Advertisement

ನ.2ರಿಂದ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ

10:37 PM Oct 20, 2019 | Lakshmi GovindaRaju |

ಹೊಸದುರ್ಗ: ಸಿರಿಗೆರೆ ತರಳಬಾಳು ಮಠದ ಶಾಖಾಮಠ ವಾದ ಸಾಣೇಹಳ್ಳಿಯಲ್ಲಿ ನ.2ರಿಂದ 7ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಸಿರಿಗೆರೆಯ ಡಾ|ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ “ನೊಂದವರ ನೋವ ನೋಯದವರೆತ್ತ ಬಲ್ಲರೊ’ ಎನ್ನುವ ಧ್ಯೇಯವಾಕ್ಯದಡಿಯಲ್ಲಿ ಈ ವರ್ಷದ ನಾಟಕೋತ್ಸವ ನಡೆಯಲಿದೆ. ನಾಟಕೋತ್ಸವದಲ್ಲಿ ಒಟ್ಟು 11 ನಾಟಕಗಳು ಪ್ರದರ್ಶನಗೊಳ್ಳಲಿವೆ.

Advertisement

ಕನ್ನಡ ರಾಜ್ಯೋತ್ಸವ, ವಿಚಾರ ಸಂಕಿ ರಣ, ಶಿವಕುಮಾರ ಪ್ರಶಸ್ತಿ ಪ್ರದಾನ, ಕೃತಿಗಳಲೋಕಾರ್ಪಣೆ, ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನ, ವಚನಗೀತೆ, ನೃತ್ಯ ರೂಪಕಗಳು, ಉಪನ್ಯಾಸ, ಅಭಿನಂದನೆ, ಆಶೀರ್ವಚನ… ಹೀಗೆ ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ವಿವಿಧ ಮಠಾ ಧೀಶರು, ಸಿಎಂ ಯಡಿಯೂರಪ್ಪ, ರಾಜ್ಯ ಹಾಗೂ ಕೇಂದ್ರ ಸಚಿವರು, ಜನಪ್ರತಿನಿ ಧಿಗಳು, ಸಾಹಿತಿಗಳು, ಚಿಂತಕರು, ರಂಗ ನಿರ್ದೇಶಕರು ಕಲಾವಿದರು ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next