Advertisement

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ್‌: ಮಂಜೂರಾದ ನಿಧಿ ನಷ್ಟವಾಗುವ ಭಯ

11:49 PM Jul 27, 2019 | sudhir |

ಕುಂಬಳೆ: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್‌ ಸೆಕೆಂಡರಿ ವಿದ್ಯಾಲಯದ ವಿ.ಎಚ್.ಎಸ್‌.ಇ.ವಿಭಾಗದ ನೂತನ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ್‌ (ಆರ್‌.ಎಂ.ಎಸ್‌.ಎ.)ಯೋಜನೆಯಲ್ಲಿ 40 ಲಕ್ಷ ನಿಧಿ ಮಂಜೂರುಗೊಂಡಿದೆ.

Advertisement

ಇದರಂತೆ ಪ್ರೊಜೆಕ್ಟ್ (217/18-19) ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತವಿರುವ ಹಳೆಯ ವಿದ್ಯಾಲಯದ ಕಟ್ಟಡದ ಮೇಲೆ ತರಗತಿ ಕಟ್ಟಡ ನಿರ್ಮಿಸಲು ಯೋಜನೆಯನ್ನು ತಯಾರಿಸಲಾಗಿದೆ.ಆದರೆ ಹಳೆಯ ಕಟ್ಟಡದ ಮೇಲೆ ಹೊಸ ಕಟ್ಟಡ ನಿರ್ಮಿಸಲು ಭದ್ರತೆ ಸಾಲದೆಂಬುದಾಗಿ ಇಂಜಿನಿಯರ್‌ರವರು ಫಿಟ್‌ನೆಸ್‌ ಸರ್ಟಿಫಿಕೇಟ್ ನೀಡಲು ಹಿಂದೇಟು ಹಾಕಿರುವುದರಿಂದ ಸಂಭಂಧಪಟ್ಟ ಅಧಿಕಾರಿಗಳು ತಾಂತ್ರಿಕ ಅನುಮತಿ ನೀಡಿಲ್ಲವಂತೆ.ಕಟ್ಟಡಕ್ಕೆ ಹೊಸ ಸ್ಥಳ ಗೊತ್ತು ಪಡಿಸಿ ಪರಿಷೃ್ಕತ ಯೋಜನೆ ಸಿದ್ಧಪಡಿಸಬೇಕೆಂಬುದಾಗಿ ಮೇಲಧಿಕಾರಿಗಳು ಸೂಚಿಸಿದರೂ ಪ್ರೊಜೆಕ್ಟ್ ಇನ್ನೂ ತಯಾರಿಸಿಲ್ಲ.ಇದರಿಂದಲಾಗಿ ನಿಧಿ ನಷ್ಟ ಹೊಂದುವ ಭಯ ವಿದ್ಯಾಲಯದ ಶಿಕ್ಷಕ ರಕ್ಷಕರದು.

2019 ಜುಲೈ ಕೊನೆಗಾದರೂ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗೊತ್ತುಪಡಿಸಿ ಹೊಸಯೋಜನೆ ಸಿದ್ಧಪಡಿಸಿ ಅಧಿಕಾರಿಗಳಿಗೆ ಸಲ್ಲಿಸಿದಲ್ಲಿ ನಿಧಿ ಲ್ಯಾಪ್ಸ್‌ ಆಗದೆಂಬ ಅಭಿಪ್ರಾಯ ವಿದ್ಯಾಭಿಮಾನಿಗಳದು.ಇದಕ್ಕೆ ಶಾಲಾ ಶಿಕ್ಷಕ ರಕ್ಷಕ ಸಂಘ ಮತ್ತು ಶಾಲಾ ಮ್ಯಾನೇಜ್‌ಮೆಂಟ್ ಸಮಿತಿ ಮುಂದಾಗಬೇಕಾಗಿದೆ.ಈ ವಿದ್ಯಾಲಯದ ಪಕ್ಕದಲ್ಲಿರುವ ಸರಕಾರಿ ಹೈಯರ್‌ ಸೆಕೆಂಡರಿ ವಿದ್ಯಾಲಯವನ್ನು ಕೋಟಿಗಟ್ಟಲೆ ನಿಧಿಯಲ್ಲಿ ಅಂತಾರಾಷ್ಟ್ರ ಮಟ್ಟಕ್ಕೆ ಏರಿಸುವ ಯೋಜನೆಯಲ್ಲಿ ಮೂರಂತಸ್ತಿನ ಕಟ್ಟಡದ ಕಾಮಗಾರಿ ಭರದಿಂದ ಸಾಗುತ್ತಿದೆ.ಇದರೊಂದಿಗೆ ವೊಕೇಶನಲ್ ಹೈಯರ್‌ ಸೆಕೆಂಡರಿ ವಿದ್ಯಾಲಯ ಕಟ್ಟಡ ನಿರ್ಮಾಣಗೊಳ್ಳಬೇಕೆಂಬ ಅಪೇಕ್ಷೆ ಅಭಿಮಾನಿಗಳದು. ಮಂಜೂರಾದ ನಿಧಿ ನಷ್ಟವಾಗದಂತೆ ಸಂಭಂಧಪಟ್ಟವರು ವಿಶೇಷ ಆಸಕ್ತಿ ವಹಿಸಿ ಮುಂದಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next