Advertisement

ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆಗೆ ವಿರೋಧ

02:13 PM Dec 09, 2021 | Team Udayavani |

ಬಳ್ಳಾರಿ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ದಿಢೀರ್‌ ಹೇರಿಕೆಯನ್ನು ವಿರೋಧಿಸಿ ಕೂಡಲೇವಾಪಸ್‌ ಪಡೆಯುವಂತೆ ಆಗ್ರಹಿಸಿ ನಗರದ ಡಿಸಿಕಚೇರಿ ಆವರಣದಲ್ಲಿ ಎಐಎಸ್‌ಇಸಿ, ಎಐಡಿಎಸ್‌ಒಸಂಘಟನೆಗಳಿಂದ ಬುಧವಾರ ಪ್ರತಿಭಟನೆನಡೆಸಲಾಯಿತು.

Advertisement

ಯಾವುದೇ ನೂತನ ಶಿಕ್ಷಣ ನೀತಿ ಜಾರಿಯಾದಾಗಅದರ ಆಧಾರದ ಮೇಲೆ ಶಿಕ್ಷಣ ತಜ್ಞರು,ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ,ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಟ ಒಂದೆರಡುವರ್ಷಗಳು ಬೇಕಾಗುತ್ತದೆ. ಆದರೆ, ಎನ್‌ಇಪಿ-2020ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದನಿರ್ದೇಶನವನ್ನು ತಾನೇ ಮೊದಲು ಅನುಷ್ಠಾನಕ್ಕೆತಂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯಸರ್ಕಾರವು, ಕೇವಲ 15-20 ದಿನಗಳ ತಯಾರಿಯಲ್ಲಿನೀತಿಯನ್ನು ಜಾರಿ ಮಾಡಿತು.

ಯಾವುದೇ ಪೂರ್ವತಯಾರಿ, ಸಮಾಲೋಚನೆ ಇಲ್ಲದ ಸರ್ಕಾರದಇಂತಹ ಅಡ್ಡಾದಿಡ್ಡಿ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಪ್ರತಿಯೊಂದು ವಿಭಾಗದಲ್ಲಿ 3 ಪ್ರಮುಖವಿಷಯಗಳು ಅಥವಾ ಕಲೆ, ವಾಣಿಜ್ಯ ಇತರೆಕೋರ್ಸಿನ 3 ವಿಷಯಗಳು ಕಾಲದ ಪರೀಕ್ಷೆಯಲ್ಲಿಸಾಬೀತಾಗಿದ್ದು, ಒಂದು ಇನ್ನೊಂದಕ್ಕೆ ಬೆರೆತುಅಂತರ್‌ ಸಂಬಂ ಧ ಆಗಿದ್ದವು. ಇದು ವಿದ್ಯಾರ್ಥಿಗಳಸಮಗ್ರ ಜ್ಞಾನಕ್ಕೆ ಸಹಾಯಕವಾಗಿ ಇದ್ದವು.

ಆದರೆ,ಎನ್‌ಇಪಿ-2020 ಉನ್ನತ ಶಿಕ್ಷಣದಲ್ಲಿ ಪದವಿಯಲ್ಲಿಭೌತಶಾಸ್ತ್ರದ ಜೊತೆಗೆ ಸಂಬಂಧವೇ ಇಲ್ಲದ ನೃತ್ಯ/ಸಂಗೀತ/ಕಲೆ/ಕ್ರೀಡೆ ಮುಂತಾದವನ್ನು ಓದಬೇಕು.ಇಂಥ ನೀತಿಯಿಂದ ಯಾವುದೇ ವಿಷಯದ ಬಗ್ಗೆಸಮಗ್ರ, ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳಲು ಹೇಗೆಸಾಧ್ಯ? ಎಂದು ಪ್ರಶ್ನಿಸಿರುವ ಪ್ರತಿಭಟನಾಕಾರರುವಿದ್ಯಾರ್ಥಿಗಳಿಗೆ- ಉಪನ್ಯಾಸಕರಿಗೆ ಪಠ್ಯಪಸ್ತಕಗಳಿಲ್ಲ.ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳಕೊರತೆ, ತರಗತಿಗಳ ಕೊರತೆಯಿಂದಾಗಿ, ತರಗತಿಸಮಯ ಆರಂಭವಾದರೂ ಏನು ಮಾಡಬೇಕುತಿಳಿಯದೇ ಈವರೆಗೂ ಯಾವುದೇ ಸಮಗ್ರ ರೀತಿಯಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ.

ಇದರಿಂದಾಗಿ ಕಲಿಸುವ ಉಪನ್ಯಾಸಕರು ಹಾಗೂಕಲಿಯುವ ವಿದ್ಯಾರ್ಥಿಗಳು ಇಬ್ಬರು ಅತ್ಯಂತಗೊಂದಲದ ಮನಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಎನ್‌ಇಪಿ-2020ನ್ನು ಈ ಕೂಡಲೇ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು. ಬಳಿಕಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಎಐಎಸ್‌ಇಸಿ ಜಿಲ್ಲಾಧ್ಯಕ್ಷ ಆರ್‌. ಸೋಮಶೇಖರಗೌಡ, ಜಿಲ್ಲಾ ಕಾರ್ಯದರ್ಶಿಎಸ್‌.ಜಿ. ನಾಗರತ್ನ, ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆಸೌಮ್ಯಾ, ಜೆ.ಪಿ. ರವಿಕಿರಣ್‌, ಮಂಜು, ಶಾಂತಿ,ಅನುಪಮಾ, ವಿವಿಧ ಕಾಲೇಜುಗಳ ಉಪನ್ಯಾಸಕರು,ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next