Advertisement

ರಾಷ್ಟ್ರೀಯ ಮಟ್ಟದ ಹ್ಯಾಮರ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ರೇವತಿ

05:47 PM Mar 23, 2022 | Team Udayavani |

ಶಿರಸಿ: ತಾಲೂಕಿನ ಬನವಾಸಿ ಸಮೀಪದ ತಿಗಣಿ ಗ್ರಾಮದ ವಿದ್ಯಾರ್ಥಿನಿ ರೇವತಿ ಚಂದ್ರ  ಚನ್ನಯ್ಯ  ರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮರ್ ಥ್ರೋ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಪ್ರಾನ್ಸ್ ಮೀಟ್ ಗೆ ಆಯ್ಕೆ ಆಗಿದ್ದಾಳೆ.

Advertisement

ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಹಳ್ಳಿಯ ಪ್ರತಿಭೆ ಆದ ರೇವತಿ, ಓರಿಸ್ಸಾದ ಭುವನೇಶ್ವರದಲ್ಲಿ ಸ್ಕೂಲ್ ಗೇಮ್ಸ್  ಫೆಡರೇಶನ್ ಹಮ್ಮಿಕೊಂಡ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ  48 ಮೀಟರ್ ಹ್ಯಾಮರ್ ಥ್ರೋ ಮಾಡಿದ್ದಳು.  ಪ್ರಥಮ ಸ್ಥಾನ ಪಡೆದ ಹರಿಯಾಣದ ಕ್ರೀಡಾಳು 48.1 ಮೀಟರ್ ಉದ್ದ ಎಸೆದಿದ್ದರು. ರೇವತಿ ಕೇವಲ .01 ಮೀಟರ್ ಅಂತರದಿಂದ ಪ್ರಥಮ‌ ಸ್ಥಾನದಿಂದ ವಂಚಿತಳಾದಳು.

ಸುಬೇದಾರ್ ಕಾಶೀನಾಥ ನಾಯ್ಕ, ಜಿಲ್ಲಾ ಕೋಚ್ ಪ್ರಕಾಶ್ ರೇವಣಕರ್ ಕಾರವಾರ, ಶಮೀಂದ್ರ ನಾಯಕ ಕಾರವಾರ, ಉಡುಪಿ ಸ್ಪೋರ್ಟ್ಸ್ ಕ್ಲಬ್ ಅಜ್ಜರಕಾಡು ಅವರ ಸಹಕಾರ, ಮಾರ್ಗದರ್ಶನಿಂದ ಇದು ಸಾಧ್ಯ ಆಗಿದೆ‌ ಎಂದು ಸ್ಥಳೀಯ ಶಿಕ್ಷಕ ರೇವತಿಗೆ ಶೈಕ್ಷಣಿಕ ಪಾಠ ಮಾಡಿದ್ದ ಮಾರುತಿ ಬನವಾಸಿ ಸಂತಸ ವ್ಯಕ್ತಪಡಿಸಿದ್ದಾರೆ.

ರೇವತಿ ಪ್ರಸ್ತುತ ಉಡುಪಿಯಲ್ಲಿ ದ್ವಿತೀಯ‌ ಪಿಯುಸಿ ಓದುತ್ತಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next