Advertisement

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

10:59 AM May 28, 2022 | Team Udayavani |

ಪಣಂಬೂರು: ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ ಮತ್ತು ಮಂತ್ರ ಸರ್ಫ್‌ ಕ್ಲಬ್‌ ಸಹಭಾಗಿತ್ವದಲ್ಲಿ ಪಣಂಬೂರು ಕಡಲ ತೀರದಲ್ಲಿ ಮೇ 29ರ ವರೆಗೆ ನಡೆಯುವ ರಾಷ್ಟ್ರೀಯ ಸರ್ಫಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ಶುಕ್ರವಾರ ನವಮಂಗಳೂರು ಬಂದರು ಅಥಾರಿಟಿಯ ಚೇರ್ಮನ್‌ ಡಾ| ಎ. ವಿ. ರಮಣ ಚಾಲನೆ ನೀಡಿದರು.

Advertisement

ಗ್ರೋಮ್ಸ್‌ ಕಿಶೋರ್‌ ಕುಮಾರ್‌ ಪ್ರಥಮ ದಿನ 14.50 ಅತ್ಯಧಿಕ ಅಂಕದೊಂದಿಗೆ ಸೆಮಿಫೆ„ನಲ್‌ಗೆ ಪ್ರವೇಶಿಸಿ ಸರ್ಫಿಂಗ್‌ ಕ್ರೀಡಾಸಕ್ತರನ್ನು ಬೆರಗುಗೊಳಿಸಿದರು.

ಹೆಚ್ಚಿನ ಅಂಕ ಪಡೆದ ಇತರ ಸಫìರ್‌ಗಳೆಂದರೆ ಮಣಿಕಂದನ್‌ ಡಿ. (12.6), ರಮೇಶ್‌ ಬುಧಿಯಾಲ್‌ (12.33), ಸೂರ್ಯ ಪಿ. (11.9), ಸತೀಶ್‌ ಸರವಣನ್‌ (11.9) ಮತ್ತು ಅಜೀಶ್‌ ಅಲಿ (11.66). ಮೊದಲ ದಿನ ತಮಿಳುನಾಡಿನ ಸಫìರ್‌ಗಳು ಪುರುಷರ ಮುಕ್ತ ವಿಭಾಗ ಮತ್ತು ಗ್ರೋಮ್ಸ್‌ ಅಂಡರ್‌-16 ವಿಭಾಗಗಳೆರಡರಲ್ಲೂ ಪ್ರಾಬಲ್ಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next