ಕಾಸರಗೋಡು: ಮಳೆಯಿಂದಾಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಸೃಷ್ಟಿಯಾಗಿ ಶೋಚ ನೀಯ ಸ್ಥಿತಿಗೆ ತಲುಪಿದರೂ, ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳದ ಹೆದ್ದಾರಿ ಪ್ರಾಧಿಕಾರದ ನಿಲುವನ್ನು ಪ್ರತಿಭಟಿಸಿ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅವರು 24 ಗಂಟೆಗಳ ನಿರಾಹಾರ ಸತ್ಯಾಗ್ರಹ ಶುಕ್ರವಾರ ಬೆಳಗ್ಗೆ ಆರಂಭಿಸಿದರು.
ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವೇದಿಕೆ ನಿರ್ಮಿಸಿ ಸತ್ಯಾಗ್ರಹ ಆರಂಭಿಸಲಾಗಿದ್ದು, ಸೆ. 21ರಂದು ಬೆಳಗ್ಗೆ 9 ಗಂಟೆಗೆ ಸತ್ಯಾಗ್ರಹ ಸಂಪನ್ನಗೊಳ್ಳಲಿದೆ.
ಸತ್ಯಾಗ್ರಹವನ್ನು ಮಾಜಿ ಸಚಿವ ಸಿ.ಟಿ. ಅಹಮ್ಮದಲಿ ಉದ್ಘಾಟಿಸಿದರು. ಕಾಂಗ್ರೆಸ್ ನೇತಾರರಾದ ಹಕೀಂ ಕುನ್ನಿಲ್, ಕೆ.ಪಿ. ಕುಂಞಿಕಣ್ಣನ್, ಕೆ. ನೀಲಕಂಠನ್, ಸಿ.ಕೆ. ಶ್ರೀಧರನ್, ಎ. ಗೋವಿಂದನ್ ನಾಯರ್, ರವಿ ಕುಮಾರ್, ಯುಡಿಎಫ್ ಜಿಲ್ಲಾ ಅಧ್ಯಕ್ಷ ಎಂ.ಸಿ. ಕಮರುದ್ದೀನ್ ಮೊದಲಾದವರು ಮಾತನಾಡಿದರು.
ಶನಿವಾರ ಬೆಳಗ್ಗೆ ನಡೆಯುವ ಸಮಾ ರೋಪ ಸಮಾರಂಭವನ್ನು ವಿಧಾನಸಭಾ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಉದ್ಘಾಟಿಸುವರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರ ಗೋಡಿನಿಂದ ತಲಪಾಡಿಯವರೆಗೆ ಹಲವೆಡೆ ಗಳಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ. ಹೆದ್ದಾರಿ ಶೋಚನೀಯಾ ವಸ್ಥೆಗೆ ತಲುಪಿ ಹಲವು ವರ್ಷಗಳು ಸಂದರೂ, ಪೂರ್ಣ ರೀತಿಯಲ್ಲಿ ದುರಸ್ತಿ ನಡೆಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೆರೆಯ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಈ ದಾರಿ ಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದನ್ನು ಪ್ರತಿಭಟಿಸಿ ನಿರಾಹಾರ ಸತ್ಯಾಗ್ರಹ ಆರಂಭಿಸಲಾಗಿದೆ.