Advertisement

National Youth Day; “ವೈಜ್ಞಾನಿಕ ಮನೋಭಾವ, ಆಧ್ಯಾತ್ಮಿಕ ಜೀವನದಿಂದ ಪೂರ್ಣತ್ವ’

12:15 AM Jan 13, 2024 | Team Udayavani |

ಮಂಗಳೂರು: ತರ್ಕಬದ್ಧ ಚಿಂತನೆ, ವೈಜ್ಞಾನಿಕ ಮನೋಭಾವ, ಆಧ್ಯಾತ್ಮಿಕ ಚಿಂತನೆಗಳನ್ನು ಪ್ರತಿಯೊ ಬ್ಬರೂ ಅಳವಡಿಸಿಕೊಳ್ಳಬೇಕು. ಇದರಿಂದ ಮನುಷ್ಯ ಪರಿಪೂರ್ಣತೆ ಹೊಂದಲು ಸಾಧ್ಯ. ಇದು ಸ್ವಾಮಿ ವಿವೇಕಾನಂದರ ವರ್ಚಸ್ಸು ಆಗಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ ಹೇಳಿದರು.

Advertisement

ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಮಠದ ಶ್ರೀ ಸ್ವಾಮಿ ವಿವೇಕಾನಂದ ಆಡಿಟೋರಿಯಂನಲ್ಲಿ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಾಹಿತಿಯ ಯುಗದಲ್ಲಿ ನಾವಿದ್ದು, ತಿಳಿದುಕೊಳ್ಳುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಯುವಜನತೆ ನಮ್ಮ ರಾಷ್ಟ್ರದ ಭವಿಷ್ಯ. ಮಾನವಶಕ್ತಿ ಸಂಪೂರ್ಣ ಬಳಕೆಯಾಗುವ ರೀತಿ ಶಿಕ್ಷಣ ನೀಡಬೇಕು. ಪುಸ್ತಕದ ಹೊರತಾಗಿ ನೈತಿಕತೆ, ಮಾನವೀಯತೆ, ಆಧ್ಯಾತ್ಮಿಕತೆ ಶಿಕ್ಷಣ ಪಡೆದರೆ ಪರಿಪೂರ್ಣ ವ್ಯಕ್ತಿಯಾ ಗಲು ಸಾಧ್ಯ ಎಂದರು.

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ಮಹಾರಾಜ್‌ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವ ಸಮೂಹಕ್ಕೆ ಮಾದರಿ. ಭಾರತ ಬಲಿಷ್ಠ ಯುವ ಸಮುದಾಯವನ್ನು ಹೊಂದಿದ್ದು, ಮೂರರಲ್ಲಿ ಒಬ್ಬ ಯುವಕ ನನ್ನು ಕಾಣಬಹುದು ಎಂದರು.

ರಾಮಕೃಷ್ಣ ವೇದಾಂತ ಸೆಂಟರ್‌ ಲಂಡನ್‌ನ ಮುಖ್ಯಸ್ಥ ಸ್ವಾಮಿ ಸರ್ವಸ್ಥಾನಂದ ಜೀ, ವಿಧಾನಪರಿಷತ್‌ ಸದಸ್ಯರಾದ ಡಾ| ಮಂಜುನಾಥ ಭಂಡಾರಿ, ಹರೀಶ್‌ ಕುಮಾರ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌, ಎನ್‌ಐಟಿಕೆ ಸುರತ್ಕಲ್‌ ನಿರ್ದೇಶಕ ಪ್ರೊ| ಬಿ. ರವಿ ಇದ್ದರು.

Advertisement

ಯುವ ಸಾಧಕರೊಂದಿಗೆ ಸಂವಾದ, ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಠಿ ನಡೆಯಿತು.ಮಂಗಳೂರು ವಿ.ವಿ. ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ| ಚಂದ್ರು ಹೆಗ್ಡೆ, ತಂತ್ರಜ್ಞ ಪ್ರವೀಣ್‌ ಉಡುಪ, ಸಾಮಾಜಿಕ ಜಾಲತಾಣದ ಅರುಣ್‌ ಪ್ರಭು ಅವರನ್ನು ಗೌರವಿಸ ಲಾಯಿತು.

ವಿಧಾನಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು. ರಾಮಕೃಷ್ಣ ಮಿಷನ್‌ ಮಂಗಳೂರಿನ ಸಂಯೋಜಕ ರಂಜನ್‌ ಬೆಳ್ಳರ್ಪಾಡಿ, ರೆಜಿನಾ ದಿನೇಶ್‌ ನಿರೂಪಿಸಿದರು.

ಉಡುಪಿಯಲ್ಲಿ ಆಚರಣೆ
ಉಡುಪಿ: ಜಿಲ್ಲಾಡಳಿತ, ಜಿ.ಪಂ., ಭಾರತೀಯ ರೆಡ್‌ ಕ್ರಾಸ್‌ ಜಿಲ್ಲಾ ಘಟಕ, ಎನ್ನೆಸ್ಸೆಸ್‌ ಆಶ್ರಯದಲ್ಲಿ ಅಜ್ಜರಕಾಡು ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ಅವರು ಉದ್ಘಾಟಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next