Advertisement
ಹಳದಿ ಗೆರೆ ನಿಯಮ: ಪ್ರತಿಯೊಂದು ಟೋಲ್ ಲೇನ್‌ನಲ್ಲೂ ಟೋಲ್ ಬೂತ್‌ನಿಂದ 100 ಮೀಟರ್ ದೂರದಲ್ಲಿ ಹಳದಿ ಬಣ್ಣದ ಗೆರೆಯೊಂದನ್ನು ಎಳೆಯಲಾಗುತ್ತದೆ. ಒಂದು ವೇಳೆ, ಈ ಗೆರೆಗಿಂತಲೂ ಆಚೆ ವಾಹನಗಳು ಸರತಿಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದರೆ, ಹಳದಿ ಬಣ್ಣದ ಗೆರೆಯ ಒಳಗೆ ಇರುವ ವಾಹನಗಳು ಟೋಲ್ ಪಾವತಿಸದೇ ಮುಂದೆ ಸಾಗಬಹುದು. ಗೆರೆಯ ಹೊರಗಿರುವ ವಾಹನಗಳು ಮಾತ್ರ ಟೋಲ್ ಪಾವತಿಸಬೇಕು ಎಂದು ಹೊಸ ನಿಯಮ ಹೇಳುತ್ತದೆ. ಅಲ್ಲದೆ, ಒಂದು ವಾಹನದಿಂದ ಟೋಲ್ ಪಡೆಯುವ ಪ್ರಕ್ರಿಯೆ 10 ಸೆಕೆಂಡುಗಳಲ್ಲಿ ಮುಗಿಯಬೇಕು ಎಂದೂ ಸೂಚಿಸಲಾಗಿದೆ. ಟೋಲ್‌ನಲ್ಲಿ ಕಾಯುವ ಸಮಯವನ್ನು ತಪ್ಪಿಸಲು ಹಾಗೂ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲೆಂದು ಈ ನಿಯಮ ಜಾರಿ ಮಾಡಲಾಗಿದೆ. ದಟ್ಟಣೆ ತಪ್ಪಿಸಲೆಂದೇ ಈಗಾಗಲೇ ಫಾಸ್ಟಾಗ್ ಕಡ್ಡಾಯ ಮಾಡಲಾಗಿದ್ದರೂ ಟೋಲ್‌ಗಳಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿ ಮಾಡಿದೆ. Advertisement
ದಟ್ಟಣೆ ಹೆಚ್ಚಿದ್ದರೆ ಟೋಲ್ ಶುಲ್ಕ ವಿನಾಯಿತಿ: ಎನ್‌ಎಚ್‌ಎಐ
11:56 PM May 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.