Advertisement
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ವಹಿತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಜು.5 ರಿಂದ 7 ರವರೆಗೆ 2021-22ನೇ ಸಾಲಿನ ಅಖೀಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಖೋ-ಖೋ ಪಂದ್ಯಾವಳಿ ನಡೆಯಲಿದೆ.
Related Articles
Advertisement
ಪ್ರತಿ ವಲಯ ಮಟ್ಟದಲ್ಲೂ 60ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು. ಈ ಪೈಕಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ರಾಷ್ಟ್ರಮದ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿವೆ. ದಕ್ಷಿಣ ಭಾರತ ವಲಯದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪಾಂಡಿಚೇರಿ ರಾಜ್ಯಗಳ ವ್ಯಾಪ್ತಿಯ ವಿವಿಗಳ ಒಟ್ಟು 60ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಇನ್ನು ಶತಮಾನೋತ್ಸವ ಆಚರಣೆ ವೇಳೆ 2015- 16ನೇ ಸಾಲಿನಲ್ಲಿ ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಮಹಿಳಾ ಹಾಕಿ ‘ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ’ಗಳನ್ನು ಮೈಸೂರು ವಿವಿಯೇ ಆತಿಥ್ಯ ವಹಿಸಿ ಯಶಸ್ವಿಯಾಗಿ ನೆರವೇರಿಸಿತು. 2018-19ನೇ ಸಾಲಿನಲ್ಲಿ ದಕ್ಷಿಣ ವಲಯ ಅಂತರ ವಿವಿ ಕ್ರಿಕೆಟ್ ಪಂದ್ಯಾವಳಿಗೂ ಆತಿಥ್ಯ ವಹಿಸಿದನ್ನು ಸ್ಮರಿಸಬಹುದು.
ಮೈಸೂರು ವಿವಿಯೇ ಫೇವರೆಟ್ : ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಪ್ರಥಮ ಸ್ಥಾನಗಳಿಸಿದೆ. ಬಳಿಕ ಕ್ಯಾಲಿಕಟ್ ವಿವಿ, ವಾರಂಗಲ್ನ ಕಾಕತೀಯ ವಿವಿ, ಕೇರಳ ವಿವಿ ತಂಡಗಳು ನಂತರದ ಸ್ಥಾನ ಗಳಿಸಿವೆ. ಮೈಸೂರು ವಿವಿ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದ್ದು, ಪ್ರಶಸ್ತಿ ಗೆಲ್ಲುವುದರಲ್ಲಿ ಫೇವರೆಟ್ ಎನಿಸಿದೆ. 2017-18ನೇ ಸಾಲಿನ ಅಖಿಲ ಭಾರತ ಖೋ ಖೋ ಪಂದ್ಯಾವಳಿಯಲ್ಲಿ ಮೈಸೂರು ತಂಡ ಮೂರನೇ ಸ್ಥಾನಗಳಿಸಿತ್ತು. ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅನೇಕ ಬಾರಿ ಪ್ರಶಸ್ತಿ ಗೆದ್ದಿದೆ. ಮೈಸೂರು ವಿವಿ ಪುರುಷರ ಖೋ-ಖೋ ತಂಡ ದಕ್ಷಿಣ ಭಾರತ ಹಾಗೂ ಅಖೀಲ ಭಾರತ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಹಲವು ಬಾರಿ ಪ್ರಶಸ್ತಿ ಗೆದ್ದಿದೆ. 2017-18, 1983-84 ನೇ ಸಾಲಿನಲ್ಲಿ ಚಾಂಪಿಯನ್ಶಿಪ್ ಪಟ್ಟಕ್ಕೇರಿತ್ತು. 1974-75, 1975-76, 1999-2000, 2000-01, 2001-02, 2006-07 ನೇ ಸಾಲಿನಲ್ಲಿ ದ್ವಿತೀಯ ಸ್ಥಾನ ಹಾಗೂ 1976-77, 1982-83, 2005-06, 2009-10 ನೇ ಸಾಲಿನಲ್ಲಿ ತೃತೀಯ ಸ್ಥಾನ ಗಳಿಸಿದೆ.
ಮೈಸೂರು ವಿಶ್ವವಿದ್ಯಾಲಯದ ವತಿಯಿಂದ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಖೋ-ಖೋ ಪಂದ್ಯಾವಳಿಗೆ ಆತಿಥ್ಯ ವಹಿಸಲಾಗಿದೆ. ವಿವಿಯ ದೈಹಿಕ ಶಿಕ್ಷಣ ವಿಭಾಗದ ವಹಿತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಜುಲೈ 5 ರಿಂದ 7 ರವರೆಗೆ ಪಂದ್ಯಾವಳಿ ನಡೆಯಲಿದ್ದು, ಎಲ್ಲ ರೀತಿ ಸಿದ್ಧತೆ ಕೈಗೊಳ್ಳಲಾಗಿದೆ. – ಡಾ.ಪಿ.ಕೃಷ್ಣಯ್ಯ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ