Advertisement

ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ

06:30 AM Jul 23, 2017 | |

ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ 2017 ಮತ್ತು ಕೃಷಿ ಹೊಂಡಗಳಲ್ಲಿ ಮೀನು ಮರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಉದ್ಘಾಟನೆಯನ್ನು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ. ಪಾರ್ಶ್ವನಾಥ ಅವರು ನೆರವೇರಿಸಿ ಮಾತನಾಡಿ, ಮೀನುಗಾರರ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೀನು ಕೃಷಿಕರಿಗೆ ಬೇಕಾದ ಹಲವು ಕಾರ್ಯಕ್ರಮಗಳನ್ನು ಮೀನುಗಾರಿಕೆ ಇಲಾಖೆ ಹಮ್ಮಿಕೊಂಡಿದೆ. ಇಲಾಖೆಯು ಮೀನುಮರಿಗಳನ್ನು ತಂದು ಅವುಗಳನ್ನು ಒಂದು ಹಂತದವರೆಗೆ ಸಾಕಿ ಅನಂತರ ಕೃಷಿಕರಿಗೆ ವಿತರಿಸುವ ಕಾರ್ಯಕ್ರಮವನ್ನು ಸಹ ಆಯೋಜಿಸುತ್ತಿದೆ. ಗ್ರಾಮ ಪಂಚಾಯತ್‌ ಮತ್ತು ಸರ್ಕಾರಿ ಕೆರೆಗಳಿಗೆ ಮೀನುಗಳನ್ನು ವಿತ್ತರಿಸುವ ಕಾರ್ಯಕ್ರಮಗಳಿವೆ ಎಂದರು.

ಅಧ್ಯಕ್ಷತೆಯನ್ನು ಕೆ.ವಿ.ಕೆ. ಮುಖ್ಯಸ್ಥ ಡಾ| ಧನಂಜಯ ವಹಿಸಿದ್ದರು.ಅತಿಥಿಗಳಾಗಿ ಬ್ರಹ್ಮಾವರ ಕೃಷಿ  ಮಹಾವಿದ್ಯಾಲಯ ಪ್ರಭಾರ ಪ್ರಾಂಶುಪಾಲ ಡಾ. ವಿನೋದ್‌, ಮೀನುಗಾರಿಕೆ ಸಹಾಯಕ ನಿರ್ದೇಶಕ ಶಿವಕುಮಾರ್‌ ಜಿ.ಎಮ್‌., ಕೋಟ ತೋಳಾರ್‌ ಓಷಿಯನ್‌ ಪ್ರೈ.ಲಿ. ವ್ಯವಸ್ಥಾಪಕ ಯೋಗೀಶ್‌ ಉಪಸ್ಥಿತರಿದ್ದರು.

ವಿಷಯ ತಜ್ಞ ಶ್ರೀನಿವಾಸ್‌ ಎಚ್‌. ಹುಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ| ಎಂ. ಶಂಕರ್‌ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ರಾಜಣ್ಣ ವಂದಿಸಿದರು. ಡಾ| ಎನ್‌.ಇ. ನವೀನ್‌ ಅವರು ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next