Advertisement

ರಾಷ್ಟ್ರೀಯ ಶೂಟಿಂಗ್‌:ಮನು ಭಾಕರ್‌ಗೆ ಸೋಲುಣಿಸಿದ 13ರ ಹುಡುಗಿ!

06:45 AM Dec 01, 2018 | |

ಕೊಚ್ಚಿ: ಕೇರಳದಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 13 ವರ್ಷದ ತೆಲಂಗಾಣ ಹುಡುಗಿ ಇಶಾ ಸಿಂಗ್‌ ಕಾಮನ್‌ವೆಲ್ತ್‌ ಗೇಮ್ಸ್‌, ವಿಶ್ವಕಪ್‌ ಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ತಾರಾ ಶೂಟರ್‌ ಮನು ಭಾಕರ್‌ರನ್ನು ಸೋಲಿಸಿ 3 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

Advertisement

ಮಹಿಳಾ ವಿಭಾಗದ 10 ಮೀ. ಏರ್‌ ಪಿಸ್ತೂಲ್‌,  ಕಿರಿಯರ ವಿಭಾಗ ಹಾಗೂ ಯೂತ್‌ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಇಶಾ ಸಿಂಗ್‌ ಭಾರತದ ಶ್ರೇಷ್ಠ ಶೂಟರ್‌ ಮನು ಭಾಕರ್‌ಗೆ ಮಣಿಸಿದರು. ಮೂರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮನು ಭಾಕರ್‌ 2 ಬೆಳ್ಳಿ ಹಾಗೂ 1 ಕಂಚಿನ ಪದಕಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು.

ಮಹಿಳಾ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಇಶಾ 241.0, ಜೂನಿಯರ್‌ ವಿಭಾಗದಲ್ಲಿ 239.3 ಹಾಗೂ ಯೂತ್‌ ವಿಭಾಗದಲ್ಲಿ 240.9 ಅಂಕವನ್ನು ಪಡೆದುಕೊಂಡರು.  ಮನು ಭಾಕರ್‌ ಕ್ರಮವಾಗಿ 238.9, 238.2 ಹಾಗೂ 216.3 ಅಂಕ ಪಡೆಯಲಷ್ಟೇ ಶಕ್ತರಾದರು.

Advertisement

Udayavani is now on Telegram. Click here to join our channel and stay updated with the latest news.

Next