Advertisement

ಗೋವಾದಲ್ಲಿ ನಡೆಯುವ ನ್ಯಾಶನಲ್‌ ಗೇಮ್ಸ್‌ : ಪ್ರಧಾನಿಯಿಂದ ಉದ್ಘಾಟನೆ

10:55 PM Aug 04, 2023 | Team Udayavani |

ಪಣಜಿ: ಇಲ್ಲಿ ನಡೆಯುವ 2023ನೇ ಸಾಲಿನ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗೋವಾದ ಕ್ರೀಡಾ ಸಚಿವ ಗೋವಿಂದ್‌ ಗೋಡೆ ತಿಳಿಸಿದರು.

Advertisement

ಅಕ್ಟೋಬರ್‌ 25ರಂದು ಉದ್ಘಾಟನ ಸಮಾರಂಭ ನಡೆಯಲಿದೆ. ನ. 9ರ ತನಕ ಕ್ರೀಡಾಕೂಟ ಸಾಗಲಿದೆ. ಇದು ಪ್ರತಿಯೊಬ್ಬ ಗೋವನ್ನರ ಕನಸು. ರಾಜ್ಯದ ಕ್ರೀಡಾ ಸಂಸ್ಕೃತಿಗೆ ಇದು ಮೆರುಗು ತುಂಬಲಿದೆ ಎಂದು ಸಚಿವರು ಹೇಳಿದರು. ಗೋವಾ ರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯಕ್ಕಾಗಿ 2012ರಿಂದಲೇ ಪ್ರಯತ್ನಿಸುತ್ತಿತ್ತು.

ರಾಜ್ಯ ಸರಕಾರ ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ 2.54 ಕೋಟಿ ರೂ. ಬಿಡುಗಡೆ ಮಾಡಲಿದೆ. ನಗದು ಬಹುಮಾನಕ್ಕಾಗಿ 73 ಲಕ್ಷ ರೂ. ಮೊತ್ತವನ್ನು ಮೀಸಲಿಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next