Advertisement

ನ್ಯಾಶನಲ್‌ ಹೆರಾಲ್ಡ್‌ ಕೇಸ್‌: ಪ್ರಿಯಾಂಕಾಗೂ ಸಂಕಷ್ಟ

11:24 AM May 14, 2017 | Team Udayavani |

ಹೊಸದಿಲ್ಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ, ಯಂಗ್‌ ಇಂಡಿಯನ್‌ ಪ್ರೈ.ಲಿ. ನ ಅಧ್ಯಕ್ಷೆಯೂ ಆದ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಜೊತೆಗೆ ಸೋನಿಯಾ ಅವರ ಪುತ್ರಿ, ಪ್ರಿಯಾಂಕಾ ವಾದ್ರಾ ಅವರಿಗೂ ನೋಟಿಸ್‌ ಮಾಡಲಾಗಿದೆ.
ಸುಮಾರು 2000 ಕೋಟಿ ರೂ.ಗಳ ಆಸ್ತಿ ಹೊಂದಿದ ಪತ್ರಿಕೆ ಮಾತೃ ಸಂಸ್ಥೆ ಅಸೋಸಿಯೇಟೆಡ್‌ ಜರ್ನಲ್ಸ್‌ ಆಫ್ ಇಂಡಿಯಾ (ಎಜೆಎಲ್‌) ಖರೀದಿಯಿಂದ ಅದು ಹೊಂದಿದ್ದ 2 ಸಾವಿರ ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿ ಯಾರಿಗೆ ಸಂದಿದೆ ಎಂಬ ಕುರಿತಾಗಿ 24 ಪುಟಗಳ ನೋಟಿಸ್‌ ಜಾರಿ ಮಾಡಲಾಗಿದೆ. 

Advertisement

ನೋಟಿಸ್‌ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಅದರಲ್ಲಿ ಎಜೆಎಲ್‌ನ ಷೇರುಗಳನ್ನು ಯಂಗ್‌ ಇಂಡಿಯಾ ಪಡೆಯಲು ಪ್ರಿಯಾಂಕಾ ಅವರು ನೆರವು ನೀಡಿದ್ದಾರೆ. ಅವರು ರತನ್‌ ದೀಪ್‌ ಟ್ರಸ್ಟ್‌ ಮತ್ತು ಜನಹಿತ್‌ ನಿಧಿ ಟ್ರಸ್ಟ್‌ ಮೂಲಕ ಸಂಪೂರ್ಣವಾಗಿ ಆಸ್ತಿ ಮೇಲೆ ಹಕ್ಕು ಹೊಂದುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next