಡಿತದಲ್ಲಿದೆ, ಸಾಮಾಜಿಕ ನ್ಯಾಯದೊರೆವ ವರೆಗೆ ನೆಮ್ಮದಿ ಸಾಧ್ಯವಿಲ್ಲ ಎಂದು ಹೇಳಿದ್ದರು.

ತಾಲೂಕಿನ ಕೆರಗೋಡು ಗ್ರಾಮದ ದಲಿತ ಯುವಕ ಸ್ಪ$ರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರಿಂದ ಇಂದು ಆತ ಉನ್ನತ ಹುದ್ದೆಯಲ್ಲಿ ಇರಲು ಕಾರಣ ಅಂಬೇಡ್ಕರ್‌ ನೀಡಿದ ಸಂವಿಧಾನ.ಅಂಬೇಡ್ಕರ್‌ ಕೇವಲ ದಲಿತ ವರ್ಗಕ್ಕೆ ಸೀಮಿತವಾಗಿಲ್ಲ. ಅವರ ಆದರ್ಶಗಳಿಗೆ ಬೆಲೆಕೊಟ್ಟು ನಡೆಯಬೇಕಿದೆ. ಶಾಸಕ ರೇವಣ್ಣ ಅವರ ಭಾಷಣ ಆರಂಭಕ್ಕೆ ಮೊದಲು ಅಂಬೇಡ್ಕರ್‌ ಕುರಿತು ಮೈಸೂರಿನ ಡಾ.ಅಂಬೇಡ್ಕರ್‌ ಖ್ಯಾತ ವಿಚಾರವಾದಿ ಎ.ಜಿ.ಜಯರಾಂ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌, ತಾಲೂಕು ಕೃಷಿ ಮಾರುಕಟ್ಟೆಅಧ್ಯಕ್ಷ ಸಾಂಬಶಿವಪ್ಪಹಾಗು ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಡಿ. ಚಂದ್ರಶೇಖರ್‌ ಮಾತನಾಡಿದರು.  ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಅಂಬೇಡ್ಕರ್‌ ನಗರದಿಂದ ಮೆರವಣಿಗೆ ಹೊರಟು ಕೋಟೆ , ಗಾಂದಿವೃತ್ತ, ಹೊಳೆ ಬೀದಿ, ಮುಖ್ಯ ರಸ್ತೆ , ಅಂಬೇಡ್ಕರ್‌ ವೃತ್ತ ಮೂಲಕ ವೇದಿಕೆಗೆ ಬರಲಾಯಿತು.

Advertisement

ಜಿಪಂ ಸದಸ್ಯ ಪ್ರಸನ್ನ, ಎಪಿಎಂಸಿ ಉಪಾಧ್ಯಕ್ಷ ರಂಗಸ್ವಾಮಿ, ದಲಿತ ಮುಖಂಡರುಗಳಾದ ಎಚ್‌.ವೈ.ಚಂದ್ರಶೇಖರ್‌, ನಾಗಲಾಪುರ ನಾಗೇಂದ್ರ, ಪುರಸಭೆ ಸದಸ್ಯ ಎಚ್‌.ಎಸ್‌.ಸ್ವಾಮಿ, ರಘುರಾಂ, ಇಒ ತಮ್ಮಣ್ಣೇಗೌಡ, ವೈದ್ಯ ಟಿ.ಎಸ್‌.ಲಕ್ಷಿಕಾಂತ್‌, ತಾಲೂಕು ಪಂಚಾಯ್ತಿ ಸದಸ್ಯರುಗಳಾದ ಸಂಕನಹಳ್ಳಿ ಚಂದ್ರ, ಮಲ್ಲಪ್ಪನಹಳ್ಳಿ ರಾಜೇಶ್ವರಿ ಸೇರಿದಂತೆ ಅನೇಕ ಮುಖಂಡರು, ದಲಿತರು ಹಾಜರಿದ್ದರು. ಇದೇ ಸಂದ¸‌ìದಲ್ಲಿ ಪರಿಶಿಷ್ಟವರ್ಗ ಮತ್ತು ಜಾತಿಯ ಎಸ್ಸೆಸ್ಸೆಲ್ಸಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅನ್ನು ಶಾಸಕ ರೇವಣ್ಣ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next