Advertisement

ನ್ಯಾಷನಲ್ ಹೆರಾಲ್ಡ್ ಪ್ರಕರಣ​: ಜು. 21ಕ್ಕೆ ಹಾಜರಾಗಲು ಸೋನಿಯಾಗೆ ಇ.ಡಿ ನೋಟಿಸ್

06:08 PM Jul 11, 2022 | Team Udayavani |

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ವಿಚಾರಣೆಗೆ ಹಾಜರಾಗುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ಆದರೆ,ಕೋವಿಡ್ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಕಾರಣ ಹೆಚ್ಚಿನ ಸಮಯವಕಾಶ ಕೋರಿದ್ದರು.

ಈ ಹಿಂದೆ ಜೂನ್ 8 ರಂದು ವಿಚಾರಣೆಗಾಗಿ ಇಡಿ ಮುಂದೆ ಹಾಜರಾಗುವಂತೆ ಸೋನಿಯಾ ಅವರಿಗೆ ನೋಟಿಸ್ ನೀಡಿತು. ಆದರೆ ಅವರಿಗೆ ಕೋವಿಡ್ ಕಾಣಿಸಿಕೊಂಡಿದ್ದ ಕಾರಣ ಜೂನ್ 23 ರಂದು ಹಾಜರಾಗುವಂತೆ ಹೊಸ ಸಮನ್ಸ್ ಜಾರಿ ಮಾಡಿತ್ತು.

ಇದನ್ನೂ ಓದಿಶಿರಾಡಿ ಘಾಟ್ ಬಂದ್ ಮಾಡುವುದಿಲ್ಲ: ಸಚಿವ ಸಿ. ಸಿ. ಪಾಟೀಲ್‌ ಸ್ಪಷ್ಟನೆ

Advertisement

ಆದರೆ, ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ, ಸೋನಿಯಾ ಗಾಂಧಿ ಅವರು ಹೆಚ್ಚಿನ ಸಮಯಾವಕಾಶ ಕೇಳಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಸತತ ಐದು ದಿನಗಳ ಕಾಲ ಸುಮಾರು 50 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next