Advertisement

ವಾಸ್ತುಶಿಲ್ಪದ ರಾಷ್ಟ್ರೀಯ ಯೋಗ್ಯತಾ ಪರೀಕ್ಷೆ; ತರಬೇತಿ ಕಾರ್ಯಾಗಾರ

11:29 PM Apr 11, 2019 | Sriram |

ಮಹಾನಗರ: ವಾಸ್ತುಶಿಲ್ಪದ ರಾಷ್ಟ್ರೀಯ ಯೋಗ್ಯತಾ ಪರೀಕ್ಷೆ (ನ್ಯಾಷನಲ್‌ ಆಪ್ಟಿಟ್ಯುಡ್‌ ಟೆಸ್ಟ್‌ ಇನ್‌ಆರ್ಕಿಟೆಕ್ಟ್ )”ನಾಟಾ’ ಎ. 14ರಂದು ನಡೆಯಲಿರುವ ಪೂರ್ವಭಾವಿಯಾಗಿ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಚರ್‌ನಿಂದ ವಾಸ್ತು ಶಿಲ್ಪದಲ್ಲಿ ಪದವಿ ಪರೀಕ್ಷೆಗೆ ಪ್ರವೇಶದ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಮಂಗಳೂರು ಪಂಪ್‌ವೆಲ್‌ನ ನಿಟ್ಟೆ ಅಂತಾ ರಾಷ್ಟ್ರೀಯ ಸಂಕೀರ್ಣದಲ್ಲಿ ನಡೆಯಿತು.

Advertisement

ನಾಟಾ ಪರೀಕ್ಷಾ ತರಬೇತಿಯ ಮುಂಚೂಣಿಯಲ್ಲಿರುವ ಡಿಕ್ಯೂ ಲ್ಯಾಬ್‌ ಇದರ ಸಹಯೋಗದಲ್ಲಿ ನಿಟ್ಟೆ ವಿವಿಯ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಚರ್‌ ಸಂಸ್ಥೆ ಜಂಟಿಯಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ, ಮತ್ತು ದೃಷ್ಟಿಕೋನದಿಂದ ಚಿತ್ರಕಲೆ, ವಾಸ್ತುಶಿಲ್ಪದ ಅರಿವು, ದೃಷ್ಟಿಗೋಚರ ಪ್ರಾದೇಶಿಕ ಸಾಮರ್ಥ್ಯ, ಮಾನಸಿಕ ಸಾಮರ್ಥ್ಯ ಮತ್ತು ತಾರ್ಕಿಕ ಕ್ರಿಯೆಗಳ ಮೇಲೆ ತೀವ್ರವಾದ ವ್ಯಾಯಾಮಗಳನ್ನು ಒಳಗೊಂಡಿರುವ ತರಬೇತಿಯನ್ನು ನೀಡಲಾಯಿತು.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರ ಕರ್ನಾಟಕ ಮತ್ತು ಕೇರಳದಿಂದ ಸುಮಾರು 80ಕ್ಕಿಂತಲೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಈ ಪ್ರದೇಶದ ವಿದ್ಯಾರ್ಥಿಗಳು ಕಡಿಮೆ ಅವಧಿಯ ಉಚಿತ ವೆಚ್ಚದಲ್ಲಿ ಕೌಶಲಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ನಿಟ್ಟೆ ವಿವಿಯ ಎನ್‌ಐಎ ವಿದ್ಯಾರ್ಥಿ- ಸ್ನೇಹಿ ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳನ್ನು ಪ್ರೋತ್ಸಾಹಿ ಸುತ್ತಿದ್ದು,, ಸತತ ಮೂರನೇ ವರ್ಷ ಈ ಕಾರ್ಯಾಗಾರವನ್ನು ಆಯೋಜಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next