ಮುಧೋಳ: ತಾಲೂಕಿನ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರಮಟ್ಟದ ಅತ್ಯುತ್ತಮ ಗುಣಮಟ್ಟ ಪ್ರಮಾಣಪತ್ರ ದೊರೆತಿದ್ದು, ತಾಲೂಕು ಹಾಗೂ ಹಲಗಲಿ ಗ್ರಾಮದ ಹಿರಿಮೆ ಹೆಚ್ಚಿಸಿದೆ. ರಾಷ್ಟ್ರಮಟ್ಟದ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಯಲ್ಲಿನ ಸಮಗ್ರ ಕಾರ್ಯವೈಖರಿ ಮೆಚ್ಚಿ ಪ್ರಮಾಣೀಕರಿಸಿದ್ದಾರೆ.
Advertisement
ತಾಲೂಕಿನಲ್ಲಿ ಎರಡನೇ ಆಸ್ಪತ್ರೆ: ಈ ಹಿಂದೆ ಮುಧೋಳ ತಾಲೂಕಿನ ಮಳಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಈ ಪ್ರಶಂಸೆಗೆ ಪಾತ್ರವಾಗಿತ್ತು. ಅದನ್ನು ಹೊರತುಪಡಿಸಿದರೆ ಹಲಗಲಿ ಗ್ರಾಮದ ಆರೋಗ್ಯ ಕೇಂದ್ರ ಇದೀಗ ಉನ್ನತ ಮಟ್ಟದ ಸಾಧನೆಗೈದಿದೆ.
Related Articles
Advertisement
3 ವರ್ಷಗಳ ಕಾಲ ಅನುದಾನ: ರಾಷ್ಟ್ರೀಯ ಉತ್ತಮ ಗುಣಮಟ್ಟ ಹೊಂದಿದ ಆಸ್ಪತ್ರೆಗೆ ಅಭಿವೃದ್ಧಿ ಹಾಗೂ ಇನ್ನಿತರೆ ಕಾರ್ಯ ಕೆಲಸಗಳಿಗೆ ಪ್ರಮಾಣೀಕೃತಗೊಂಡ ವರ್ಷದಿಂದ 3 ವರ್ಷಗಳ ಕಾಲ ವಾರ್ಷಿಕ 300000 ರೂ. ಅನುದಾನ ದೊರೆಯಲಿದೆ. ಆದರೆ ಪ್ರತಿವರ್ಷ ರಾಜ್ಯದ ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಕಾರ್ಯವೈಖರಿ ಪರಿಶೀಲಿಸಿ ಅನುದಾನಬಿಡುಗಡೆಗೊಳಿಸುವರು. ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿರುವ ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆಯೆಂದು ಪ್ರಮಾಣೀಕೃತಗೊಂಡಿರುವುದಕ್ಕೆ ಹೆಚ್ಚಿನ ಸಂತಸ ಉಂಟಾಗಿದೆ. ಅಲ್ಲಿನ ವೈದ್ಯರು ಇದೇ ರೀತಿ ಉತ್ತಮ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಒದಗಿಸಲಿ.
*ಆರ್.ಬಿ. ತಿಮ್ಮಾಪುರ,
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆಯೆಂದು ಪ್ರಮಾಣೀಕೃತಗೊಂಡಿರುವುದು ಹೆಚ್ಚಿನ ಸಂತಸ ತಂದಿದೆ. ನಮ್ಮ ಇಲಾಖೆ ಮೇಲಧಿಕಾರಿಗಳ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಹಕಾರದಿಂದ ಆಸ್ಪತ್ರೆ ಹೆಚ್ಚು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಇದರಿಂದಾಗಿ ನಮಗೆ ಈ ಪ್ರಶಂಸೆ ದೊರೆತಿದೆ.
*ಸಚಿನ ಮಾನೆ, ಪ್ರಾಥಮಿಕ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ ■ ಗೋವಿಂದಪ್ಪ ತಳವಾರ