ಮುಂಬಯಿ: ಕಳೆದ ವರ್ಷ 99 ರೂಪಾಯಿಗೆ ಸಿನಿಮಾ ಟಿಕೆಟ್ ಮಾರಾಟ ಮಾಡಿ ʼರಾಷ್ಟ್ರೀಯ ಸಿನಿಮಾ ದಿನʼವನ್ನು ವಿಭಿನ್ನವಾಗಿ ಆಚರಿಸಿದ್ದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ವರ್ಷವೂ ಮತ್ತೆ ಅದೇ ಯೋಜನೆಯನ್ನು ಮುಂದುವೆರಸಲು ನಿರ್ಧರಿಸಿದೆ.
ಈ ವರ್ಷ ಸೆಪ್ಟೆಂಬರ್ 20 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗುವುದು ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಬುಧವಾರ(ಸೆ.18ರಂದು) ತಿಳಿಸಿದೆ.
ಈ ದಿನ ಭಾರತದಾದ್ಯಂತ ಪ್ರಮುಖ ಸಿನಿಮಾ ಚೈನ್ಸ್ ಮತ್ತು ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್‌ಗಳ ಬೆಲೆ 99 ರೂಪಾಯಿ ಇರಲಿದೆ. 4000 ಕ್ಕೂ ಹೆಚ್ಚಿನ ಸಿನಿಮಾ ಸ್ಕ್ರೀನ್ ಗಳಲ್ಲಿ 99 ರೂಪಾಯಿಗೆ ಟಿಕೆಟ್ ಮಾರಾಟವಾಗಲಿದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ.
ಪಿವಿಆರ್ ಐನಾಕ್ಸ್, ಸಿನೆಪೋಲಿಸ್, ಮಿರಾಜ್, ಸಿಟಿಪ್ರೈಡ್, ಏಷ್ಯನ್, ಮುಕ್ತಾ ಎ2,ವೇವ್, ಎಂ2ಕೆ,ಡಿಲೈಟ್, ಮೂವಿಟೈಮ್ ಸೇರಿದಂತೆ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ʼರಾಷ್ಟ್ರೀಯ ಸಿನಿಮಾʼ ದಿನದಂದು 99 ರೂಪಾಯಿಗೆ ಟಿಕೆಟ್ ಸೇಲ್ ಮಾಡಲಾಗುತ್ತದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ.
ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮತ್ತು ಆಫ್‌ಲೈನ್‌ನಲ್ಲಿಯೂ ಖರೀದಿಸಬಹುದು. ಆಸಕ್ತ ವೀಕ್ಷಕರು ಬುಕ್ ಮೈ ಶೋ, ಪೇಟಿಎಂ ನಿಂದಲೂ ಬುಕ್ ಮಾಡಬಹುದೆಂದು ತಿಳಿಸಿದೆ.
ಯಾವೆಲ್ಲಾ ಸಿನಿಮಾ ನೋಡಬಹುದು: ಈ ವರ್ಷ ಸೆ.20 ರಂದು 99 ರೂ. ಕೊಟ್ಟು ಹತ್ತಾರು ಸಿನಿಮಾಗಳನ್ನು ನೋಡಬಹುದು. ಹಾಲಿವುಡ್‌ನಿಂದʼ ಟ್ರಾನ್ಸ್ಫಾರ್ಮರ್ಸ್ ಒನ್ʼ, ʼನೆವರ್ ಲೆಟ್ ಗೋʼ ಸಿನಿಮಾಗಳು ರಿಲೀಸ್ ಆಗಲಿವೆ.
ಬಾಲಿವುಡ್ ನಲ್ಲಿ ʼಯುಧ್ರʼ,ʼಸ್ತ್ರೀ-2ʼ , ರೀ ರಿಲೀಸ್ ಆಗಿರುವ ʼತುಂಬಾಡ್ʼ, ರೀ ರಿಲೀಸ್ ಆಗಲಿರುವ ʼ ವೀರ್ ಜಾರಾʼ , ʼಕಹಾನ್ ಶುರು ಕಹಾನ್ ಖತಮ್ʼ, ʼಬಕಿಂಗ್ಹ್ಯಾಮ್ ಮರ್ಡರ್ಸ್ʼ ಸಿನಿಮಾಗಳನ್ನು ನೋಡಬಹುದು. ಮಾಲಿವುಡ್‌ನಿಂದ ʼಎಆರ್ ಎಂʼ ಸಿನಿಮಾ ವೀಕ್ಷಿಸಬಹುದು. ಕಾಲಿವುಡ್‌ನಲ್ಲಿ ಈಗಾಗಲೇ ರಿಲೀಸ್ ಆಗಿರುವ ʼಗೋಟ್ʼ ಸಿನಿಮಾವನ್ನು ಈ ದಿನ 99 ರೂ.ಕೊಟ್ಟು ವೀಕ್ಷಿಸಬಹುದು.
ಈ 99 ರೂ.ಆಫರ್ IMAX, 4DX, ಅಥವಾ ರಿಕ್ಲೈನರ್ ಸೀಟ್‌ಗಳಂತಹ ಪ್ರೀಮಿಯಂ ಫಾರ್ಮ್ಯಾಟ್‌ಗಳಿಗೆ ಆಫರ್ ಅನ್ವಯಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.