Advertisement

ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌:ಮೆಡ್ಲೆ ರಿಲೇಯಲ್ಲಿ ತಮಿಳುನಾಡು ದಾಖಲೆ

12:18 AM Sep 13, 2024 | Team Udayavani |

ಮಂಗಳೂರು: ಇಲ್ಲಿ ನಡೆಯುತ್ತಿರುವ 77ನೇ ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಗುರುವಾರ ತಮಿಳುನಾಡಿನ ನಿತಿಕ್‌ ನತೆಲ್ಲಾ, ಧನುಷ್‌ ಸುರೇಶ್‌, ಬಿ. ಬೆನೆಡಿಕ್ಟನ್‌ ರೋಹಿತ್‌ ಮತ್ತು ಆದಿತ್ಯ ದಿನೇಶ್‌ ಅವರು ಪುರುಷರ 4ಗಿ100 ಮೀ. ಮೆಡ್ಲೆ ರಿಲೇಯಲ್ಲಿ 3:45.66 ನಿಮಿಷದಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಎಸ್‌ಎಸ್‌ಸಿಬಿಯು 2022ರಲ್ಲಿ ನಿರ್ಮಿಸಿದ 3:47.22 ದಾಖಲೆ ಮುರಿದಿದ್ದಾರೆ.

Advertisement

ಕರ್ನಾಟಕದ ಆಕಾಶ್‌ ಮಾನ್ವಿ, ವಿದಿತ್‌ ಎಸ್‌. ಶಂಕರ್‌, ಕಾರ್ತಿಕೇಯನ್‌ ನಾಯರ್‌ ಮತ್ತು ಶ್ರೀಹರಿ ನಟರಾಜ್‌ ಅವರು 3:46.09 ನಿಮಿಷದಲ್ಲಿ ಕ್ರಮಿಸಿ ಎರಡನೇ ಸ್ಥಾನಿಯಾದರು.

ಪುರುಷರ 1500 ಮೀ. ಪ್ರೀಸ್ಟೈಲ್ : ಕರ್ನಾಟಕದ ಅನೀಶ್‌ ಎಸ್‌. ಗೌಡ ಪ್ರಥಮ (16:06.11), ದರ್ಶನ್‌ ಎಸ್‌. ದ್ವಿತೀಯ (16:16.83), ಆಂದ್ರಪ್ರದೇಶದ ಸಂಪತ್‌ ಕುಮಾರ್‌ ವೈತೃತೀಯ (16.26:48).
200 ಮೀ. ಬಟರ್‌ಫ್ಲೈ: ಆರ್‌ಎಸ್‌ಪಿಬಿಯ ಬಿಕ್ರಮ್‌ ಚಂಗ¾ಯ್‌ ಪ್ರಥಮ (2:02.76), ಹರಿಯಾಣದ ಹರ್ಷ ದ್ವಿತೀಯ (2:03:95), ಗುಜರಾತ್‌ನ ಆರ್ಯನ್‌ ಪೇಯಸ್‌ ತೃತೀಯ (2:04.41).
50 ಮೀ. ಬ್ಯಾಕ್‌ಸ್ಟ್ರೋಕ್‌: ಕರ್ನಾಟಕದ ಆಕಾಶ್‌ ಮಣಿ  ಪ್ರಥಮ (26.24), ಮಹಾರಾಷ್ಟ್ರದ ರಿಷಭ್‌ ಅನುಪಮ್‌ದಾಸ್‌ ದ್ವಿತೀಯ (26.27), ಎಸ್‌ಎಸ್‌ಸಿಬಿಯ ವಿನಾಯಕ್‌ ವಿಜಯ್‌ ತೃತೀಯ (26.30).
50 ಮೀ. ಫ್ರೀಸ್ಟೈಲ್ : ಮಹಾರಾಷ್ಟ್ರದ ಮಿಹಿರ್‌ ಅಂಬ್ರೆ ಪ್ರಥಮ (22.66), ಕರ್ನಾಟಕದ ಶ್ರೀಹರಿ ನಟರಾಜ್‌ ದ್ವಿತೀಯ (23.22), ಆರ್‌ಎಸ್‌ಪಿಬಿಯ ಪವನ್‌ ಗುಪ್ತ ತೃತೀಯ (23.32).
4ಗಿ100 ಮೆಡ್ಲೆ: ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ, ಮಹಾರಾಷ್ಟ್ರ ತೃತೀಯ.
ಮಹಿಳೆಯರ 800 ಮೀ. ಫ್ರೀಸ್ಟೆ çಲ್‌: ವೃತ್ತಿ ಅಗರ್‌ವಾಲ್‌-ಪ್ರಥಮ (9:16.14), ಹೊಸದಿಲ್ಲಿಯ ಭವ್ಯಾ ಸಚ್‌ದೇವ್‌ ದ್ವಿತೀಯ (9:19.74), ಕರ್ನಾಟಕದ ಶ್ರೀಚರಣಿ-ತೃತೀಯ (9:20.40).
200 ಮೀ. ಬಟರ್‌ಫ್ಲೈ: ಕರ್ನಾಟಕದ ಹಾಶಿಕಾ ರಾಮಚಂದ್ರ-ಪ್ರಥಮ (2:21.16), ತೆಲಂಗಾಣದ ವೃತ್ತಿ ಅಗರ್‌ವಾಲ್‌ ದ್ವಿತೀಯ (2:21.89), ಆರ್‌ಎಸ್‌ಪಿಬಿಯ ಆಸ್ತಾ ಚೌಧರಿ ತೃತೀಯ (2:22.70).
50 ಮೀ. ಬ್ಯಾಕ್‌ಸ್ಟ್ರೋಕ್‌: ಬಂಗಾಲದ ಸೌಬ್ರಿತಿ ಮೊಂಡಲ್‌ ಪ್ರಥಮ (30.14), ಕರ್ನಾಟಕದ ವಿಹಿತಾ ನಯನಾ ದ್ವಿತೀಯ (30.54), ಮಹಾರಾಷ್ಟ್ರದ ರುಜುತಾ ಪ್ರಸಾದ್‌ ತೃತೀಯ (30.59).
50 ಮೀ. ಪ್ರೀ ಸ್ಟೈಲ್ : ಬಿಹಾರದ ಮಹಿ ಶ್ವೇತ್‌ರಾಜ್‌ ಪ್ರಥಮ (26.85), ಆರ್‌ಎಸ್‌ಪಿಬಿಯ ಆವಂತಿಕಾ ಸುಧೀರ್‌ ಚೌವ್ಹಾಣ್‌ ದ್ವಿತೀಯ (27.01), ಆರ್‌ಎಸ್‌ಪಿಬಿಯ ಶಿವಂಗಿ ತೃತೀಯ (27.30).
4ಗಿ100 ಮೀ. ಮೆಡ್ಲೆ: ಒಡಿಶಾ ಪ್ರಥಮ, ಮಹಾರಾಷ್ಟ್ರ ದ್ವಿತೀಯ, ಆರ್‌ಎಸ್‌ಎಸ್‌ಬಿ ತೃತೀಯ.

ಹಾಶಿಕಾಗೆ ಏಷ್ಯಾಡ್‌ ಕನಸು
“2026ರಲ್ಲಿ ನಡೆಯುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಪಡುತ್ತೇನೆ’ ಎಂದು ತನ್ನ ಭವಿಷ್ಯದ ಕನಸು ತೆರೆದಿಟ್ಟಿದ್ದು, ಕರ್ನಾಟಕದ ಪ್ರತಿಭಾನ್ವಿತ ಈಜುಪಟು ಹಾಶಿಕಾ ರಾಮಚಂದ್ರ ತಮ್ಮ ಕನಸನ್ನು ತೆರೆದಿರಿಸಿದ್ದಾರೆ.

ರಾಷ್ಟ್ರೀಯ ಈಜಿನಲ್ಲಿ ದಾಖಲೆ ನಿರ್ಮಿಸಿದ ಹಾಶಿಕಾ, ತನ್ನ ಸಾಧನೆಗೆ ಪೋಷಕರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ. ಈಜು ಸ್ಪರ್ಧೆಯ ಮೊದಲ ದಿನ ಮಹಿಳೆಯರ ವಿಭಾಗದ 400 ಮೀ. ಫ್ರೀಸ್ಟೈಲ್‌ನಲ್ಲಿ ಅವರು 4.24 ನಿಮಿಷದಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next