Advertisement

ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ ಎಲಿಕ್ಸಿಯರ್‌-2017

02:02 PM Nov 10, 2017 | Team Udayavani |

ಮಹಾನಗರ: ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಬದ್ಧತೆ ಇರಬೇಕು ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌ ಹೇಳಿದರು.

Advertisement

ಲಕ್ಷ್ಮೀ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಎಜೆ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ ಮೆಂಟ್‌ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ ‘ಎಲಿಕ್ಸಿಯರ್‌ -2017’ನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೈನಂದಿನ ಕೆಲಸಗಳಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡಾಗ ನಾವು ಮಾಡುವ ಕೆಲಸದ ಫ‌ಲ
ಅತ್ಯುತ್ತಮವಾಗುತ್ತದೆ. ಸಾಧಿಸಬೇಕು ಎಂಬ ಗುರಿ ಹಠ ನಮ್ಮೊಳಗಿರುವವರೆಗೆ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌ ಉಪಾಧ್ಯಕ್ಷ ಪ್ರಶಾಂತ್‌ ಶೆಟ್ಟಿ, ಉನ್ನತ ಶಿಕ್ಷಣದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುತ್ತವೆ ಎಂದರು.

ಎಜೆ ಇನ್‌ಸ್ಟಿಟ್ಯೂಟ್‌ ನಿರ್ದೇಶಕ ಡಾ| ಟಿ.ಜಯಪ್ರಕಾಶ್‌ ರಾವ್‌, ಸಂಯೋಜಕ ಚೇತನ್‌ ಕುಮಾರ್‌, ಉಪನ್ಯಾಸಕ ವಿಜಯ್‌ ಕುಮಾರ್‌, ವಿದ್ಯಾರ್ಥಿ ಸನ್ನಿಧಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗೌತಮಿ ಕೆ. ಮತ್ತು ನವನೀತ್‌ ನಿರೂಪಿಸಿದರು. ಫ‌ಯಾಜ್‌ ವಂದಿಸಿದರು. ಉತ್ಸವದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next