ಎಲ್ಲಿ?: ಚೌಡಯ್ಯ ಮೆಮೊರಿಯಲ್ ಹಾಲ್, ವೈಯಾಲಿ ಕಾವಲ್
ಯಾವಾಗ?: ಏ.14, ಶನಿವಾರ ಸಂಜೆ 6.15
ಸಂಪರ್ಕ: 9886598171
Advertisement
ಹಿಂದೂಸ್ಥಾನಿ ಸಂಗೀತ ಲಹರಿರಾಗ ಸಂಗಮ ಸಂಸ್ಥೆ ವತಿಯಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜನೆಯಾಗಿದೆ. ಉಸ್ತಾದ್ ರಯೀಸ್ ಬಾಲೇಖಾನ್ ಅವರ ಗಾಯನಕ್ಕೆ ಪಂಡಿತ್ ವಿಶ್ವನಾಥ್ ನಾಕೋಡ್ (ತಬಲಾ) ಸತೀಶ್ ಕೊಳ್ಳಿ (ಸಂವೇದಿನಿ) ಅವರು ಸಹಕಾರ ನೀಡಲಿದ್ದಾರೆ.
ಎಲ್ಲಿ?: ಎಸ್.ಎನ್.ಇ.ಎ ಭವನ, 1020, ಬಿ ಬ್ಲಾಕ್, ಅಲಹಾಬಾದ್ ಬ್ಯಾಂಕ್ ಹತ್ತಿರ, ಸಹಕಾರ ನಗರ
ಯಾವಾಗ?: ಏ.15, ಭಾನುವಾರ ಸಂಜೆ 6
ವಿಆರ್‌ಸಿ ಅಕಾಡೆಮಿ ಆರ್ಟ್ ಮ್ಯೂಸಿಕ್ ಆ್ಯಂಡ್ ಡ್ಯಾನ್ಸ್ ಹಾಗೂ ಲಾಸ್ಯ ಆರ್ಟ್ಸ್ ಮಲೇಷಿಯ ವತಿಯಿಂದ “ಮಾಧವಂ; ದಿ ಎಟರ್ನಲ್ ಬ್ಲಿಸ್’..ಎಂಬ ನೃತ್ಯ ಪ್ರದರ್ಶನ ನಡೆಯಲಿದೆ. ಕೃತಿಕಾ ರಾಮಚಂದ್ರನ್ ಮತ್ತು ಶಂಗಾರಿ ಆ್ಯಡ್ರಿಯನ್, ಮಾಧವನನ್ನು ನೆನೆಯುತ್ತಾ ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ. ಇವರು ಗುರುವಾಯೂರು ಉಷಾ ದೊರೈ ಅವರ ಶಿಷ್ಯೆಯರು. ಇವರಿಬ್ಬರ ಹೆಜ್ಜೆಗಳ ಜುಗಲ್‌ಬಂಧಿಗೆ ಸಾಕ್ಷಿಯಾಗಿ. ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ
ಯಾವಾಗ? ಏ.14, ಶನಿವಾರ ಸಂಜೆ 6.30
Related Articles
ಅಂತರಂಗ ರಂಗತಂಡದ ಹೊಸ ನಾಟಕ “ಹೊರಟು ಉಳಿದವನು’ ಪ್ರದರ್ಶನಕ್ಕೆ ಸಿದ್ಧವಾಗಿದೆ. ವೈಯಕ್ತಿಕ ಬದುಕಿನಿಂದ ವಿಮುಖನಾಗಲು ಹೊರಟ ಕಥಾನಾಯಕ ತನ್ನವರಿಂದ ದೂರವಾಗಿ ತನಗೆ ಮಾತ್ರ ಕಾಣುವ ಪಾತ್ರಗಳೊಂದಿಗೆ ಹತ್ತಿರವಾಗುತ್ತಾನೆ. ಆದೆ ಮುಂದೊಮ್ಮೆ ಮತ್ತೆ ಕುಟುಂಬವನ್ನು ಸೇರಲು ಪ್ರಯತ್ನಿಸಿದಾಗ ದ್ವಂದ್ವಗಲು ಎದುರಾಗುತ್ತವೆ. ಪ್ರಸಿದ್ಧ ಹಿಂದಿ ರಂಗ ಮತ್ತು ಸಿನಿಮಾ ಕಲಾವಿದ ಮಾನವ್ ಕೌಲ್ ರಚಿಸಿದ ಈ ನಾಟಕವನ್ನು ಕನ್ನಡಕ್ಕೆ ತಂದವರು ಜಗದೀಶ್ ಮಲಾ°ಡ್. ಅರ್ಚನಾ ಶ್ಯಾಮ್ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ.
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಯಾವಾಗ?: ಏಪ್ರಿಲ್ 20, ಸಂಜೆ 7.30
Advertisement