Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅವೈಜ್ಞಾನಿಕ: ಕೀರ್ತಿ ಗಣೇಶ್‌

04:39 PM Nov 10, 2021 | Team Udayavani |

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಮಾಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ದೋಷಪೂರಿತವಾಗಿದ್ದು, ಇದೊಂದುಅವೈಜ್ಞಾನಿಕ ಪದ್ಧತಿ ಎಂದು ಎನ್‌ಎಸ್‌ಯುಐರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌ ದೂರಿದರು.

Advertisement

ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳುಸಾಕಷ್ಟು ತೊಂದರೆ ಅನುಭವಿಸುತ್ತಾರೆ.

ಜಾರಿಮಾಡುವ ಮೊದಲು ಸಾಧಕ-ಬಾಧಕಗಳ ಬಗ್ಗೆಚರ್ಚಿಸದೇ ಏಕಾಏಕಿ ಅನುಷ್ಠಾನಕ್ಕೆ ತರುವುದುಸರಿಯಲ್ಲ ಎಂದರು. ಮುಂದಿನ ದಿನಗಳಲ್ಲಿವಿಶ್ವವಿದ್ಯಾನಿಲಯಗಳೇ ಇರುವುದಿಲ್ಲ. ಅದೆಲ್ಲವೂ ಖಾಸಗಿಯಾಗಲಿವೆ. ವಿದ್ಯಾರ್ಥಿ ವೇತನವನ್ನೇನಂಬಿಕೊಂಡು ಶಿಕ್ಷಣ ಪಡೆಯುತ್ತಿರುವವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದರಲ್ಲಿ ಅನುಮಾನವಿಲ್ಲ.

ಈನಿಟ್ಟಿನಲ್ಲಿಎನ್‌ಎಸ್‌ಯುಐರಾಜ್ಯದಎಲ್ಲಜಿಲ್ಲೆಗಳಲ್ಲಿಪ್ರವಾಸ ಮಾಡಿ,ಕ್ಯಾಂಪೇನ್‌ ನಡೆಸುತ್ತಿದೆ. ರಾಜ್ಯದಎಲ್ಲಾ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿವಿದ್ಯಾರ್ಥಿಗಳ ಸಂಕಟ ಆಲಿಸಿ 45 ದಿನಗಳ ನಂತರರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದುಎಂದು ತಿಳಿಸಿದರು.

ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ತತ್ವಗಳನ್ನುಗಾಳಿಗೆ ತೂರಿ ಶಿಕ್ಷಣವನ್ನು ಖಾಸಗೀಕರಣ,ವ್ಯಾಪಾರೀಕರಣ ಮಾಡಲು ಸರ್ಕಾರ ಹುನ್ನಾರ ನಡೆಸಿದೆ.

Advertisement

ಇದರ ವಿರುದ್ಧ ದೇಶದ ಎಲ್ಲ ರಾಜ್ಯಗಳವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಚಳಿಗಾಲದಅಧಿವೇಶನದ ವೇಳೆ ದೆಹಲಿಯ ಸಂಸತ್‌ಭವನದ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನೆಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ಮಾತನಾಡಿ, ಒಂದೂವರೆ ವರ್ಷದಿಂದ ಕೋವಿಡ್‌ಕಾರಣಕ್ಕೆ ಶಾಲಾ-ಕಾಲೇಜುಗಳು ಮುಚ್ಚಿದ್ದವು.ಎನ್‌ಎಸ್‌ಯುಐ ಕೂಡಕಾರ್ಯ ಚಟುವಟಿಕೆ ನಿಲ್ಲಿಸಿತ್ತು.

ಈಗ ಕ್ರಿಯಾಶೀಲವಾಗಿದ್ದು, ಜಿಲ್ಲೆಯಲ್ಲಿ ಸಂಘಟನೆಚುರುಕು ಪಡೆದುಕೊಳ್ಳಲಿದೆ ಎಂದು ಹೇಳಿದರು.ಕಾಂಗ್ರೆಸ್‌ ಯುವ ಮುಖಂಡರಾದ ಆಜಾಮ್‌,ಎನ್‌.ಡಿ. ಕುಮಾರ್‌, ಅಶೋಕ್‌ ನಾಯ್ಡು,ವಿನಯ್‌ ಗೋಡೆಮನೆ, ಮಮತಾ ನೇರ್ಲಗಿಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next