Advertisement

ರೈತರ ಜಾತ್ರೆಗೆ ಕಳೆ ತಂದ ನಗರವಾಸಿಗಳು

11:04 AM Feb 08, 2020 | Suhan S |

ಬೆಂಗಳೂರು: ನಾಲ್ಕನೇ ರಾಷ್ಟ್ರೀಯ ತೋಟಗಾರಿಕೆ ಮೇಳದ 3ನೇ ದಿನ ವಾದ ಶುಕ್ರವಾರ ಜನ ಅಕ್ಷರಶಃ ಲಗ್ಗೆ ಇಟ್ಟರು. ಇದರಿಂದ “ಜಾತ್ರೆ’ಯ ಕಳೆಗಟ್ಟಿತು.

Advertisement

ಒಂದೇ ದಿನದಲ್ಲಿ ಸುಮಾರು 15 ಸಾವಿರ ಜನ ಮೇಳಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ ರೈತರು, ನಗರವಾಸಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೆಳಿಗ್ಗೆವರೆಗೂ ದಟ್ಟಣೆ ಎಂದಿನಂತೆ ಇತ್ತು. ಬಿಸಿಲು ಏರಿದಂತೆ ಜನ ನಾನಾ ಭಾಗ ಗಳಿಂದ ಹರಿದುಬಂದರು. ತಾಕುಗಳು, ಮಳಿಗೆಗಳು, ತಂತ್ರಜ್ಞಾನಗಳ ಪ್ರದರ್ಶನ ಇರುವ ಕಡೆಯೆಲ್ಲ ಮುತ್ತಿಕೊಂಡರು.

ಕೀಟಗಳ ನಿಯಂತ್ರಣ, ನೀರಿನ ನಿರ್ವಹಣೆ, ನಗರದ ಅಪಾರ್ಟ್‌ಮೆಂಟ್‌ಗಳಲ್ಲೇ ತರಕಾರಿ ಬೆಳೆಯುವ ವಿಧಾನಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು. ಮೇಳಕ್ಕೆ ಬಂದ ಬಹುತೇಕರು ಮನೆಗೆ ಹಿಂತಿರುಗುವಾಗ ಹೊಸ ತಳಿಗಳ ತರಕಾರಿ, ಹಣ್ಣುಗಳ ಬೀಜ ಮತ್ತು ಸಸಿಗಳು, ಅಲಂಕಾರಿಕ ಮತ್ತು ಔಷಧಿಯ ಬೀಜ ಗಳು, ಕೃಷಿ ಉಪಕರಣಗಳ ಚೀಲ ಕೈಯಲ್ಲಿ ಇರುತ್ತಿತ್ತು. ಸುಡು ಬಿಸಿಲು ಲೆಕ್ಕಿಸದೆ, ತೋಟಗಾರಿಕೆ ಲೋಕವನ್ನು ಕಣ್ತುಂಬಿ ಕೊಂಡರು. ಅಲ್ಲದೆ, ನೂರಾರು ಜನ ವಿಜ್ಞಾನಿಗಳೊಂದಿಗೆ ಸಂವಾದ ಕೂಡ ನಡೆಸಿದರು.

ಮೊದಲೆರಡು ದಿನಗಳು ತಲಾ 10ರಿಂದ 12 ಸಾವಿರ ಜನ ಭೇಟಿ ನೀಡಿ ದರು. ವಾರಾಂತ್ಯದ ಹಿನ್ನೆಲೆಯಲ್ಲಿ ಜನ ದಟ್ಟಣೆ ತುಸು ಹೆಚ್ಚಿತ್ತು. “ಸಿದ್ದು’ ಹಲಸಿಗೆ ಎಂದಿನಂತೆ ಭಾರಿ ಡಿಮ್ಯಾಂಡ್‌ ಇತ್ತು. ಮಧ್ಯಾಹ್ನದ ಹೊತ್ತಿಗೆ ಖಾಲಿಯಾಗಿದ್ದರಿಂದ ಇತರೆ ಇತರೆ ತಳಿಗಳತ್ತ ಒಲ್ಲದ ಮನಸ್ಸಿ ನಿಂದ ಮುಖಮಾಡಿದರು. ಐಐಎಚ್‌ಆರ್‌ ಅಭಿವೃದ್ಧಿ  ಪಡಿಸಿದ ಬೀಜಗಳಿಗೆ ನೂಕುನುಗ್ಗಲು ಉಂಟಾಗಿತ್ತು. 20 ಕೆಜಿಗಿಂತಲೂ ಅಧಿಕ ಗಾತ್ರದ ಹಲಸಿನ ಹಣ್ಣು, ಸೀಬೇಕಾಯಿಂದ ತಯಾರಿಸಿದ ಚಾಕೊಲೇಟ್‌ ಮಾದರಿಯ ಸೀಬೇಕಾಯಿ ಬಾರ್‌ ಮತ್ತು ಜ್ಯೂಸ್‌, ಅಲಂ ಕಾರಿಕ ಹೂವುಗಳನ್ನು ಕುತೂ ಹಲದಿಂದ ಜನ ನೋಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next