ಮಂಡ್ಯ: ಮೇಲುಕೋಟೆಯಲ್ಲಿ ಫೆ.18ರಿಂದ 22ರವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಕ್ಷೇತ್ರ ಜನಸಂಪರ್ಕ ಕಾರ್ಯಾ ಲಯ, ವಾರ್ತಾ ಮತ್ತು ಸಾರ್ವಜನಿಕ ಸಂ ಪರ್ಕ ಇಲಾಖೆ, ಅಹೋಬಿಲ ಮಠದ ಸಹ ಯೋಗದಲ್ಲಿ “ಯುವ ಏಕ್ ಭಾರತ್ ಶ್ರೇಷ್ಠ ಭಾರತ್’ ಶೀರ್ಷಿಕೆಯಡಿ ಶಿಬಿರ ನಡೆಯಲಿದೆ ಎಂದರು.
ಕಲೆ, ಸಂಸ್ಕೃತಿ ಪ್ರದರ್ಶನ: ಕರ್ನಾಟಕದ ಮಂಡ್ಯ, ಹಾಸನ, ಚಿಕ್ಕಮಗಳೂರು, ಮಂಗಳೂರು ಹಾಗೂ ಓರಿಸ್ಸಾ, ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಉತ್ತರಾ ಖಂಡ್, ಛತ್ತಿಸ್‌ಗಡ್, ಉತ್ತರ ಪ್ರದೇಶ, ಗುಜ ರಾತ್, ರಾಜಸ್ತಾನ, ತಮಿಳುನಾಡು, ಮಧ್ಯ ಪ್ರದೇಶದಿಂದ 250 ಯುವಜನರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಐದು ದಿನ ಸರ್ವ ಧರ್ಮ ಪ್ರಾರ್ಥನೆ, ಯೋಗ, ಶ್ರಮದಾನ, ಉಪನ್ಯಾಸ, ಸಂವಾದ, ಸಾಹಸ ಕ್ರೀಡೆ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತೆಯೇ, ಆಯಾಯ ರಾಜ್ಯದ ಯುವಜನರು ತಮ್ಮ ಕಲೆ, ಸಂಸ್ಕೃತಿಯ ಪ್ರದರ್ಶನ ನೀಡಲಿದ್ದಾರೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: 18ರಂದು ಸಂಜೆ 4ಗಂಟೆಗೆ ಪು.ತಿ.ನ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಭಾಗವಹಿ ಸಲಿದ್ದು, ನೆಹರು ಯುವ ಕೇಂದ್ರ ಸಂಘಟನೆಯ ಉಪಾಧ್ಯಕ್ಷ ವಿಷ್ಣುವರ್ಧನ್‌ರೆಡ್ಡಿ ಮಾಹಿತಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ಜಾಗೃತಿ ಜಾಥಾ: 19ರಂದು ಪ್ಲಾಸ್ಟಿಕ್ ಮುಕ್ತ ಜಾಗೃತಿ ಜಾಥಾ ,ಸಾಹಸ ಚಾರಣ, ಉಪನ್ಯಾಸ ಹಾಗೂ ಕೆ.ಆರ್.ಪೇಟೆಯಲ್ಲಿ ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 20ರಂದು ಮೈಸೂರು ಅರಮನೆ, ಕೆಆರ್‌ಎಸ್ ಬೃಂದಾವನ ವೀಕ್ಷಣೆಯಿದ್ದು, ಸಂಜೆ 5ಕ್ಕೆ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ: 21ರಂದು ಸ್ವಚ್ಛತಾ ಕಾರ್ಯಕ್ರಮ, ವಸ್ತು ಪ್ರದರ್ಶನ, ಅಕ್ಕ-ತಂಗಿ ಕೊಳ ಭೇಟಿ ಹಾಗೂ ಸಂಜೆ 5ಕ್ಕೆ ಮೇಲುಕೋಟೆಯಲ್ಲಿಯೇ ಸಾಂಸ್ಕೃತಿಕ ಕಾರ್ಯ ಕ್ರಮ, 22ರಂದು ಸಂಜೆ ಸಮಾರೋಪ ಸಮಾರಂಭವಿದ್ದು, ಆರು ಜನ ರಾಷ್ಟ್ರಪ್ರಶಸ್ತಿ ಹಾಗೂ 25 ಜನ ರಾಜ್ಯ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾ ಧಿಕಾರಿ ಅನಂತಪ್ಪ, ಜಿಲ್ಲಾ ವಾರ್ತಾಧಿಕಾರಿ ಹರೀಶ್, ಬಸವರಾಜು ಇತರರು ಇದ್ದರು.