Advertisement

ಭಾರತದಲ್ಲಿ ನೌಕಾಯಾನ ಬೆಳೆದುಬಂದ ಹಾದಿ : ಇಂದು ರಾಷ್ಟ್ರೀಯ ಕಡಲ ದಿನ

12:31 AM Apr 05, 2021 | Team Udayavani |

ದೇಶದ ಆರ್ಥಿಕ ಅಭಿವೃದ್ಧಿಗೆ ನೌಕಾಯಾನದ ಕೊಡುಗೆ ಅಪಾರ. ವಿವಿಧ ದೇಶಗಳ ಮಾರುಕಟ್ಟೆಗೆ ಸರಕುಗಳನ್ನು ರಫ್ತು ಮಾಡುವುದು, ಬೇರೆ ದೇಶದಿಂದ ಅಗತ್ಯವಿರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಮೊದಲಾದ ವಾಣಿಜ್ಯ ಚಟುವಟಿಕೆಗಳಿಗೆ ನೌಕಾಯಾನವೇ ಆಧಾರ. ಭಾರತೀಯ ಹಡಗು 1919ರ ಎಪ್ರಿಲ್‌ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಈ ದಿನದ ನೆನಪಿಗೆ ಪ್ರತೀ ವರ್ಷ ಎಪ್ರಿಲ್‌ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.

Advertisement

ಎಲ್ಲಿಂದ ಎಲ್ಲಿಗೆ: ಸ್ಥಳೀಯ ಭಾರತೀಯ ಉದ್ಯಮಿಗಳ ಒಡೆತನದ ಮೊದಲ ಅತೀ ದೊಡ್ಡ ಹಡಗು ಕಂಪೆನಿಯಾದ ದಿ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಲಿ.ನ ಮೊದಲ ಹಡಗು ಎಸ್‌ಎಸ್‌ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್‌ ಕಿಂಗ್‌ಡಮ್‌ (ಲಂಡನ್‌)ಗೆ ಪ್ರಯಾಣಿಸಿದ ದಿನವಾಗಿದೆ. ಈ ದಿನವನ್ನು 1964ರಿಂದ ಆಚರಿಸಲಾಗುತ್ತಿದೆ.

ಏನು ಕಳುಹಿಸಲಾಗುತ್ತಿತ್ತು?
ಭಾರತೀಯ ಮಸಾಲೆಗಳು, ಧೂಪದ್ರವ್ಯ ಮತ್ತು ಜವಳಿ ತುಂಬಿದ ದೋಣಿಗಳು ಪಾಶ್ಚಿಮಾತ್ಯ ದೇಶಗಳ‌ತ್ತ ಸಾಗಿದವು.

ಸಮುದ್ರ ಸಾರಿಗೆ ಪ್ರಯೋಜನ: ರಸ್ತೆ ಅಥವಾ ವಾಯು ಸಾರಿಗೆಗೆ ಹೋಲಿಸಿದರೆ ಹಡಗುಗಳ ಮುಖಾಂತರ ಸರುಕುಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಂದರುಗಳ ಪಾತ್ರ ಮುಖ್ಯ ಎಂಬುದನ್ನು ಮರೆಯುವ ಹಾಗಿಲ್ಲ.

ನೇವಿಗೇಶನ್‌ ಹೇಗೆ?: ಇಂದಿನಂತೆ ಆ ಕಾಲದಲ್ಲಿ ಗೂಗಲ್‌ ಮ್ಯಾಪ್‌ಗ್ಳಿರಲಿಲ್ಲ. ಹೀಗಾಗಿ ನಕ್ಷೆಗಳು, ಧ್ರುವ ನಕ್ಷತ್ರ ಮತ್ತು ನಕ್ಷತ್ರ ಪುಂಜವನ್ನು ಆಧರಿಸಿ ಸಂಚರಿಸಲಾಗುತ್ತಿತ್ತು. ಇದು ನೈಜ ಸವಾಲಾಗಿತ್ತು.

Advertisement

ಸ್ವದೇಶಿ ಕಿಚ್ಚು: ಬ್ರಿಟಿಷ್‌ ಕಂಪೆನಿಗಳು ಹಡಗು ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದವು. ಈ ಸಮಯದಲ್ಲಿ ಗುಜರಾತ್‌ನ ಕೈಗಾರಿಕೋದ್ಯಮಿ ವಾಲ್ಚಂದ್‌ ಹಿರಾಚಂದ್‌ ಅವರು ಬಲಿಷ್ಠ ದೇಶಿಯ, ಹಡಗು ಉದ್ಯಮವನ್ನು ತೆರೆಯಲು ಯೋಚಿಸುತ್ತಾರೆ. ಅವರ ಸ್ನೇಹಿತರಾದ ನರೋತ್ತಮ್‌ ಮೊರಾರ್ಜಿ, ಕಿಲಚಂದ್‌ ದೇವcಂದ್‌ ಮತ್ತು ಲಲ್ಲುಭಾಯ್‌ ಸಮಲ್ದಾಸ್‌ ಅವ ರೊಂದಿಗೆ ಗ್ವಾಲಿಯರ್‌ನ ಸಿಂಧಿಯಾಸ್‌ನಿಂದ ಆರ್‌ಎಂಎಸ್‌ ಎಂಪ್ರಸ್‌ ಎಂಬ ಸ್ಟೀಮರ್‌ ಅನ್ನು ಖರೀದಿಸಿದರು. ಇದನ್ನು ಮೊದಲು 1890ರಲ್ಲಿ ಗ್ವಾಲಿಯರ್‌ನ ರಾಜಮನೆತನ ಕೆನಡಾದ ಪೆಸಿಫಿಕ್‌ ರೈಲ್ವೇಯಿಂದ ಖರೀದಿಸಿತ್ತು. ಬಳಿಕ ಮೊದಲ ವಿಶ್ವಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರಿಗೆ ಆಸ್ಪತ್ರೆಯಾಗಿ ಬಳಸಲಾಯಿತು. ನಾಲ್ಕು ಭಾರತೀಯರು ತಮ್ಮ ಕಂಪೆನಿಗೆ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಕಂಪೆನಿ ಲಿ. ಎಂದು ಹೆಸರಿಟ್ಟರು. ಇದನ್ನು ಮೊದಲ ಸ್ವದೇಶಿ ಹಡಗು ಉದ್ಯಮ ಎಂದು ಕರೆಯಲಾಯಿತು.

ಭಾರತದ ಕಡಲ ಇತಿಹಾಸ
ವರದಿಗಳ ಪ್ರಕಾರ ನೌಕಾಯಾನದ ಇತಿಹಾಸವು ಸಹಸ್ರಮಾನಗಳ ಹಿಂದೆ ಪ್ರಾರಂಭವಾಗಿದೆ. ಕ್ರಿ.ಪೂ. 3ನೇ ಸಹಸ್ರಮಾನದಲ್ಲಿ, ಸಿಂಧೂ ಕಣಿವೆಯ ಜನರು ಮೆಸಪಟೋಮಿಯಾದೊಂದಿಗೆ ತಮ್ಮ ಸಮುದ್ರ ವ್ಯಾಪಾರವನ್ನು ಪ್ರಾರಂಭಿಸಿದ್ದರು. ರೋಮನ್‌ ಸಾಮ್ರಾಜ್ಯದಿಂದ ಈಜಿಪ್ಟ್ ಅನ್ನು ಸ್ವಾಧೀನಪಡಿಸಿಕೊಂಡಾಗ, ವ್ಯಾಪಾರವು ರೋಮನ್ನರರೊಂದಿಗೆ ಪ್ರಾರಂಭವಾಯಿತು.

ಮರುನಾಮಕರಣ!
ಆರ್‌ಎಂಎಸ್‌ ಎಂಪ್ರಸ್‌ ಅನ್ನು ಎಸ್‌ಎಸ್‌ ಲಾಯಲ್ಟಿ ಎಂದು ಮರುನಾಮಕರಣ ಮಾಡಲಾಯಿತು. 1919ರ ಎಪ್ರಿಲ್‌ 5ರಂದು ಲಂಡನ್‌ಗೆ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಿತು. ಬ್ರಿಟಿಷ್‌ ಕಂಪೆನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಶುಲ್ಕಗಳ ವಿಚಾರದಲ್ಲಿಯೂ ಬ್ರಿಟಿಷರು ಅಂದು ತುಂಬಾ ಸಮಸ್ಯೆಕೊಟ್ಟಿದ್ದರು. ಅವೆಲ್ಲವನ್ನು ಮೆಟ್ಟಿನಿಂತು ಸಂಸ್ಥೆ ಬೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next