ನವದೆಹಲಿ: ಬಹು ನಿರೀಕ್ಷಿತ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಮಧ್ಯಾಹ್ನ ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗ ಈ ಬಾರಿ ಹಲವು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಸ್ಯಾಂಡಲ್ ವುಡ್ ನಲ್ಲಿ ಗಲ್ಲಾಪೆಟ್ಟಿಗೆ ದೋಚಿದ್ದ ನಟ ಯಶ್ ಅಭಿನಯದ ಕೆಜಿಎಫ್ ಅತ್ಯುತ್ತಮ ಆ್ಯಕ್ಷನ್ ಚಿತ್ರ ಎಂಬ ಪ್ರಶಸ್ತಿ ಪಡೆದಿದೆ.
ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸದ್ದು ಮಾಡಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಅಲ್ಲದೇ ಒಂದಲ್ಲ ಎರಡಲ್ಲ, ನಾತಿಚರಾಮಿ ಚಿತ್ರಗಳೂ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳ ವಿಭಾಗವಾರು ವಿವರ:
Related Articles
ಶ್ರುತಿ ಹರಿಹರನ್ ಅಭಿನಯದ ನಾತಿಚರಾಮಿ ಅತ್ಯುತ್ತಮ ಪ್ರಾದೇಶಿಕ ಚಿತ್ರ
ಬಿಂದು ಮಾಲಿನಿ ಅತ್ಯುತ್ತಮ ಗಾಯಕಿ(ನಾತಿಚರಾಮಿ)
ಅತ್ಯುತ್ತಮ ಸಂಕಲನ-ನಾತಿಚರಾಮಿ
ಅತ್ಯುತ್ತಮ ಸಾಹಸ ಚಿತ್ರ-ಕೆಜಿಎಫ್
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಅತ್ಯುತ್ತಮ ಮಕ್ಕಳ ಚಿತ್ರ
ಮೂಕಜ್ಜಿಯ ಕನಸು- ಅತ್ಯುತ್ತಮ ಚಿತ್ರ
ಒಂದಲ್ಲಾ, ಎರಡಲ್ಲಾ-ಅತ್ಯುತ್ತಮ ಬಾಲ ಕಲಾವಿದ
ವಿಶೇಷ ಪ್ರಶಸ್ತಿ-ಶ್ರುತಿ ಹರಿಹರನ್-ನಾತಿಚರಾಮಿ
ಅತ್ಯುತ್ತಮ ಸಿನಿಮಾ:
ರಾಜಸ್ಥಾನಿ ಸಿನಿಮಾ ಟರ್ಟಲ್
ಭೋಂಗಾ ಮರಾಠಿ ಸಿನಿಮಾ
ಬಾರಾಮ್ ತಮಿಳು ಚಿತ್ರ
ಅಂದಾದುನ್ ಹಿಂದಿ ಸಿನಿಮಾ
ಹಮೀದ್ ಉರ್ದು ಸಿನಿಮಾ
ಏಕ್ ಜೆ ಚಿಲೋ ರಾಜಾ ಬಂಗಾಲಿ ಸಿನಿಮಾ
ಸುಡಾನಿ ಫ್ರಂ ನೈಜೀರಿಯಾ ಮಲಯಾಳಂ ಸಿನಿಮಾ
ಮಹಾನಟಿ ತೆಲುಗು ಸಿನಿಮಾ
ನಾತಿಚರಾಮಿ ಕನ್ನಡ ಸಿನಿಮಾ
ಅಮೋರಿ ಕೊಂಕಣಿ ಸಿನಿಮಾ
ಬುಲ್ ಬುಲ್ ಕ್ಯಾನ್ ಸಿಂಗ್ ಅಸ್ಸಾಮಿ ಸಿನಿಮಾ
ಹರ್ಜೀತಾ ಪಂಜಾಬಿ ಸಿನಿಮಾ
ರೇವಾ ಗುಜರಾತಿ ಸಿನಿಮಾ