ಕೋಲಾರ: ಜಿಲ್ಲಾ, ಮಾಲೂರು, ಮುಳ ಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ ತಾಲೂಕು ಕೋರ್ಟ್‌ಗಳಲ್ಲಿ ಮಾ.12ರಂದು ರಾಷ್ಟ್ರೀಯ ಲೋಕ ಅದಾಲತ್‌ಅನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್ ತಿಳಿಸಿದರು.
ಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಅಂದರೆ ರಾಜೀ ಆಗಬಲ್ಲ ಅಪರಾಧ ಪ್ರಕರಣ, ಬ್ಯಾಂಕ್, ಹಣಕಾಸು, ಮೋಟಾರು ವಾಹನ ಅಪಘಾತ ಸಂಬಂಧವಾಗಿ ಪರಿಹಾರ ಕೋರಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ, ಕಾರ್ಮಿಕವಿವಾದಗಳು, ಕೈಗಾರಿಕಾ ಕಾರ್ಮಿಕರ ಸಂಬಂಧಿಸಿದ, ಕೌಟುಂಬಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಸಿವಿಲ್ ದಾವೆ, ವಿಶೇಷವಾಗಿ ಚೆಕ್ ಬೌನ್ಸ್, ರಾಜೀಸಂಧಾನದ ಪ್ರಕ್ರಿಯೆ ಮೂಲಕ ಬಗೆಹರಿಸಿಕೊಂಡುಶೀಘ್ರ ಪರಿಹಾರ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಪಕ್ಷಗಾರರು ಕೋರ್ಟ್‌ನಲ್ಲಿ ಬಾಕಿ ಇರುವ, ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಒಂದು ವೇಳೆ ಪಕ್ಷಗಾರರು ಕೋರ್ಟ್‌ನಲ್ಲಿ ಬಾಕಿ ಇರುವಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಪ್ರಕರಣ ನಡೆಯುತ್ತಿರುವ ಕೋರ್ಟ್‌ಗೆ ರಾಜೀ ಮಾಡಿಕೊಳ್ಳುವ ಕುರಿತು ತಿಳಿಸಬಹುದು ಅಥವಾ ಅರ್ಜಿ ಸಲ್ಲಿಸುವ ಮೂಲಕ ಇತ್ಯರ್ಥಪಡಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08152- 228811 ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಉಪಸ್ಥಿತರಿದ್ದರು.