Advertisement
ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಪ್ರಾಂತೀಯ ಅಧಿಕಾರಿಗಳಿಗೆ ಆಯೋಜಿಸಿರುವ ಎನ್‌ಎಸ್‌ಎಸ್‌ಒ 75ನೇ ಸುತ್ತಿನ ಸಮೀಕ್ಷೆಯ ಪ್ರಶ್ನಾವಳಿ, ಸಿದ್ಧಾಂತ ಮತ್ತು ವ್ಯಾಖ್ಯೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಮಯಕ್ಕೆ ಸರಿಯಾದ ಸಂಗ್ರಹ ಹಾಗೂ ಸಿದ್ಧಾಂತದ ಏಕರೂಪದ ತಿಳಿವಳಿಕೆ ಸಮೀಕ್ಷೆಯ ಯಶಸ್ಸಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಸಮೀಕ್ಷೆ ಭಾರತಾದ್ಯಂತ ಎಲ್ಲ ಭಾಗಗಳಲ್ಲಿ ನಡೆಯಲ್ಲಿದ್ದು, ಅನುಭವಿ ಅಧಿಕಾರಿಗಳು ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.
ಬೆಂಗಳೂರಿನ ಡಿಪಿ ಕೇಂದ್ರದ ನಿರ್ದೇಶಕಿ ಡಾ| ರಾಜೇಶ್ವರಿ ಕಸ್ತೂರಿ ಮಾತನಾಡಿ, ಎನ್‌ಎಸ್‌ಎಸ್‌ಒನಿಂದ ದೇಶಾದ್ಯಂತ 14,300 ಬ್ಲಾಕ್ ಗುರುತಿಸಲಾಗಿದೆ. ಒಂದು ಬ್ಲಾಕ್‌ನಲ್ಲಿ 16ರಿಂದ 24 ಮನೆಗಳು ಬರುತ್ತವೆ. ಅವುಗಳ ಸಮೀಕ್ಷೆ ಮಾಡಲಾಗುವುದು. ಕರ್ನಾಟಕದಲ್ಲಿ 569 ಬ್ಲಾಕ್‌ಗಳಿದ್ದು, ಅದರಲ್ಲಿ 292 ನಗರ, 304 ಗ್ರಾಮೀಣ ಪ್ರದೇಶಗಳು ಬರುತ್ತವೆ.
ಆಯ್ಕೆ ಮಾಡಲಾದ ಮನೆಗಳಲ್ಲಿ ಯಾವ್ಯಾವ ಪದಾರ್ಥಗಳು ಖರ್ಚಾಗುತ್ತವೆ, ಎಷ್ಟು ಹಣ ವ್ಯಯಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಏನೇನು ಖರೀದಿಸಲಾಯಿತು. ತಿಂಗಳಿಗೆ ಆಹಾರಧಾನ್ಯಕ್ಕೆ ಹಾಗೂ ವಾರಕ್ಕೆ ತರಕಾರಿಗೆ ಎಷ್ಟು ಖರ್ಚು ಮಾಡಲಾಗುತ್ತಿದೆ ಹಾಗೂ ಮನೆಯಲ್ಲಿ ಎಷ್ಟು ಜನರು ಚಿಕಿತ್ಸೆ ಪಡೆದಿದ್ದಾರೆ.
ಎಷ್ಟು ಖರ್ಚು ಮಾಡಲಾಗಿದೆ. ಗಂಭೀರ ಕಾಯಿಲೆಯಿಂದ ಯಾರ್ಯಾರು ಬಳಲುತ್ತಿದ್ದಾರೆ. ಸರಕಾರಿ ಸೌಲಭ್ಯ ಪಡೆಯಲಾಗುತ್ತಿದೆಯೇ. ಸರಕಾರಿ ಮತ್ತು ಖಾಸಗಿ ವಿಮೆ ಮಾಡಿಸಲಾಗಿದೆಯೇ ಎಂಬ ಬಗ್ಗೆ ಹಾಗೂ ಮನೆಯಲ್ಲಿ ಎಷ್ಟು ಜನರು ಶಿಕ್ಷಣ ಪಡೆಯುತ್ತಿದ್ದಾರೆ.
ಮುಂದುವರಿಸಿದ್ದಾರೋ ಇಲ್ಲವೇ ಅರ್ಧಕ್ಕೆ ಮೊಟಕುಗೊಳಿಸಿದ್ದಾರೋ, ಶಿಷ್ಯ ವೇತನ ಪಡೆಯಲಾಗುತ್ತಿದೆಯೇ ಎಂಬ ಬಗ್ಗೆ ಹಾಗೂ ಶಿಕ್ಷಣದ ವೆಚ್ಚ ಹೆಚ್ಚಾಗಿದೆಯೇ, ಅದಕ್ಕೆ ಸಾಲ ಬೇಕಾಗುತ್ತದೆಯೋ, ಸರಕಾರದ ಮತ್ತು ಖಾಸಗಿ ಸೌಲಭ್ಯದ ಅವಶ್ಯಕತೆ ಇದೆಯೋ ಎಂಬ ಮಾಹಿತಿಯುಳ್ಳ ಸಮೀಕ್ಷೆಯನ್ನು ಎಲ್ಲ ವರ್ಗದವರಿಂದಲೂ ನಡೆಸಲಾಗುವುದು.
ಈ ಎಲ್ಲದರ ಕುರಿತು ಮಾಹಿತಿ ಪಡೆಯಲು ಒಂದು ಮನೆಯಲ್ಲಿ ಕನಿಷ್ಠ 45ರಿಂದ 90 ನಿಮಿಷಗಳ ಸಮಯಾವಕಾಶ ಬೇಕಾಗುತ್ತದೆ. ಇದೇ ರೀತಿಯ ಸಮೀಕ್ಷೆಯನ್ನು ರಾಜ್ಯ ಸರಕಾರವು ಮಾಡುತ್ತದೆ ಎಂದರು.
ಕಾರ್ಯಾಗಾರದಲ್ಲಿ ಪ್ರಾಂತೀಯ ಕಾರ್ಯಾಲಯ ಹುಬ್ಬಳ್ಳಿ ಮತ್ತು ಉಪ ಪ್ರಾಂತೀಯ ಕಾರ್ಯಾಲಯಗಳಾದ ಬಳ್ಳಾರಿ, ಬೆಳಗಾವಿ ಮತ್ತು ಕಲಬುರ್ಗಿಯ ಅಧಿಕಾರಿಗಳ ಜೊತೆಗೆ ರಾಜ್ಯ ಸರಕಾರದ ಅಂಕಿ-ಸಂಖ್ಯಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಹಿರಿಯ ಸಾಂಖೀಕ ಅಧಿಕಾರಿಗಳಾದ ಎಸ್.ವಿ. ವಡಕಣ್ಣವರ ಸ್ವಾಗತಿಸಿದರು. ಕೆ.ಬಿ. ಕುಲಕರ್ಣಿ ವಂದಿಸಿದರು.