ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ದಾನದ ಪಾತ್ರ ಅತ್ಯಂತ ಮಹತ್ತರವಾ ದುದು. ಮತದಾನ ಜನರ ಮೂಲಭೂತ ಹಕ್ಕಾಗಿದ್ದು, ಪ್ರಜೆಗಳಿಂದ ಆಯ್ಕೆಯಾದ ಸರಕಾರ ಜನರ ಆಶೋತ್ತರಗಳಿಗೆ ತಕ್ಕಂತೆಯೇ ನಡೆಯಬೇಕೆಂಬುದು ಸಂವಿಧಾನದ ಆಶಯವಾಗಿದೆ.
ಮತದಾನದ ಮಹತ್ವ ಮತ್ತು ಪ್ರಜೆ ಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. “ಸಶಕ್ತ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿಯುಳ್ಳ ಮತದಾರ’ ಈ ವರ್ಷದ ರಾಷ್ಟ್ರೀಯ ಮತದಾರರ ದಿನದ ಧ್ಯೇಯ.
ಜನವರಿ 25ರಂದೇ ಯಾಕೆ? : ಭಾರತೀಯ ಚುನಾವಣ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. 1950ರ ಜನವರಿ 25ರಂದು ಈ ಆಯೋಗ ಸ್ಥಾಪನೆಯಾಯಿತು. 2011 ಜನವರಿ 25ರಂದು “ರಾಷ್ಟ್ರೀಯ ಮತದಾರರ ದಿನ’ ಎಂದು ಘೋಷಿಸಿ ಕಡ್ಡಾಯ ಮತದಾನ ಮತ್ತು ಮತದಾ ನದ ಪಾವಿತ್ರ್ಯದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಬರಲಾಗಿದೆ. ಆದರೆ ಮತದಾನದ ಒಟ್ಟು ಪ್ರಮಾಣ ಶೇ. 80ರ ಗಡಿ ದಾಟದಿರುವುದು ದೇಶವನ್ನು ಕಾಡುತ್ತಿ ರುವ ಮುಖ್ಯ ಸವಾಲಾಗಿದೆ.
ಡಿಜಿಟಲ್ ಕಾರ್ಡ್ ಬಿಡುಗಡೆ: ಚುನಾವಣ ಆಯೋಗವು ಇ- ಎಪಿಕ್ (ಡಿಜಿಟಲ್ ಗುರುತಿನ ಚೀಟಿ) ಕಾರ್ಡ್ ಗಳನ್ನು ಸೋಮವಾರ ಬಿಡುಗಡೆ ಮಾಡಲಿದೆ. e-EPIC ಎಂಬುದು ಸುರಕ್ಷಿತ ಪೋರ್ಟೆಬಲ್ ಡಾಕ್ಯು ಮೆಂಟ್ ಫಾರ್ಮ್ಯಾಟ್ (PDF) ಆವೃತ್ತಿಯಾಗಿದೆ. ಇದನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಈಗಿನ ಮಾಹಿತಿ ಪ್ರಕಾರ ಎರಡು ಹಂತಗಳಲ್ಲಿ ಇ-ಎಪಿಕ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ e-EPIC ಅನ್ನು Voter Helpline ಮೊಬೈಲ್ ಆ್ಯಪ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ
https://eci.gov.in ಇಲ್ಲಿಯೂ ಪಡೆದುಕೊಳ್ಳಬಹುದು. ಮೊಬೈಲ್ ಸಂಖ್ಯೆ ಲಿಂಕ್ ಮಾಡಿದವರು ಇ-ಎಪಿಕ್ ಡೌನ್‌ಲೋಡ್ ಮಾಡಿಕೊಳ್ಳಬಹುದು.