Advertisement

ಬೆಂಗಳೂರು ಗಲಭೆಯ ಪ್ರಮುಖ ಸೂತ್ರಧಾರಿ ಸಾದಿಕ್ ಆಲಿಯನ್ನು ಬಂಧಿಸಿದ NIA

08:06 PM Sep 24, 2020 | Hari Prasad |

ಬೆಂಗಳೂರು: ಕಳೆದ ತಿಂಗಳು ರಾಜ್ಯವನ್ನೇ ಭಯಭೀತಗೊಳಿಸಿದ್ದ ಕೆ.ಜಿ. ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಭದ್ರತಾ ದಳಕ್ಕೆ (NIA) ಮಹತ್ವದ ಯಶಸ್ಸು ಲಭಿಸಿದೆ.

Advertisement

ಘಟನೆಯ ತನಿಖೆಗೆ ಸಂಬಂಧಿಸಿದಂತೆ ಬೆಂಗಳೂರಿನ ಸುಮಾರು 30 ಕಡೆಗಳಲ್ಲಿ ತಪಾಸಣೆ ನಡೆಸಿದ NIA ಬ್ಯಾಂಕ್ ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಾದಿಕ್ ಆಲಿ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ NIA ಅಧಿಕಾರಿಗಳು, 44 ವರ್ಷದ ಸಾದಿಕ್ ಆಲಿ ಈ ಗಲಭೆಯ ಪ್ರಮುಖ ಸಂಚುಕೋರನಾಗಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

ಆಗಸ್ಟ್ 11ರ ರಾತ್ರಿ ಏಕಾಏಕಿ ಸಂಭವಿಸಿದ್ದ ಈ ಗಲಭೆಯಲ್ಲಿ ಒಟ್ಟು ನಾಲ್ಕು ಜನ ಮೃತಪಟ್ಟಿದ್ದರು. ಇವರಲ್ಲಿ ಮೂವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಗೆ ಪ್ರತಿಭಟನಾ ರೂಪದಲ್ಲಿ ಈ ಗಲಭೆ ಸಂಭವಿಸಿತ್ತು.

Advertisement

ಮತ್ತು ಉದ್ರಿಕ್ತರ ರೋಷಕ್ಕೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಸೇರಿದಂತೆ ಈ ಭಾಗಲದಲ್ಲಿನ ಹಲವಾರು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ವ್ಯಾಪಕ ಹಾನಿ ಸಂಭವಿಸಿತ್ತು.

ರಾಷ್ಟ್ರೀಯ ತನಿಖಾ ದಳವು ಮಂಗಳವಾರದಂದು ಅಧಿಕೃತವಾಗಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ಗಲಭೆ ಸಂಭವಿಸಿದ ರಾತ್ರಿಯಿಂದಲೇ ಸಾದಿಕ್ ಆಲಿ ತಲೆಮರೆಸಿಕೊಂಡಿದ್ದ.

ನಗರದ 30 ಕಡೆಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಏರ್ ಗನ್, ಪೆಲೆಟ್ ಗಳು, ಹರಿತವಾದ ಆಯುಧಗಳು ಮತ್ತು ಕಬ್ಬಿಣದ ರಾಡ್ ಗಳು ಸಿಕ್ಕಿವೆ ಎಂದು NIA ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next