Advertisement
ಪುರುಷರ ವಿಭಾಗ: ಪುರುಷರ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ರೋಠಕ್ ಎಂ.ಡಿ. ಯುನಿವರ್ಸಿಟಿ ವಿರುದ್ಧ ಹಿಮಾಚಲ ಪ್ರದೇಶ ತಂಡ ಕ್ರಮವಾಗಿ 32-41 ಅಂಕ ಗಳಿಸಿದರೆ, 9 ಅಂಕಗಳ ಅಂತರದಲ್ಲಿ ಹಿಮಾಚಲ ಪ್ರದೇಶ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಇನ್ನೊಂದೆಡೆ, ಇನಕಮ್ ಟ್ಯಾಕ್ಸ್ ಚೈನ್ನೈ ವಿರುದ್ಧ ರೆಡ್ ಆರ್ಮಿ ತಂಡ ನಡೆಸಿದ ಹೋರಾಟದಲ್ಲಿ ಕ್ರಮವಾಗಿ 39-25 ಅಂಕ ಗಳಿಸಿ, 14 ಅಂಕಗಳ ಅಂತರದಲ್ಲಿ ರೆಡ್ ಆರ್ಮಿ ತಂಡ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ರೆಡ್ ಆರ್ಮಿ ತಂಡದ ವಿರುದ್ಧ ಹಿಮಾಚಲ ಪ್ರದೇಶ ಅಂತಿಮ ಜಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
Related Articles
Advertisement
ಶುಕ್ರವಾರ ಮಧ್ಯರಾತ್ರಿ ಪ್ರಾರಂಭಗೊಂಡ ಫೈನಲ್ ಪಂದ್ಯಗಳು ಶನಿವಾರ ಬೆಳಗಿನ ಜಾವ 4 ಗಂಟೆವರೆಗೆ ನಡೆದವು. ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆಳಸಿದ್ದ ಪಂದ್ಯದಲ್ಲಿ ಭಾರೀ ಸೆಣಸಾಟ ನಡೆಯಿತು. ಅಂತಿಮವಾಗಿ ಪುರುಷ ವಿಭಾಗದಲ್ಲಿ ಹಿಮಾಚಲ ಪ್ರದೇಶ ಹಾಗೂ ಮಹಿಳಾ ವಿಭಾಗದಲ್ಲಿ ಗುರುಕುಲ ಹರ್ಯಾಣ ರಾಜ್ಯ ತಂಡಗಳು ಕ್ರಮವಾಗಿ ಪ್ರಥಮ ಬಹುಮಾನ ಬಾಚಿಕೊಂಡು ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯ ಕಿರೀಟ ಧಾರಣೆ ಮಾಡಿದವು.
ಕಬಡ್ಡಿ ಕ್ರೀಡಾ ಲೋಕಕ್ಕೆ ಅದ್ಧೂರಿ ತೆರೆ
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ 64ನೇ ಜನ್ಮದಿನ ಪ್ರಯುಕ್ತ ಬಿಜೆಪಿ ಮತಕ್ಷೇತ್ರ ಘಟಕ, ಸಿ.ಸಿ.ಪಾಟೀಲ ಅಭಿಮಾನಿ ಬಳಗ, ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚ್ಯೂರ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರೊ ಮಾದರಿ ಕಬಡ್ಡಿ ಪಂದ್ಯಾವಳಿ 3 ದಿನಗಳ ಕಾಲ ಈ ಭಾಗದ ಕ್ರೀಡಾ ಲೋಕವನ್ನೇ ರಾಷ್ಟ್ರಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿ ಅದ್ಧೂರಿ ತೆರೆ ಕಂಡಿತು.
ಸಿದ್ಧಲಿಂಗಯ್ಯ ಮಣ್ಣೂರಮಠ