Advertisement

National Highway; ಪುಂಜಾಲಕಟ್ಟೆ -ಚಾರ್ಮಾಡಿ: ಅಧಿಕಾರಿಗಳ ಜತೆ ಸಂಸದ ಕ್ಯಾ.ಚೌಟ ಸಭೆ

01:47 AM Jul 29, 2024 | Team Udayavani |

ಬೆಳ್ತಂಗಡಿ: ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ ಜು. 28ರಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳೊಂದಿಗೆ ಪ್ರವಾಸಿ ಮಂದಿರದಲ್ಲಿ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಕರೆಯಲಾಯಿತು.

Advertisement

ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೀರಾ ಸಮಸ್ಯೆಯಾಗುತ್ತಿದೆ. ಈ ನೆಲೆಯಲ್ಲಿ ಅನುಕೂಲಕರವಾಗುವಂತೆ ರಸ್ತೆಯನ್ನು ಶೀಘ್ರವಾಗಿ ಕಾಮಗಾರಿ ನಡೆಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಹರೀಶ್‌ ಪೂಂಜ, ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಹೆದ್ದಾರಿ ಕಾರ್ಯ ನಿರ್ವಾಹಕ ಅಭಿಯಂತ ಶಿವಪ್ರಸಾದ್‌ ಅಜಿಲ, ಸಹಾಯಕ ಅಭಿಯಂತರಾದ ಕೀರ್ತಿ, ಗುರುಪ್ರಸಾದ್‌, ಪಟ್ಟಣ ಪಂ. ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್‌ ರಾವ್‌ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಶಿರಾಡಿ: ಕೆಲವೆಡೆ ಏಕಮುಖ ಸಂಚಾರ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಪ್ರದೇಶದಲ್ಲಿ ರಸ್ತೆಯ ಮೇಲೆ ಮಣ್ಣು ಇರುವುದರಿಂದ ಕೆಲವೆಡೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಶನಿವಾರ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿ ಬೃಹತ್‌ ಗಾತ್ರದ ಬಂಡೆಕಲ್ಲೊಂದು ಹೆದ್ದಾರಿಗೆ ಬಿದ್ದ ಬಳಿಕ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಇದರಿಂದ ಕೆಲವೆಡೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪೊಲೀಸರು ಒಮ್ಮೆ ಮೇಲಿನಿಂದ ಬರುವ ವಾಹನಗಳನ್ನು ಬಿಟ್ಟರೆ, ಮತ್ತೂಮ್ಮೆ ಕೆಳಗಿನಿಂದ ಬರುವ ವಾಹನಗಳನ್ನು ಬಿಡುತ್ತಿದ್ದಾರೆ. ರವಿವಾರ ಆಗಿರುವುದರಿಂದ ವಾಹನ ದಟ್ಟಣೆಯೂ ಹೆಚ್ಚಿದೆ.

Advertisement

ಬಸ್‌ ವಿಳಂಬ ಸಾಧ್ಯತೆ
ಘಾಟಿಯಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿರುವುದರಿಂದ ಮುಖ್ಯವಾಗಿ ಬಸ್‌ಗಳು ವಿಳಂಬವಾಗಿ ಗಮ್ಯ ತಾಣ ತಲುಪಲಿವೆ.

ಗ್ರಾಮೀಣ ಭಾಗದಲ್ಲಿ ಬಿಎಸ್ಸೆನ್ನೆಲ್‌ ಸಮಸ್ಯೆ; ಅಧಿಕಾರಿಗಳೊಂದಿಗೆ ಕ್ಯಾ| ಚೌಟ ಸಭೆ

ಮಂಗಳೂರು: ಗ್ರಾಮೀಣ ಭಾಗದ ಅನೇಕ ಮಂದಿ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ಗೆ ಅವಲಂಬಿತವಾಗಿದ್ದು, ನೆಟ್‌ವರ್ಕ್‌ ಸಹಿತ ವಿವಿಧ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಅಧಿಕಾರಿಗಳ ಜತೆ ಸಭೆ ನಡೆಸಿದರು.

ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಹಾಗೂ ಇಂಟರ್ನೆಟ್‌ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೊಂದರೆಗೆ ಒಳಗಾಗುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ, 4ಜಿ ಮೇಲ್ದರ್ಜೆ ಪ್ರಗತಿ ಹಾಗೂ ಗ್ರಾಮೀಣ ಭಾಗಗಳಲ್ಲಿರುವ ನೆಟ್‌ವರ್ಕ್‌ ಸಮಸ್ಯೆ ನಿವಾರಣೆಗೆ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಬಿಎಸ್ಸೆನ್ನೆಲ್‌ ಜಿ.ಎಂ. ನವೀನ್‌ ಕುಮಾರ್‌ ಗುಪ್ತ ಮತ್ತು ಎ.ಜಿ.ಎಂ. ಶಂಕರ್‌ ದೇವಾಡಿಗ ಅವರ ಜತೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next