Advertisement

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ: ಹೈಕೋರ್ಟ್‌ ಆದೇಶ ಅನುಷ್ಠಾನಕ್ಕೆ ಆಗ್ರಹ

11:41 PM Oct 31, 2022 | Team Udayavani |

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ- ಕಾರ್ಕಳ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ರ ವ್ಯಾಪ್ತಿಗೊಳಪಡುವ ಪುತ್ತಿಗೆ, ಪಡುಮಾರ್ನಾಡು ಮತ್ತು ಸಾಣೂರು ಗ್ರಾಮದ ಸಂತ್ರಸ್ಥರ ಪರವಾಗಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಶೀಘ್ರ ಅನುಷ್ಠಾನಿಸುವಂತೆ ಆಗ್ರಹಿಸಿ ನವೆಂಬರ್‌ 5ಕ್ಕೆ ಹೆದ್ದಾರಿ ಸಂತ್ರಸ್ಥರು ಮಂಗಳೂರಿನಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

Advertisement

ಶನಿವಾರ ಇಲ್ಲಿನ ಸಮಾಜ ಮಂದಿರದಲ್ಲಿ ನಡೆದ ಹೆದ್ದಾರಿ ಸಂತ್ರಸ್ಥರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್‌ ಮಾತನಾಡಿ, ಹೆದ್ದಾರಿ ವಿಸ್ತರಣೆ ವೇಳೆ ಕೃಷಿ ಭೂಮಿ ಕಳೆದುಕೊಂಡವರಿಗೆ ಸರಕಾರ ಈ ಹಿಂದೆ ಅತ್ಯಲ್ಪ ಮೌಲ್ಯದ ಪರಿಹಾರ ನಿಗದಿಪಡಿಸಿದ್ದುದರ ವಿರುದ್ಧ ಮೂರು ಗ್ರಾಮಗಳ ಸಂತ್ರಸ್ಥರು ಹೈಕೋರ್ಟ್‌ ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿ ಪರವಾಗಿ ಕೋರ್ಟ್‌ ತೀರ್ಪು ಬಂದಿರುವುದು ನಮ್ಮ ಹೋರಾಟಕ್ಕೆ ಸಂದ ಮೊದಲ ಯಶಸ್ಸು ಆಗಿದೆ. ಈ ಆದೇಶ ಪಾಲಿಸಿ, ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಮಂಗಳೂರಿನಲ್ಲಿರುವ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಡ ಹೇರಲಾಗುವುದು. ಕೋರ್ಟ್‌ ಆದೇಶದಿಂದ ಇನ್ನುಳಿದ ಸುಮಾರು 20 ಗ್ರಾಮಗಳ ಸಂತ್ರಸ್ಥರ ಪರವಾಗಿ ಕಾನೂನು ಹೋರಾಟ ನಡೆಸಲು ನಮಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ ಎಂದರು.

ಭೂಮಿ ಬಿಟ್ಟುಕೊಡಲು
ಅವಸರ ಮಾಡಬೇಡಿ
ಹೆದ್ದಾರಿ ಇಲಾಖೆಯವರು ಖಾಸಗಿ ಜಾಗದ ಶೇ. 25ರಷ್ಟು ಮಾತ್ರ ಭೂಸ್ವಾ ಧೀನ ಮಾಡಿದರೂ ಶೇ. 90ರಷ್ಟು ಜಾಗ ಸ್ವಾಧೀನ ಮಾಡಿದ್ದೇವೆಂದು ಸಂಸದರು, ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನ್ಯಾಯಯುತ ಪರಿಹಾರ ಸಿಗದೆ ಯಾರೂ ಜಾಗಬಿಟ್ಟು ಕೊಡಬಾರದು. ಯಾವುದೇ ಹೋರಾಟಕ್ಕೂ ನಾವು ಸಿದ್ಧರಿರಬೇಕು ಎಂದರು.

ಸಮಿತಿಯ ಮುಖಂಡ ಬೃಜೇಶ್‌ ಶೆಟ್ಟಿ ಮಾತನಾಡಿ, ಸಂಸದರು, ಶಾಸಕರ ನಿರ್ಲಕ್ಷéದಿಂದ ನಾವು ಕೋರ್ಟ್‌, ಕಚೇರಿ ಅಲೆದು ತೊಂದರೆ ಅನುಭವಿಸುವಂತಾಗಿದೆ. ಕಮಿಷನ್‌ ಆಸೆಗಾಗಿ ಯೋಜನೆ ವಿಳಂಬವಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಕಾಮ ಗಾರಿ ಆರಂಭಿಸಿ ಗೊಂದಲ ಸೃಷ್ಟಿಸ ಲಾಗಿದೆ. ಅಧಿಕಾರಿಗಳು ಹೈಕೋರ್ಟ್‌ ಆದೇಶವನ್ನು ಪಾಲಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಸಾಣೂರು ಪಂಚಾಯತ್‌ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್‌ ಮಾತನಾಡಿ, ಹೈಕೋರ್ಟ್‌ ಆದೇಶ ಪಾಲನೆಗೆ ಅಧಿಕಾರಿಗಳಿಗೆ ಸೂಚಿಸುವಂತೆ ಸಾಣೂರು ಗ್ರಾಮಸ್ಥರ ನಿಯೋಗ ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರನ್ನು ಕಾರ್ಕಳದಲ್ಲಿ ಭೇಟಿ ಮಾಡಿ ಆಗ್ರಹಿಸಲಾಗುವುದು ಎಂದರು.

ಪಿ.ಕೆ. ಥಾಮಸ್‌, ಸದಾಶಿವ ಶೆಟ್ಟಿ, ನಾಝಿಮ್‌ ಸಂತ್ರಸ್ಥರ ಪರವಾಗಿ ಮಾತನಾಡಿದರು.ಹೋರಾಟ ಸಮಿತಿ ಪ್ರಮುಖರಾದ ರತ್ನಾಕರ ಶೆಟ್ಟಿ, ಪ್ರಕಾಶ್ಚಂದ್ರ, ಜಯರಾಮ ಪೂಜಾರಿ, ಮನೋಹರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next