Advertisement

ಇಂದು(ಜು.1) ವೈದ್ಯರ ದಿನ: ಅಂದು ಪೆಟ್ರೋಲ್ ಬೆಲೆ 5 ರೂ., ವೈದ್ಯರ ಶುಲ್ಕ 2 ರೂಪಾಯಿ!

08:44 AM Jul 01, 2021 | Team Udayavani |

ಮಣಿಪಾಲ:ಕೋವಿಡ್ ಸೋಂಕು, ಬ್ಲ್ಯಾಕ್ ಫಂಗಸ್, ಡೆಲ್ಟಾ, ಡೆಲ್ಟಾ ಪ್ಲಸ್, ಜಾಂಡೀಸ್, ಸ್ಪ್ಯಾನಿಶ್ ಫ್ಲೂ, ಕಾಲರಾ, ಮಲೇರಿಯಾ ಹಾವಳಿಯ ಸಂದರ್ಭದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರವಾದದ್ದು. ಈ ಹಿಂದೆ ಜಗತ್ತನ್ನು ವಿವಿಧ ಸೋಂಕುಗಳು ಕಾಡಿದಾಗಲೂ ವೈದ್ಯರ ಹಾಗೂ ವೈದ್ಯಕೀಯ ಕ್ಷೇತ್ರದ ಸೇವೆ ಶ್ಲಾಘನೀಯವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ರಾಷ್ಟ್ರೀಯ (ಜುಲೈ) ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಉದಯವಾಣಿ ಡಾಟ್ ಕಾಮ್ ನ ಅವಿನಾಶ್ ಕಾಮತ್ ಅವರು ಉಡುಪಿಯ ವೈದ್ಯ ಡಾ. ಪಿ.ಗಣಪತಿ ರಾವ್ ಅವರ ಜತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ…

Advertisement

ಅಂದು ಪೆಟ್ರೋಲ್ ಬೆಲೆ 5 ರೂ., ವೈದ್ಯರ ಶುಲ್ಕ 2 ರೂ.!
ನಾನು 1977ರಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದೆ. ಉಡುಪಿಯ ಅಂಬಾಗಿಲಿನಲ್ಲಿ ಕ್ಲಿನಿಕ್ ಇದ್ದಿದ್ದು, ದೊಡ್ಡಣಗುಡ್ಡೆ ಮನೆಯಲ್ಲಿಯೂ ರೋಗಿಗಳಿಗೆ ಶುಶ್ರೂಷೆ ನಡೆಸುತ್ತಿದ್ದೆ. ಅಂದು ವೈದ್ಯರ ಸಂಖ್ಯೆಯೂ ಕಡಿಮೆ ಇತ್ತು. ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯರ ಬಗ್ಗೆ ಗೌರವವೂ ಇತ್ತು. ಆದರೆ ಈಗ ಅಷ್ಟೊಂದು ಗೌರವ ಇಲ್ಲ. 70-80ರ ದಶಕದಲ್ಲಿ ಮನೆಗಳಿಗೆ ತೆರಳಿ ಚಿಕಿತ್ಸೆ ಕೊಡುತ್ತಿದ್ದೆ. ರೋಗಿಗಳು ಅಂದು ನಮ್ಮನ್ನು ಕಾಯುತ್ತಿದ್ದರು. ಈಗ ಅವರಿಗೂ ಅಷ್ಟೊಂದು ತಾಳ್ಮೆ ಇಲ್ಲ. ಆ ಕಾಲದಲ್ಲಿ ಟೈಫಾಯ್ಡ್, ಜಾಂಡೀಸ್, ಮಲೇರಿಯಾದಂತಹ ಕಾಯಿಗಳು ಇದ್ದವು. ಡೆಂಗ್ಯು, ಚಿಕೂನ್ ಗುನ್ಯಾದಂತಹ ಕಾಯಿಲೇ ಇಲ್ಲವಾಗಿತ್ತು ಎಂಬುದು ಡಾ.ಗಣಪತಿ ರಾವ್ ಅವರ ನುಡಿಯಾಗಿದೆ.

ನಿಮಗೆ ಅಚ್ಚರಿಯಾಗಬಹುದು ಈಗ 70ರ ದಶಕದಲ್ಲಿ ರೋಗಿಯ ಪರೀಕ್ಷೆ ನಡೆಸಿ, ಮಾತ್ರೆ, ಔಷಧ ಕೊಟ್ಟು ಎರಡು ರೂಪಾಯಿ ಶುಲ್ಕ
ತೆಗೆದುಕೊಳ್ಳುತ್ತಿದ್ದೆ. ಆ ಕಾಲದಲ್ಲಿ ನಮ್ಮ ಶುಲ್ಕ ಅಂತಲ್ಲ ಬೆಲೆಗಳು, ಶುಲ್ಕಗಳು ಕಡಿಮೆಯೇ ಇದ್ದವು. ಅಂದು ಒಂದು ಲೀಟರ್ ಪೆಟ್ರೋಲ್ ಬೆಲೆ 5 ರೂಪಾಯಿ ಇತ್ತು. ಒಂದು ಪವನ್ ಚಿನ್ನದ ಬೆಲೆ 250 ರೂಪಾಯಿ. ಇಂಜೆಕ್ಷನ್ ಗೆ ಒಂದು ರೂಪಾಯಿ, ಆಗ ಕೂಲಿ ಕಾರ್ಮಿಕರ ಸಂಬಳ ಕೂಡಾ ಐದಾರು ರೂಪಾಯಿ ಅಷ್ಟೇ.

ಉದಯವಾಣಿ, ತರಂಗಕಕ್ಕೆ ಲೇಖನ ಬರೆಯುತ್ತಿದ್ದೆ. ಇತ್ತೀಚೆಗೆ ಕಾಯಿಲೆಗಳ ಸ್ವರೂಪವೂ ಬೇರೆ, ಬೇರೆಯಾಗಿದೆ. ಆಧುನಿಕ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಂದಿದೆ. ಒಂದೊಂದು ವಿಭಾಗಕ್ಕೂ ಬೇರೆ, ಬೇರೆ ವೈದ್ಯರಿದ್ದಾರೆ. ಆ ಕಾಲಕ್ಕೂ, ಇಂದಿಗೂ ತುಂಬಾ ವ್ಯತ್ಯಾಸವಿದೆ. ಇದೀಗ ನಾನು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ 24ಗಂಟೆಗಳ ವೈದ್ಯ ಸೇವೆಯನ್ನು ನೀಡುವುದನ್ನು ಕಡಿಮೆ ಮಾಡಿದ್ದೇನೆ. ವಯಸ್ಸಾದ ಹಿನ್ನೆಲೆಯಲ್ಲಿ ಮನೆಗೆ ಬಂದವರಿಗೆ ಔಷಧ ಕೊಡುತ್ತಿದ್ದೇನೆ ಎಂದು ತಮ್ಮ ಮುಕ್ತ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಡಾ.ಗಣಪತಿ ರಾವ್ ಅವರು ಕೆಮ್ಮಣ್ಣು ತೋನ್ಸೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. ಡಾ| ಬಿ. ಸಿ. ರಾಯ್‌ ಅವರ ಜನ್ಮದಿನವಾದ ಜುಲೈ 1ರಂದು ದೇಶದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ವೈದ್ಯರ ದಿನಾಚರಣೆಯ ವೇಳೆ ವೈದ್ಯರನ್ನು ಸಮ್ಮಾನಿಸುವ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ವೈದ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಹಿರಿಯ ವೈದ್ಯರನ್ನು, ದಾದಿಯರನ್ನು ಗೌರವಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next