Advertisement
ನಗರದಲ್ಲಿ ಕೆಎಲ್‌ಇ ಡಾ| ಜಿರಗೆ ಸಭಾಂಗಣದಲ್ಲಿ ಭಾರತೀಯ ಕೃಷಿಕ ಸಮಾಜ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಪರಿಷತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯ ಹಸಿರು ಕ್ರಾಂತಿ ಯೋಜನೆ ರೈತರ ಬದುಕು ಹಸನಾಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
Related Articles
Advertisement
ರೈತ ಕುಟುಂಬಗಳಲ್ಲಿ ಓರ್ವ ಯುವಕನನ್ನು ನಾವು ಕೃಷಿ ಬಿಟ್ಟು ಬೇರೆ ಉದ್ಯೋಗದಲ್ಲೂ ಸೇರಿಸಬೇಕಿದೆ. ಆಗ ರೈತನ ಸ್ಥಿತಿ ಸುಧಾರಿಸಲು ಸಾಧ್ಯ. ಬರ ಅಥವಾ ನೆರೆಯಿಂದ ಶೇ. 50ರಷ್ಟು ಬೆಳೆ ನಾಶವಾದರೆ ಮಾತ್ರ ಕೃಷಿ ಫಸಲ್ ಬಿಮಾ ಯೋಜನೆಯ ಲಾಭ ಸಿಗುತ್ತಿತ್ತು. ಇನ್ನು ಮುಂದೆ ಶೇ. 30ರಷ್ಟು ನಾಶವಾದರೂ ಯೋಜನೆಯ ಅನುಕೂಲ ರೈತರಿಗೆ ಆಗಲಿದೆ ಎಂದರು.
ಸಂಸದರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ, ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಕಿಶನವೀರ, ಭಾರತೀಯ ಕೃಷಿಕ ಸಮಾಜ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.
ನಾನೂ ರೈತ, ತಂದೆಯೂ ರೈತನನ್ನ ತಂದೆ ರೈತನಾಗಿದ್ದು, ನಾನೂ ರೈತನಾಗಿದ್ದೇನೆ. ಹೀಗಾಗಿ ರೈತರ ಸ್ಥಿತಿ ಏನು ಎಂಬುದು ನನಗೆ ಗೊತ್ತು. ಈ ದೇಶದ ಬೆನ್ನೆಲುಬು ಆಗಿರುವ ರೈತನ ಪರಿಸ್ಥಿತಿಯ ಅರಿವಿದೆ. ದೇಶದಲ್ಲಿ ಕೃಷಿ ಕ್ಷೇತ್ರ ದಿನದಿನಕ್ಕೂ ಪ್ರಗತಿಯತ್ತ ಸಾಗಬೇಕು ಎಂಬುದೇ ನನ್ನ ಆಶಯ ಎಂದು ಸಚಿವ ರಾಜನಾಥ ಸಿಂಗ್ ಹೇಳುತ್ತಿದ್ದಂತೆ ಸಭಿಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇ-ನಾಮ ರಾಜ್ಯದಲ್ಲಿ ಜಾರಿ ಆಗಿಲ್ಲ
ದೇಶದಲ್ಲಿ ರೈತರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಸಿಗಲಿ ಎಂಬ ಉದ್ದೇಶದಿಂದ ಇ-ಮಾರುಕಟ್ಟೆ ಜಾರಿಗೆ ತರಲಾಗಿದೆ. ಇ-ನಾಮ (ರಾಷ್ಟ್ರೀಯ ಕೃಷಿ ಮಾರುಕಟ್ಟೆ) ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭದಾಯಕವಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಇದು ಈವರೆಗೂ ಜಾರಿ ಆಗದಿರುವುದು ಕಳವಳಕಾರಿಯಾಗಿದೆ ಎಂದು ಕೇಂದ್ರ
ಗೃಹ ಸಚಿವ ರಾಜನಾಥ ಸಿಂಗ್ ವಿಷಾದ ವ್ಯಕ್ತಪಡಿಸಿದರು. ಈ-ನಾಮ ಯೋಜನೆಗೆ ರೈತರನ್ನು ಜೋಡಿಸದಿರುವುದು ಆಶ್ಚರ್ಯವಾಗುತ್ತದೆ ಎಂದು ಸಚಿವ ರಾಜನಾಥ ಸಿಂಗ್ ಹೇಳುತ್ತಿದ್ದಂತೆ ಸಂಸದ ಪ್ರಹ್ಲಾದ ಜೋಷಿ ರಾಜ್ಯದಲ್ಲಿ ಜಾರಿಯಾಗಿದೆ. ಆದರೆ, ಇದನ್ನು ರೈತರಿಗೆ ಜೋಡಿಸಿಲ್ಲ ಎಂದು ಹೇಳಿದರು. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ನಿಗದಿ ಪಡಿಸಿದರೂ ರೈತರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ.
ರೈತರು ಬೆಳೆಯುವ ಪ್ರತಿ ಬೆಳೆಯ ಮೌಲ್ಯ ವರ್ಧಿಸಬೇಕಾಗಿದೆ. ಜತೆಗೆ ಆಹಾರ ಸಂಸ್ಕರಣೆಯತ್ತ, ಎಲೈಟ್ ವಲಯದತ್ತ, ಕೃಷಿಗೆ ಸಂಬಂಧಿತ ಎಲ್ಲ ಕ್ಷೇತ್ರಗಳು ಊರಿನಿಂದ ದಿಲ್ಲಿವರೆಗೆ ತಲುಪಿಸುವ ಅಗತ್ಯವಿದೆ. ಹೈನುಗಾರಿಕೆ, ಡೈರಿ ಸೆಕ್ಟರ್ ಬೆಳೆಸುತ್ತ ಹೋದರೆ ರೈತರ ಲಾಭ ಹೆಚ್ಚಳವಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು. ಸಚಿವರಿಗೆ ಕಳಸಾ-ಬಂಡೂರಿ ಬಿಸಿ
ಬೆಳಗಾವಿ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೆಸರು ಹೇಳುತ್ತಿದ್ದಂತೆ ರೈತರು, ಕನ್ನಡದಲ್ಲಿ ಮಾತನಾಡಬೇಕು. ಇಲ್ಲದಿದ್ದರೆ ಕನ್ನಡದಲ್ಲಿ ಅನುವಾದ ಮಾಡಿ ಹೇಳಬೇಕು ಎಂದು ಕೂಗಿದರು. ಜತೆಗೆ, ಕಳಸಾ-ಬಂಡೂರಿ ಬಗ್ಗೆ ವಿಷಯ ಪ್ರಸ್ತಾಪಿಸಿ ಎಂದು ಘೋಷಣೆ ಕೂಗಿದರು. ಆಗ ರಾಜನಾಥ ಸಿಂಗ್ ಅವರು ನಗುತ್ತ ಕನ್ನಡದಲ್ಲಿ ಮಾತನಾಡಬೇಕಾ ಎಂದು ಕೇಳಿದರು. ಕೂಡಲೇ ಸಂಸದ ಸುರೇಶ ಅಂಗಡಿ ಮಧ್ಯ ಪ್ರವೇಶಿಸಿ, ಸದ್ಯ ಸಚಿವರು ಹಿಂದಿಯಲ್ಲಿ ಮಾತನಾಡುತ್ತಾರೆ. ನಂತರ ತಿಳಿಯಲಿಲ್ಲ ಎಂದರೆ ಕನ್ನಡದಲ್ಲಿ ತಿಳಿಸಿ ಹೇಳುತ್ತೇನೆ. ನಿಮಗೆಲ್ಲರಿಗೂ ಹಿಂದಿ ಅರ್ಥವಾಗುತ್ತದೆ ಅಲ್ವ ಎಂದು ಮರು ಪ್ರಶ್ನಿಸಿದಾಗ ಎಲ್ಲ ರೈತರು ಸುಮ್ಮನಾದರು. ಅಲ್ಲದೆ, ಸಚಿವರು ಸಭಾಂಗಣಕ್ಕೆ ಬರುತ್ತಿದ್ದಂತೆ ರೈತರ ಸಾಲ ಮನ್ನಾ ಆಗಬೇಕು ಎಂದು ರೈತರು ಘೋಷಣೆ ಕೂಗಿದರು.