Advertisement

Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ

10:47 PM Sep 11, 2024 | Team Udayavani |

ಮಂಗಳೂರು:ಭಾರತೀಯ ಈಜು ಒಕ್ಕೂಟ (ಎಸ್‌ಎಫ್‌ಐ) ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಒಟ್ಟು 17 ಪದಕದೊಂದಿಗೆ ಮೇಲುಗೈ ಸಾಧಿಸಿದೆ. ಮಹರಾಷ್ಟ್ರ 10, ತಮಿಳುನಾಡು 8, ಆರ್‌ಎಸ್‌ಪಿಬಿ 8, ಎಸ್‌ಎಸ್‌ಸಿಬಿ 4, ಪಂಜಾಬ್‌ 2, ತೆಲಂಗಾಣ 2, ಬಿಹಾರ 2, ಒಡಿಶಾ 2, ದಿಲ್ಲಿ 2, ಪಶ್ಚಿಮ ಬಂಗಾಲ, ಆಂದ್ರಪ್ರದೇಶ, ರಾಜಸ್ಥಾನ ತಲಾ ಒಂದು ಪದಕ ಗೆದ್ದಿವೆ.

Advertisement

ಫ‌ಲಿತಾಂಶ
ಮಹಿಳೆಯರ 1,500 ಮೀ.
ಫ್ರೀಸ್ಟೈಲ್: ತೆಲಂಗಾಣದ ವೃತ್ತಿ ಅಗರ್ವಾಲ್‌ ಪ್ರಥಮ (17:45.63), ಕರ್ನಾಟಕದ ಶಿರಿನ್‌ ದ್ವಿತೀಯ (17:50.61), ದಿಲ್ಲಿಯ ಭವ್ಯಾ ಸಚ್‌ದೇವ್‌ ತೃತೀಯ (18:00.28).

ಪುರುಷರ 800 ಮೀ. ಫ್ರೀಸ್ಟೈಲ್: ಕರ್ನಾಟಕದ ಅನೀಶ್‌ ಎಸ್‌. ಗೌಡ ಪ್ರಥಮ (8:20.01), ಕರ್ನಾಟಕದ ದರ್ಶನ್‌ ಎಸ್‌. ದ್ವಿತೀಯ (8:27.69), ಆಂಧ್ರ ಪ್ರದೇಶದ ಸಂಪತ್‌ ಕುಮಾರ್‌ ತೃತೀಯ (8:28.35).

ಮಹಿಳೆಯರ 200 ಮೀ. ಮೆಡ್ಲೆ: ತಮಿಳುನಾಡಿನ ಶ್ರೀನಿತಿ ನಟೇಶನ್‌ ಪ್ರಥಮ (2:25.52), ಕರ್ನಾಟಕದ ಹರ್ಷಿಕಾ ರಾಮಚಂದ್ರ-ದ್ವಿತೀಯ (2:25.84), ಕರ್ನಾಟಕದ ಮನವಿ ವರ್ಮ ತೃತೀಯ (2:26.81).

ಪುರುಷರ 200 ಮೀ. ಮೆಡ್ಲೆ: ಎಸ್‌ಎಸ್‌ಸಿಬಿಯ ವಿನಾಯಕ್‌ ವಿಜಯ್‌ ಪ್ರಥಮ (2:07.73), ಕರ್ನಾಟಕದ ಶಿವ ಶ್ರೀಧರ್‌ ದ್ವಿತೀಯ (2:08.31), ರಾಜಸ್ಥಾನದ ಯುಗ್‌ ಚೆಲನಿ-ತೃತೀಯ (2:08.95).

Advertisement

ಮಹಿಳೆಯರ 100 ಮೀ. ಫ್ರೀಸ್ಟೈಲ್: ಬಿಹಾರದ ಮಹಿ ಶ್ವೇತ್‌ರಾಜ ಪ್ರಥಮ (58.54), ಆರ್‌ಎಸ್‌ಪಿಬಿಯ ಶಿವಾಂಗಿ ಶರ್ಮ ದ್ವಿತೀಯ (59.17), ಮಹರಾಷ್ಟ್ರದ ಅದಿತಿ ಸತೀಶ್‌ ಹೆಗ್ಡೆ ತೃತೀಯ (59.17).

ಪುರುಷರ 100 ಮೀ. ಫ್ರೀಸ್ಟೈಲ್: ಕರ್ನಾಟಕದ ಶ್ರೀಹರಿ ನಟರಾಜ್‌ ಪ್ರಥಮ (50.59), ಎಸ್‌ಎಸ್‌ಸಿಬಿಯ ಆನಂದ್‌ ಎಎಸ್‌ ದ್ವಿತೀಯ (50.77), ಮಹರಾಷ್ಟ್ರದ ರಿಶಬ್‌ ಅನುಪಮ್‌ ದಾಸ್‌ ತೃತೀಯ (51.71).

ಮಹಿಳೆಯರ 50 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಪಂಜಾಬ್‌ನ ಅವ್ನಿ ಛಬ್ರ ಪ್ರಥಮ (33.76), ಪಂಜಾಬ್‌ನ ಚಾಹತ್‌ ಅರೋರ ದ್ವಿತೀಯ (33.80), ಆರ್‌ಎಸ್‌ಪಿಬಿಯ ಹರ್ಷಿತಾ ಜಯರಾಮ್‌ ತೃತೀಯ (34.09).

ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಕರ್ನಾಟಕದ ವಿದಿತ್‌ ಎಸ್‌. ಶಂಕರ್‌ ಪ್ರಥಮ (28.62), ತಮಿಳುನಾಡಿನ ಎಂ.ಎಸ್‌. ಯದೇಶ್‌ ಬಾಬು ದ್ವಿತೀಯ (28.67). ತಮಿಳುನಾಡಿನ ಧನುಷ್‌ ಸುರೇಶ್‌ ತೃತೀಯ (28.83).

ಇದನ್ನೂ ಓದಿ: Dharawad: ಸಚಿವ ಲಾಡ್ – ಜಾರಕಿಹೊಳಿ ರಹಸ್ಯ ಭೇಟಿ… ರಾಜಕೀಯ ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next