Advertisement

ಶೀಘ್ರದಲ್ಲೇ ರಾಷ್ಟ್ರೀಯ ದತ್ತಾಂಶ ಕೋಶ ಸ್ಥಾಪನೆ: ಡಿವಿಎಸ್‌

07:40 AM Jan 19, 2018 | Team Udayavani |

ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಸಾಂಖೀÂಕ ವಿವರಗಳು ಮಹತ್ವದ್ದಾಗಿದ್ದು, ಎಲ್ಲ ಪ್ರಮುಖ ಇಲಾಖೆಗಳ ದತ್ತಾಂಶ, ಸಾಂಖೀÂಕ ವಿವರ ಒಂದೇ ಕಡೆ ಲಭ್ಯವಾಗುವಂತೆ ರಾಷ್ಟ್ರೀಯ ದತ್ತಾಂಶ ಕೋಶ (ನ್ಯಾಷನಲ್‌ ಡಾಟಾ ವೇರ್‌ಹೌಸ್‌) ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸಾಂಖೀÂಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ನಗರದಲ್ಲಿ ಗುರುವಾರ ಆಯೋಜನೆಯಾಗಿದ್ದ ಕೇಂದ್ರ ಮತ್ತು ರಾಜ್ಯ ಸಾಂಖೀÂಕ ಸಂಸ್ಥೆಗಳ ಒಕ್ಕೂಟದ 25ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ವಸ್ತುನಿಷ್ಠ ಸಾಂಖೀÂಕ ವಿವರವು ನೀತಿ ನಿರೂಪಣೆ, ಯೋಜನೆ‌ ಅನುಷ್ಠಾನ, ಶ್ರೇಯಾಂಕ ಸ್ಥಿತಿಗತಿ ತಿಳಿಯಲು ಉಪಯುಕ್ತವೆನಿಸಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಸುಧಾರಿತ ತಂತ್ರಜ್ಞಾನ ಬಳಕೆ ಮೂಲಕ ವಸ್ತುನಿಷ್ಠ ದತ್ತಾಂಶ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಜತೆಗೆ ಎಲ್ಲ ಇಲಾಖೆಗಳ ದತ್ತಾಂಶ ಒಂದೆಡೆ ಲಭ್ಯವಾಗುವಂತೆ ರಾಷ್ಟ್ರೀಯ ದತ್ತಾಂಶ ಕೋಶ ತೆರೆಯಲಾಗುವುದು ಎಂದು ತಿಳಿಸಿದರು.

ಕೇಂದ್ರ ಸಾಂಖೀÂಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವ ವಿಜಯ್‌ ಗೋಯೆಲ್‌, ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಸಾಂಖೀÂಕ ವಿವರಗಳು ಮಹತ್ವದ್ದೆನಿಸಿವೆ. ಅದರಲ್ಲೂ ಸ್ಥಳೀಯ ಮಟ್ಟದಲ್ಲಿ ಸಂಗ್ರಹಿಸುವ ಅಂಕಿಸಂಖ್ಯೆಗಳಿಂದ ಸಾಮಾಜಿಕ- ಆರ್ಥಿಕ ಸ್ಥಿತಿಗತಿಯ ವಸ್ತುಸ್ಥಿತಿ ಅರಿವಾಗುತ್ತದೆ. ಮೂಲ ಸೌಕರ್ಯ, ಆರೋಗ್ಯ, ಶಿಕ್ಷಣ, ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಸಾಂಖೀÂಕ ವಿವರಗಳು ಮುಂದೆ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next