ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳಗ ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್ ನ ಜನವಸತಿ ಪ್ರದೇಶಗಳ ಮೇಲೂ ದಾಳಿ ನಡೆಸುತ್ತಿದೆ. ಉಕ್ರೇನ್ ನಿಂದ ಲಕ್ಷಾಂತರ ಜನರು ಹೊರಟು ನಿಂತಿದ್ದಾರೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಯ ನ್ಯಾಟೋ ರಾಷ್ಟ್ರಗಳ ವಿರುದ್ಧವೇ ಕಿಡಿಕಾರಿದ್ದಾರೆ.
‘ರಷ್ಯಾ ಜೊತೆಗಿನ ಹೋರಾಟಕ್ಕೆ ನ್ಯಾಟೋ ಹೆದರುತ್ತಿದೆ’ ಎಂದು ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ ಎಂದು ಹೇಳಿದರು. ಉಕ್ರೇನ್ ನ ನ್ಯಾಟೋ ಸದಸ್ಯ್ವದ ಇಚ್ಛೆಯು ರಷ್ಯಾದ ದಾಳಿಯ ಪ್ರಮುಖ ಕಾರಣಗಳಲ್ಲಿ ಒಂದು. ಆದರೆ ಇದೀಗ ನ್ಯಾಟೋ ರಾಷ್ಟ್ರಗಳಿಂದ ಬೇಸತ್ತಿರುವ ಝೆಲೆನ್ಸ್ಕಿ ಅವರ ವಿರುದ್ಧವೇ ಕಿಡಿಕಾರಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಮಾನವೀಯ ಕಾರಿಡಾರ್‌ಗಳ ವಿಸ್ತರಣೆಗೆ ಕರೆ ನೀಡಿದರು. ಹೊಸ ವೀಡಿಯೊ ಬಿಡುಗಡೆ ಮಾಡಿರುವ ಝೆಲೆನ್ಸ್ಕಿ, ರಷ್ಯಾದ ಆಕ್ರಮಣವನ್ನು ವಿರೋಧಿಸಲು ತಮ್ಮ ಜನರನ್ನು ಒತ್ತಾಯಿಸಿದರು.
ಇದನ್ನೂ ಓದಿ:ಉಕ್ರೇನ್ ನಲ್ಲಿ ರಕ್ಷಣೆ ಮಾಡಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಪಾಕಿಸ್ಥಾನದ ಹುಡುಗಿ
ವಿಶೇಷ ವಿಮಾನದಲ್ಲಿ ಉಕ್ರೇನ್ ನಿಂದ ಗಂಭೀರ ಆರೋಗ್ಯ ಪರಿಸ್ಥಿತಿಯಲ್ಲಿರುವ 11 ಮಕ್ಕಳನ್ನು ಇಸ್ರೇಲ್ ಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಷ್ನೇಯ್ಡರ್ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಉಕ್ರೇನ್ ವಿರುದ್ಧದ ಯುದ್ಧಕ್ಕೆ ಪ್ರತೀಕಾರವಾಗಿ ಯುಎಸ್ ರಷ್ಯಾದ ತೈಲ ಆಮದುಗಳ ಮೇಲೆ ನಿಷೇಧವನ್ನು ಘೋಷಿಸಿದೆ.