Advertisement
ಗುರುವಾರ ಕೋಲ್ಕತಾದ ಈಡನ್‌ಗಾರ್ಡನ್ ಕ್ರೀಡಾಂಗಣದಲ್ಲಿ ಬಂಗಾಲ- ಆಂಧ್ರಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯದ 2ನೇ ದಿನದ ಆಟದ ವೇಳೆ ಘಟನೆ ಸಂಭವಿಸಿದೆ. ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಆಗ್ರಹದ ಮೇಲೆ ಬಿಸಿಸಿಐ ಭ್ರಷ್ಟಾ ಚಾರ ತನಿಖಾ ತಂಡದ ಅಧಿಕಾರಿಗಳು ದೇವಾಂಗ್ ಗಾಂಧಿ ಅವರನ್ನು ಡ್ರೆಸ್ಸಿಂಗ್ ಕೊಠಡಿಯಿಂದ ಹೊರ ಹೋಗುವಂತೆ ಸೂಚಿಸಿದರು.
ಗುರುವಾರದ ಆಟದ ವೇಳೆ ಮಂದ ಬೆಳಕಿನ ಕಾರಣ ಸ್ವಲ್ಪ ಹೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಬಂಗಾಲ ತಂಡದ ಫಿಸಿಯೋ ಅವರನ್ನು ಭೇಟಿಯಾಗಲು ತಂಡದ ಡ್ರೆಸ್ಸಿಂಗ್ ಕೊಠಡಿಗೆ ದೇವಾಂಗ್ ಗಾಂಧಿ ಆಗಮಿಸಿದ್ದರು. ಮಾಜಿ ನಾಯಕ ಮನೋಜ್ ತಿವಾರಿ ಇದನ್ನು ಬಿಸಿಸಿಐ ಭ್ರಷ್ಟಾಚಾರ ತನಿಖಾ ಅಧಿಕಾರಿ ಸೌಮನ್ ಕರ್ಮಾಕರ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕರ್ಮಾಕರ್ ಡ್ರೆಸ್ಸಿಂಗ್ ಕೊಠಡಿಯಿಂದ ಹೊರಹೋಗುವಂತೆ ಗಾಂಧಿಗೆ ಸೂಚಿಸಿದ್ದಾರೆ.
Related Articles
Advertisement
ಈ ವೇಳೆ ಪ್ರತಿಕ್ರಿಯಿಸಿದ ಗಾಂಧಿ, “ಬಂಗಾಲ ಕೋಚ್ ಅರುಣ್‌ಲಾಲ್ ಆಹ್ವಾ ನದ ಮೇಲೆ ಹೋಗಿದ್ದೆ. ನನಗೆ ಬೆನ್ನು ನೋವಿದೆ. ಹೀಗಾಗಿ ತಂಡದ ಫಿಸಿಯೋ ಅವರನ್ನು ಭೇಟಿಯಾಗಲು ಬಯಸಿದ್ದೆ. ಇದ ಕ್ಕಾಗಿ ಅವರ ಅನುಮತಿ ಕೂಡ ಪಡೆದಿದ್ದೆ. ಆದರೆ ಮನೋಜ್ ತಿವಾರಿ ಇದನ್ನೇ ದೊಡ್ಡ ವಿಷಯ ಮಾಡಿಬಿಟ್ಟರು’ ಎಂದಿದ್ದಾರೆ.
ಇಲ್ಲಿ ನೀತಿಸಂಹಿತೆ ಉಲ್ಲಂಘನೆ ಆಗಿಲ್ಲ ಎಂಬುದು ಬಂಗಾಲ ಕ್ರಿಕೆಟ್ ಮಂಡಳಿಯ ಹೇಳಿಕೆ.