Advertisement

ಪ್ರೌಢಶಾಲೆ ಹಂತಕ್ಕೆ ರಾಷ್ಟ್ರೀಯ ಸೇವಾ ಯೋಜನೆ

04:51 PM Dec 22, 2021 | Team Udayavani |

ರಾಯಚೂರು: ಮಹಾತ್ಮ ಗಾಂಧೀಜಿ ಅವರ ಸೇವಾ ಮನೋಭಾವಗಳನ್ನು ರಾಷ್ಟ್ರೀಯ ಸೇವಾ ಯೋಜನೆಯೂ ಚಾಚೂ ತಪ್ಪದೆ ಪಾಲಿಸುತ್ತಿದೆ. ಈ ಸಂಸ್ಥೆ ಶುರುವಾಗಿ 59 ವರ್ಷ ಪೂರೈಸಿದ್ದು, ಮುಂದೆ ಪ್ರೌಢಶಾಲೆ ಹಂತದವರೆಗೂ ವಿಸ್ತರಿಸಲಾಗುವುದು ಎಂದು ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಬಿ.ಕೃಷ್ಣಪ್ಪ ತಿಳಿಸಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ಮತ್ತು ಯು. ಭೂಪತಿ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ಮಹಾತ್ಮ ಗಾಂಧಿ ಕುರಿತು ವಿಚಾರ ಸಂಕಿರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂದಿನಿಂದ ಈವರೆಗೆ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೆಲಸ ನಡೆಯುತ್ತಿದೆ. ಈ ಯೋಜನೆಗೂ ಮತ್ತು ಮಹಾತ್ಮ ಗಾಂಧೀಜಿ ಅವರಿಗೂ ಅವಿನಾಭಾವ ಸಂಬಂಧವಿದೆ. ಸ್ವಾತಂತ್ರ್ಯ ಹೋರಾಟಗಾರರು ದೇಶದ ಏಕೀಕರಣಕ್ಕೆ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ, ದೇಶದಲ್ಲಿ ಆಡಳಿತ ವ್ಯವಸ್ಥೆ ಮತ್ತು ಸರ್ಕಾರದ ರಚನೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಮೂರು ಸಮಿತಿಗಳನ್ನು ರಚಿಸಲಾಯಿತು ಎಂದು ತಿಳಿಸಿದರು.

ಸಮಿತಿಯು ದೇಶದಲ್ಲಿರುವ ಸುಮಾರು 300 ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿಕೊಂಡು ವಿಷಯಗಳನ್ನು ಕ್ರೋಡಿಕರಿಸಿ ಸರ್ಕಾರದ ಮುಂದೆ ಇಡಲಾಯಿತು. ಈ ವಿಷಯಗಳನ್ನು ಸಮ್ಮೇಳನಗಳು ಹಾಗೂ ವಿದ್ಯಾರ್ಥಿ ಸಮ್ಮೇಳನಗಳಲ್ಲಿ ಮಂಡಿಸಿ ಮಾಹಿತಿ ಪಡೆದ ನಂತರ ಅಂದಿನ ಶಿಕ್ಷಣ ಸಚಿವರು ಒಪ್ಪಿಕೊಂಡರು. ಅಂದಿನಿಂದ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆರಂಭಿಸಲಾಯಿತು ಎಂದರು.

ವೈದ್ಯ ಯು.ಭೂಪತಿ, ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷೆ ವಸುಂಧರಾ ಭೂಪತಿ, ಮಹಾತ್ಮ ಗಾಂಧಿ ಅವರ ದೃಷ್ಟಿಯಲ್ಲಿ ಪ್ರಕೃತಿ ಚಿಕಿತ್ಸೆ ಕುರಿತು ಮಾತನಾಡಿದರು.

Advertisement

ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಡಿ.ಪಂಪಣ್ಣ ಮತ್ತು ಅಮರೇಶ್‌ ಪಾಟೀಲ್‌ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ| ಯಂಕಣ್ಣ, ಹಿರಿಯ ಹೃದ್ರೋಗ ತಜ್ಞ ಡಾ| ಸುರೇಶ ಸಗರದ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಜೆ.ಎಲ್‌. ಈರಣ್ಣ, ಐಕ್ಯೂಎಸಿ ಘಟಕ ಸಂಚಾಲಕ ಮಹಾಂತೇಶ ಅಂಗಡಿ, ವೆಂಕಟೇಶ್‌, ರಾಷ್ಟ್ರೀಯ ಸೇವಾ ಯೋಜನೆ ಘಟಕ ಇಶ್ರತ್‌ ಬೇಗಂ ಸೇರಿ ವಿದ್ಯಾರ್ಥಿಗಳ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next