Advertisement
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗ ವೇದಿಕೆ, ಯಲ್ಲೂಬಾಯಿ ಗುಳೇದಗುಡ್ಡ ವೇದಿಕೆ, ಡಾ|ಬಸವರಾಜ ಮಲ್ಲಶೆಟ್ಟಿ ವೇದಿಕೆ ಹಾಗೂ ಸಿ.ಜಿ.ಕೆ. ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಶಿಲ್ಪಕಲಾ ಶಿಬಿರ ಮಾ.14ರಂದು ಸಮಾರೋಪ ಆಗಲಿದ್ದು, ಉಳಿದಂತೆ ಬೀದಿ ನಾಟಕ, ಪುಸ್ತಕ ಪ್ರದರ್ಶನ ಸೇರಿ ಪ್ರತಿ ದಿನ ಸಂಜೆ 7:00 ಗಂಟೆಗೆ ಬಹುಭಾಷೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
Related Articles
Advertisement
ಅಂದು 4:30 ಗಂಟೆಗೆ ಜಾನಪದ ನೃತ್ಯ, ಹೆಜ್ಜೆ ಮಜಲು, ಭರತ ನಾಟ್ಯ ಜಾನಪದ ಕಲೆಗಳ ಪ್ರದರ್ಶನ, 6:30 ಗಂಟೆಗೆ ಎಸ್‌ಪಿ ವರ್ತಿಕ ಕಟಿಯಾರ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಪಾಲಿಕೆ ಆಯುಕ್ತ
ಸುರೇಶ ಇಟ್ನಾಳ್, ಎಂಜನಿಯರ್ ಡಾ|ವಿರೂಪಾಕ್ಷಪ್ಪ ಯಮಕನಮರಡಿ, ಬಿ.ವಿ.ರಾಜಾರಾಂ ಭಾಗವಹಿಸಲಿದ್ದಾರೆ. ಸಂಜೆ 7:30 ಗಂಟೆಗೆ ಏಕರಂಗ ಥೀಯಟರ್ ತಂಡ “ನಟ ಸಾಮ್ರಾಟ’ ನಾಟಕ ಪ್ರಸ್ತುತ ಪಡಿಸಲಿದೆ ಎಂದರು.
ಮಾ.17ರ ಬೆಳಿಗ್ಗೆ 10:00 ಗಂಟೆಗೆ ರಂಗ ವಿನ್ಯಾಸ ವಿಚಾರ ಸಂಕಿರಣಕ್ಕೆ ಅಲೋಕ ಚಟರ್ಜಿ ಚಾಲನೆ ನೀಡಲಿದ್ದು, ಪ್ರಾಚಾರ್ಯ ಕೆ.ಪಿ.ಅಶ್ವಥ ನಾರಾಯಣ ವಿಷಯ ಮಂಡಿಸಲಿದ್ದಾರೆ. ಬೆಂಗಳೂರು ರಂಗಾಯಣ ನಿರ್ದೇಶಕ ಚನ್ನಕೇಶವ, ಪತ್ರಕರ್ತ ಬಸವರಾಜ ಹೊಂಗಲ ವಿಷಯ ವಿಸ್ತರಿಸುವರು. ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಸಂವಾದ ನಡೆಸಲಿದ್ದು, ಸಂಜೆ 4:30 ಗಂಟೆಗೆ ಜಾನಪದ ಕಲಾ ಪ್ರದರ್ಶನ ನಡೆಯಲಿವೆ. ಅಂದು ಸಂಜೆ 6:30 ಗಂಟೆಗೆ ಡಿಸಿ ದೀಪಾ ಚೋಳನ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, 7:30 ಗಂಟೆಗೆ ದಯಾದೃಷ್ಟಿ ರಂಗವಿನಾಯಕ ರಂಗ ಮಂಡಳಿ “ಪಾರ್ಕ್'(ಹಿಂದಿ), 8:30 ಗಂಟೆಗೆ ಅರ್ಣವ ಆರ್ಟ್ಸ್ ಟ್ರಸ್ಟ್ ತಂಡ ‘ಟು ಕಿಲ್ ಆರ್ ನಾಟ್ ಟು ಕಿಲ್’ ನಾಟಕ ಪಸ್ತುತ ಪಡಿಸಲಿವೆ. ಪ್ರತಿನಿತ್ಯ ಬೆಳಿಗ್ಗೆ 10:00 ರಿಂದ 10:30ರವರೆಗೆ ರಂಗ ಗೀತೆಗಳ ಪ್ರದರ್ಶನ ನಡೆಯಲಿವೆ ಎಂದು ತಿಳಿಸಿದರು.
ಮಾ.18ರ ಬೆಳಿಗ್ಗೆ 10:30 ಗಂಟೆಗೆ “ರಂಗವಿಮರ್ಶೆ’ ವಿಚಾರ ಸಂಕಿರಣಕ್ಕೆ ಡಾ| ವೀರಣ್ಣ ರಾಜೂರ ಚಾಲನೆ ನೀಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು. ರಂಗವಿಮರ್ಶೆ ಪ್ರಸ್ತುತಿ, ಅಂದು-ಇಂದು ಬಗ್ಗೆ ಪತ್ರಕರ್ತ ಬಂಡು ಕುಲಕರ್ಣಿ ವಿಷಯ ಮಂಡಿಸಲಿದ್ದು, ನಟರಾದ ಸುರೇಶ ಕುಲಕರ್ಣಿ, ರವಿ ಕುಲಕರ್ಣಿ ವಿಷಯ ವಿಸ್ತರಿಸುವರು. ಡಾ| ಬಿ.ಎ.ಉಪಾಧ್ಯಾ ಸಂವಾದ ನಡೆಲಿದ್ದಾರೆ.
12:15 ಗಂಟೆಗೆ ನಾಟಕಗಳ ಪ್ರಾಯೋಗಿಕ ವಿಮರ್ಶೆ ಬಗ್ಗೆ ಗುಡಿಹಳ್ಳಿ ನಾಗರಾಜ ವಿಷಯ ಮಂಡಿಸಲಿದ್ದು, ಡಿ.ಎಚ್.ಕೋಲಾರ್, ಡಾ| ಬಸವರಾಜ ಹೊನ್ನಳ್ಳಿ ವಿಷಯ ವಿಸ್ತರಿಸುವರು. ಆರ್. ವೆಂಕಟರಾಜು ಸಂವಾದ ನಡೆಸುವರು. ಮಧ್ಯಾಹ್ನ 3:00ಗಂಟೆಗೆ ಮಲ್ಲಪ್ಪ ಹೊಂಗಲ ತಂಡದಿಂದ ಬೀದಿ ನಾಟಕ ನಡೆಯಲಿದೆ. ಸಂಜೆ 4:30 ಗಂಟೆಗೆ ವಿವಿಧ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಸಂಜೆ 7:00 ಗಂಟೆಗೆ ರಂಗ ವಿಶಾರದ ಥಿಯೇಟರ್ “ಬೂಡೆ ನೇ ಕಹಾ'(ಹಿಂದಿ) ನಾಟಕ ಪ್ರದರ್ಶನವಾಗಲಿದೆ ಎಂದರು.
ಮಾ.19ರಂದು ಬೆಳಿಗ್ಗೆ 10:30ಗಂಟೆಗೆ ಸಾಹಿತಿಗಳಾದ ಕೆ.ಎಚ್.ನಾಯಕ, ಶಂಕರ ಹಲಗತ್ತಿ, ಹರ್ಷ ಡಂಬಳ ಸಮೀಕ್ಷಕರ ನುಡಿ ವ್ಯಕ್ತಪಡಿಸಲಿದ್ದು, ಮಧ್ಯಾಹ್ನ 3:00 ಗಂಟೆಗೆ ಬೀದಿ ನಾಟಕ ನಡೆಯಲಿದೆ. 4:00 ಗಂಟೆಗೆ ಜಾನಪದ ಕಲಾ ಪ್ರದರ್ಶನ, ಸಮಾರೋಪ ಭಾಷಣ ನಡೆಯಲಿದೆ ಎಂದರು.