Advertisement
ರಾ.ಹೆ. 66ರ ಕರಾವಳಿ ಬೈಪಾಸ್ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹೊಂಡಗುಂಡಿಗಳು. ರಸ್ತೆ ನಿರ್ವಹಣೆಯಲ್ಲಿ ರಾ.ಹೆ. ಪ್ರಾಧಿಕಾರ ಹಾಗೂ ಗುತ್ತಿಗೆ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದ ಪರಿಣಾಮ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರ ಜೀವಕ್ಕೆ ಸಂಚಕಾರ ತಂದಿದೆ.ಅನಾಹುತ ಸಂಭವಿಸುವ ಮುನ್ನ ರಾ.ಹೆ. ಇಲಾಖೆ ಹಾಗೂ ನವಯುಗ ಸಂಸ್ಥೆ ಎಚ್ಚರ ವಹಿಸಬೇಕಾಗಿದೆ. ರೋಗಿಗಳು, ವೃದ್ಧರು ಈ ಮಾರ್ಗದಲ್ಲಿ ಪ್ರಯಾಣ ಮಾಡದಂತಹ ಸನ್ನಿವೇಶ ಉದ್ಭವವಾಗಿದೆ. ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ವಾಹನ ಸಂಚಾರವಿದೆ. ಕರಾವಳಿ ಜಂಕ್ಷನ್ ಉಡುಪಿ, ಮಂಗಳೂರು, ಮಲ್ಪೆ ಬಂದರು, ಬೀಚ್, ಕೊಲ್ಲೂರು, ಕುಂದಾಪುರ, ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ಲಘುವಾಹನ ಸಂಚರಿಸುತ್ತದೆ. ದ್ವಿಚಕ್ರ ವಾಹನಗಳ ಸಂಚಾರ ಸಂಖ್ಯೆ ನಿಗದಿಸುವುದೇ ಕಷ್ಟ ಸಾಧ್ಯ. ರಸ್ತೆ ಹಾಳಾಗಿ ತಿಂಗಳುಗಳೇ ಕಳೆದಿವೆ. ಆದರೆ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿಲ್ಲ. ಎಲ್ಲಿ ಹೊಂಡಗಳು?
ಕರಾವಳಿ ಫ್ಲೈಒವರ್‌ನ ಅಂಡರ್ ಪಾಸ್, ಶಾರದಾ ಇಂಟರ್ ನ್ಯಾಶನಲ್ ಹೊಟೇಲ್, ನಿಟ್ಟೂರು ಸಮೀಪ ಹುಂಡೈ ಮಳಿಗೆ, ಕರಾವಳಿ ಹೊಟೇಲ್ ಎದುರಿನ ರಸ್ತೆಯಲ್ಲಿ ಭಾರೀ ಪ್ರಮಾಣ ಗುಂಡಿಗಳಿವೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ.
Related Articles
ಕಾಲಕಾಲಕ್ಕೆ ನಿರ್ವಹಣೆ ಮಾಡದ ಕಾರಣದಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ದ್ವಿಚಕ್ರ ವಾಹನ ಸವಾರರು ಈ ಮಾರ್ಗವಾಗಿ ಸಂಚರಿಸಲು ಭಯಪಡುವಂತಾಗಿದೆ.
-ರೂಪಾ ಬಂಗೇರಾ, ದ್ವಿಚಕ್ರವಾಹನ ಸವಾರರು.
Advertisement
ಹೊಂಡ ಭರ್ತಿಗೆ ಕ್ರಮರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗದಲ್ಲಿನ ಹೊಂಡಗಳನ್ನು ಮಚ್ಚಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರಯಾಣಿಕರಿಂದಲೂ ಈ ಕುರಿತು ದೂರುಗಳು ಬರುತ್ತಿದ್ದು ತೊಂದರೆ ಆಗದಂತೆ ಎಚ್ಚರವಹಿಸಲಾಗುತ್ತದೆ.
-ನವೀನ್, ಎಂಜಿನಿಯರ್. ರಾ.ಹೆ. ಪ್ರಾಧಿಕಾರ.