Advertisement

ಹೂಳು ತುಂಬಿಕೊಂಡ ಕಾರಣ ವಿದ್ಯುತ್ ಉತ್ಪಾದನೆಗೆ ತಡೆ

09:53 AM Aug 19, 2019 | Team Udayavani |

ಶಿಮ್ಲಾ: ಸಟ್ಲೇಜ್ ನದಿಯ ಉಪನದಿ ಭಾಬಾ ಖಾಡ್ ನದಿಯಲ್ಲಿ ಹೂಳಿನ ಮಟ್ಟ ಹೆಚ್ಚಾಗಿರುವುದರಿಂದ ಹಿಮಾಚಲ ಪ್ರದೇಶದಲ್ಲಿರುವ ದೇಶದ ಅತೀದೊಡ್ಡ ಭೂಮಿ ಅಡಿ ಬಾಗದಲ್ಲಿ ಕಾರ್ಯ ನಿರ್ವಹಿಸುವ ಜಲವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅನಿವಾರ್ಯತೆಗೆ ಘಟಕದ ಅಧಿಕಾರಿಗಳು ಸಿಲುಕಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ನದೀ ಪಾತ್ರವಿರುವ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ನದಿಯಲ್ಲಿ ಮಣ್ಣಿನ ಮಟ್ಟ ಹೆಚ್ಚು ತುಂಬಿಕೊಂಡಿದೆ. ಹೀಗಾಗಿ 1500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಕಾರ್ಯದ ಜೊತೆಗೆ 421 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಕಾರ್ಯವನ್ನೂ ಸಹ ಆದಿತ್ಯವಾರದಂದು ರದ್ದುಗೊಳಿಸಲಾಗಿದೆ.

ಕಿನ್ನೌರ್ ಜಿಲ್ಲೆಯಲ್ಲಿರುವ ನಾತ್ಪಾ ಝಾಕ್ರಿ ಆಣೆಕಟ್ಟು ಭಾಗದಲ್ಲಿ ಸಟ್ಲೇಜ್ ನದಿಯಲ್ಲಿ ಹೂಳಿನ ಮಟ್ಟ 8000 ಪಿಪಿಎಂ (ಪ್ರತೀ ಮಿಲಿಯನ್ ನಲ್ಲಿ ಒಂದು ಭಾಗ) ಮಟ್ಟವನ್ನು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಟ್ಟ 5000 ಪಿಪಿಎಂಗೆ ಬರದ ಹೊರತಾಗಿ ಇಲ್ಲಿ ವಿದ್ಯುತ್ ಉತ್ಪಾದನೆ ಅಸಾಧ್ಯವಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆಯಾಗಿದೆ. ಅಲ್ಲಿಯವರೆಗೆ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಬೇರೆ ವಿಧಿಯಿಲ್ಲ ಎಂದು ಜಲವಿದ್ಯುತ್ ಯೋಜನಾ ಘಟಕದ ಮುಖ್ಯಸ್ಥ ಸಂಜೀವ್ ಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next