Advertisement

ರಾಷ್ಟ್ರ ಮಟ್ಟದ ಕೌಶಲ ವೃದ್ಧಿ ಕೇಂದ್ರ ಅಗತ್ಯ: ಖಾದರ್‌

11:25 PM Sep 16, 2019 | mahesh |

ಮಂಗಳೂರು: ಐಐಎಂ, ಐಐಟಿ ಇರುವಂತೆ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಸ್ಕಿಲ್‌ ಡೆವಲಪ್‌ಮೆಂಟ್‌ ಸಂಸ್ಥೆಯೊಂದನ್ನು ಸ್ಥಾಪಿಸಲು ಸರಕಾರ ಮುಂದಾಗಬೇಕು. ಇದಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ನ್ಯಾಶನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕೋರ್ಪರೇಶನ್‌ನ ಸಹಯೊಗದಲ್ಲಿ ನಗರದ “ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್ ಫೈರ್‌ ಆ್ಯಂಡ್‌ ಸೇಫ್ಟಿ ಎಂಜಿನಿ ಯರಿಂಗ್‌’ (ಎಂಐಎಫ್ಎಸ್‌ಇ) ಸಂಸ್ಥೆಯಡಿ “ಸ್ಕಿಲ್‌ ಇಂಡಿಯಾ’ ಯೋಜನೆಗೆ ಸೋಮವಾರ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಶ್ಲಾಘನಾರ್ಹ ಕಾರ್ಯ
ಜಿಲ್ಲೆಯಲ್ಲಿರುವ ವಿವಿಧ ಕೌಶಲ ಕೇಂದ್ರಗಳ ಪ್ರಗತಿ ಪರಿಶೀಲನೆ ಆಗಬೇಕಿದೆ. ಆ ಮೂಲಕ ಈ ಕೌಶಲ ಕೇಂದ್ರಗಳು ಎಷ್ಟು ಮಂದಿಗೆ ಕೌಶಲ ತರಬೇತಿ ನೀಡಿವೆ. ಎಷ್ಟು ಮಂದಿ ಅದರ ಪ್ರಯೋಜನ ಪಡೆದಿದ್ದಾರೆ ಮತ್ತು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಈ ಕೇಂದ್ರಗಳು ಏನೇನು ಮಾಡಿವೆ ಎಂಬ ಬಗ್ಗೆ ಸಮಗ್ರ ಮಾಹಿತಿ ಪಡೆಯುವ ಅಗತ್ಯವಿದೆ. ಅದಕ್ಕಾಗಿ ಶೀಘ್ರ ಕೌಶಲ ಕೇಂದ್ರಗಳ ಪ್ರಗತಿ ಪರಿಶೀಲನೆಗೆ ಆದ್ಯತೆ ನೀಡಲಾಗುವುದು. ಎಂಐಎಫ್‌ಎಸ್‌ಇಯು ರಾಜ್ಯದ ಸಾವಿರ ಮಂದಿಗೆ ಉಚಿತವಾಗಿ ಡಿಪ್ಲೊಮಾ ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿ.ವಿ. ಕುಲಪತಿ ಡಾ| ಪಿ.ಎಸ್‌. ಎಡಪಡಿತ್ತಾಯ ಮಾತನಾಡಿ, ಮಾರುಕಟ್ಟೆಯ ಆವಶ್ಯಕತೆಗೆ ತಕ್ಕಂತೆ ಉದ್ಯೋಗಿಗಳಲ್ಲಿ ಕೌಶಲಗಳನ್ನು ತುಂಬುವ ಈ ವೃತ್ತಿ ಕೌಶಲ ತರಬೇತಿ ಯೋಜನೆ ನಿಜಕ್ಕೂ ಶ್ಲಾಘನೀಯ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ‘ಸ್ಕಿಲ್‌ ಇಂಡಿಯಾ’ ಯುವಜನತೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೋಟ್ಯಂತರ ನಿರುದ್ಯೋಗಳಿಗೆ ಜೀವನಾಧಾರವಾಗಲಿದೆ ಎಂದು ಹೇಳಿದರು.

Advertisement

ಮೈಸೂರಿನ ಕರ್ನಾಟಕ ಮುಕ್ತ ವಿ.ವಿ. ನಿವೃತ್ತ ಡೀನ್‌ ಜಗದೀಶ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಕಾರ ರಘುವೀರ್‌ ಸೂಟರ್‌ಪೇಟೆ, ಎನ್‌ಎಸ್‌ಡಿಸಿ ಸಂಸ್ಥೆಯ ರಜತ್‌ ಸಚ್‌ದೇವ್‌, ಪ್ರಾಂಶುಪಾಲ ಯಶವಂತ ಗೋಪಾಲ್‌ ಶೆಟ್ಟಿ ಉಪಸ್ಥಿತರಿದ್ದರು.

ಎಂಐಎಫ್‌ಎಸ್‌ಇ ಕಾರ್ಯದರ್ಶಿ ಪಿ.ವಿ. ಮನೋಜ್‌ ವಂದಿಸಿದರು. ವೆನಿಲ್ಡಾ ಫ‌ುರ್ಟಾಡೊ ಕಾರ್ಯಕ್ರಮ ನಿರ್ವಹಿಸಿದರು.

1 ಸಾವಿರ ಮಂದಿಗೆ ಕೌಶಲ ತರಬೇತಿ
ಎಂಐಎಫ್‌ಎಸ್‌ಇ ಚೇರ್ಮನ್‌ ವಿನೋದ್‌ ಕೆ. ಜಾನ್‌ ಮಾತನಾಡಿ, ಸಂಸ್ಥೆ ವತಿಯಿಂದ ರಾಜ್ಯದ ಒಂದು ಸಾವಿರ ಮಂದಿಗೆ ಉಚಿತವಾಗಿ ಎರಡು ತಿಂಗಳ ಶಾರ್ಟ್‌ ಟರ್ಮ್ ಅಡ್ವಾನ್ಸ್‌ ಡಿಪ್ಲೊಮಾ ಇನ್‌ ಫೈರ್‌ ಸೇಫ್ಟಿ
ತರಬೇತಿ ನೀಡ ಲಾಗುತ್ತದೆ. ಬೆಂಗಳೂರು ಮತ್ತು ಮಂಗಳೂರು ಕೇಂದ್ರಗಳಲ್ಲಿ ತಲಾ 200, ಮೈಸೂರು, ಹುಬ್ಬಳ್ಳಿ ಮತ್ತು ತುಮಕೂರು ಕೇಂದ್ರಗಳಲ್ಲಿ ತಲಾ 100, ಬೆಳಗಾವಿ, ದಾವಣಗೆರೆ, ಉಡುಪಿ, ಹೊಸಪೇಟೆ, ಶಿವಮೊಗ್ಗ ಕೇಂದ್ರಗಳಲ್ಲಿ ತಲಾ 50 ಅಭ್ಯರ್ಥಿಗಳಿಗೆ ಉಚಿತ ತರಬೇತಿ ಹಂಚಿಕೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next