Advertisement

ಜಿಯೋಗ್ರಫಿಗೆ ಮುಜುಗರ

06:00 AM Jun 14, 2018 | Team Udayavani |

ನವ ದೆಹಲಿ: ಬೆಲ್ಲ ತಿನ್ನಬಾರದೆಂದು ಇತರರಿಗೆ ತಿಳಿ ಹೇಳ ಬಯಸುವವರು ಮೊದಲು ತಾವು ಬೆಲ್ಲ ತಿನ್ನುವುದನ್ನು ಬಿಡಬೇಕಲ್ಲವೇ? ಹಾಗೆ ಮಾಡದೇ ಸುಮ್ಮನೇ ಬುದ್ಧಿ ಹೇಳ ಹೊರಟರೆ ಏನಾದೀತು ಎಂಬುದಕ್ಕೆ ವಿಶ್ವವಿಖ್ಯಾತ “ನ್ಯಾಷನಲ್‌ ಜಿಯೋಗ್ರಫಿ’ ನಿಯತಕಾಲಿಕೆ ಮಾದರಿಯಾಗಿದೆ.  

Advertisement

ಜಗತ್ತಿನಾದ್ಯಂತ ಪೆಡಂಭೂತವಾಗಿ ಬೆಳೆದಿರುವ ಪ್ಲಾಸ್ಟಿಕ್‌ ಮಾಲಿನ್ಯದ ದುಷ್ಪರಿಣಾಮಗಳು ಹಾಗೂ ಮಾಲಿನ್ಯ ನಿವಾರಣೆ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹೊರ ತಂದ ಸಂಚಿಕೆಯೊಂದರ ಪ್ರತಿಗಳನ್ನು ಎರಡೆರಡು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಹಾಕಿ ಗ್ರಾಹಕರಿಗೆ ತಲುಪಿಸಿದ ಕಾರಣಕ್ಕಾಗಿ ಟ್ವಿಟ್ಟಿಗರಿಂದ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದೆ. ಮೊದಲು ಲೂಯಿಸ್‌ ರೋಚಾ ಎಂಬ ಟ್ವಿಟರಿಗರೊಬ್ಬರು ಇದನ್ನು ಮೊದಲು ಟೀಕೆ ಮಾಡಿದರು. ಇದರ ಬೆನ್ನಲ್ಲೇ ನೂರಾರು ಟೀಕೆಗಳ ಪ್ರವಾಹ ಬಂದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಯತಕಾಲಿಕೆಗೆ ಮುಜುಗರ ತಂದೊಡ್ಡಿದವು. 

ಅಸಲಿಗೆ, ಒಂದೇ ಕವರ್‌ನಲ್ಲಿ ನ್ಯಾಷನಲ್‌ ಜಿಯೋಗ್ರಫಿ ನಿಯತಕಾಲಿಕೆ ಹಾಗೂ ಕಿಡ್ಸ್‌ ಜಿಯೋಗ್ರಫಿ ಎಂಬ ಎರಡು ನಿಯತಕಾಲಿಕೆಗಳನ್ನು ಒಟ್ಟಿಗೇ ಕಳುಹಿಸಲಾಗಿತ್ತು. ಕಿಡ್ಸ್‌ ನಿಯತಕಾಲಿಕೆಗೂ ಮತ್ತೂಂದು ಪ್ಲಾಸ್ಟಿಕ್‌ ಹೊದಿಕೆ ಹಾಕಿದ್ದನ್ನು ಹಲವಾರು ಮಂದಿ ಪ್ರತಿಭಟಿಸಿದರು.  ಇದರ ಪರಿಣಾಮ, ತನ್ನ ತಪ್ಪಿನ ಅರಿವು ಮಾಡಿಕೊಂಡು, ಭಾರತ, ಅಮೆರಿಕ ಮತ್ತು ಇಂಗ್ಲೆಂಡ್‌ಗಳಿಗೆ ಕಳುಹಿಸಲಾದ ಸಂಚಿಕೆಗಳನ್ನು ಪೇಪರ್‌ ಕವರ್‌ನಲ್ಲಿ ಹಾಕಿ ರವಾನಿಸಲಾಗಿದೆ. ಉಳಿದೆಡೆಗೂ ಇದೇ ರೀತಿಯಲ್ಲಿ ಕಳುಹಿಸುತ್ತೇವೆ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next