ಪಣಂಬೂರು: ಪಣಂಬೂರಿನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ರವಿವಾರ ನಡೆದ ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕದ ರಮೇಶ್ ಬುಧಿಯಾಲ್ ಗೆಲುವು ಸಾಧಿಸಿ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಫೈನಲ್‌ನಲ್ಲಿ ರಮೇಶ್ ತಮಿಳುನಾಡಿನ ಅಜೀಶ್ ಅಲಿ ಅವರನ್ನು ಸೋಲಿಸಿದ್ದರು. ವನಿತೆಯರ ಮುಕ್ತ ಸ್ಪರ್ಧೆಯ ಫೈನಲ್‌ನಲ್ಲಿ ಗೋವಾದ ಶುಗರ್ ಬನಾರ್ಸೆಗೆ ಪ್ರಶಸ್ತಿ ಪಡೆದರು.
16ರ ಹರೆಯದ ಬನಾರ್ಸೆಗೆ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ತಮಿಳುನಾಡಿನ ಸೃಷ್ಟಿ ಸೆಲ್ವಂ ಅವರನ್ನು ಹಿಂದಿಕ್ಕಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡರು.
ಕರ್ನಾಟಕದ ಸಿಂಚನಾ ಗೌಡ ಮೂರನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
Related Articles
ರಮೇಶ್ ಬುಧಿಯಾಲ್ ಒಟ್ಟು 16.33 ಅಂಕ ಗಳಿಸಿದರೆ, ರನ್ನರ್ ಅಪ್ ಅಜೀಶ್ ಅಲಿ 15.67 ಅಂಕ ಗಳಿಸಿದರು. ಸತೀಶ್ ಸರ್ವಣನ್ 13 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದರು.