Advertisement

ಎನ್‌ಆರ್‌ಸಿಯಲ್ಲಿ ಹೆಸರಿಲ್ಲದಿದ್ದರೆ ಚಿಂತೆ ಬೇಡ

01:41 AM Aug 21, 2019 | Team Udayavani |

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೆಸರಿಲ್ಲ ಎಂದ ಮಾತ್ರಕ್ಕೆ ಆತ ವಿದೇಶಿ ವ್ಯಕ್ತಿ ಎಂದು ಅರ್ಥವಲ್ಲ. ಮೇಲ್ಮನವಿ ಸಲ್ಲಿಸಲು ಎಲ್ಲ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಎನ್‌ಆರ್‌ಸಿ ಕುರಿತು ಜನರಲ್ಲಿ ಇರುವ ಭೀತಿ ದೂರ ಮಾಡಲು ಯತ್ನಿಸಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಅಂತಿಮ ಪಟ್ಟಿಯಲ್ಲಿ ಭಾರಿ ಸಂಖ್ಯೆಯ ಜನರು ಸೇರಿಲ್ಲದ್ದರಿಂದಾಗಿ ಜನರಲ್ಲಿ ಆತಂಕ ಮೂಡಿತ್ತು. ಪಟ್ಟಿಯಲ್ಲಿ ಇಲ್ಲದವರನ್ನು ದೇಶದಿಂದ ಹೊರಕಳುಹಿಸಲಾಗುತ್ತದೆ ಎಂದು ಊಹಾಪೋಹಗಳೂ ಹರಡಿದ್ದವು.

Advertisement

ಅಲ್ಲದೆ, ಅಂತಿಮ ಪಟ್ಟಿಯಿಂದ ಹೊರಗುಳಿದವರಿಗೆ ಮೇಲ್ಮನವಿ ಸಲ್ಲಿಸಲು ಈಗ ಇರುವ 60 ದಿನಗಳ ಕಾಲಾವಕಾಶವನ್ನು 120 ದಿನಗಳವರೆಗೆ ವಿಸ್ತರಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಇದಕ್ಕೆ ಸೂಕ್ತ ಕಾನೂನು ತಿದ್ದುಪಡಿ ಮಾಡಲು ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next